ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕೆಂದು ಪೋಷಕರ ಒತ್ತಾಯ
ಬಾಗೇಪಲ್ಲಿ : ಮಳೆ ಬಂದಾಗಲೆಲ್ಲ ಮೇಲ್ಛಾವಣಿ ಕಡೆ ಕಣ್ಣಾಡಿಸಿ, ನೀರನ್ನು ಹೊರ ತಳ್ಳಲು ಅಂಗನವಾಡಿ ಕೇಂದ್ರದ ಸಿಬ್ಬಂದಿ ಸಿದ್ಧವಾಗಿರಬೇಕು. ಹಾಗೇಯೇ ಮಕ್ಕಳನ್ನು ಮನೆಗಳಿಗೆ ಕಳುಹಿಸುವುದು ಇಲ್ಲವೇ ಶಾಲಾವರಣಕ್ಕೆ ಕರೆದು ಕೊಂಡು ಹೋಗುವಂತಹ ದುಸ್ಥಿತಿ ಎದುರಿಸಲಾಗುತ್ತಿದೆ.
ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದ ಅಂಗನವಾಡಿ ಕೇಂದ್ರವು ಸೋರು ತ್ತಿದೆ. ಇದರಿಂದಾಗಿ ಅಲ್ಲಿನ ಮಕ್ಕಳ ಆತಂಕದಲ್ಲೆ ದಿನದೂಡುವಂತಾಗಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸತತವಾಗಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳೆಯ ಕೊಠಡಿಗಳು ಸೋರುತ್ತಿದ್ದು, ದುರಸ್ತಿಗಾಗಿ ಕಾದಿವೆ. ಇನ್ನು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಪೋಟೋ ಕ್ಲಿಕ್ಕಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಅಂಗನವಾಡಿ ಕೇಂದ್ರದ ಮೇಲ್ಛಾವಣಿಯು ಕಲ್ಲು ಚಪ್ಪಡಿಗಳಿಂದ ನಿರ್ಮಿಸಿದ್ದು,ಬಿರುಕುಗಳಲ್ಲಿ ಒಂದೇ ಸಮನೇ ನೀರು ಸೋರುತ್ತಿ ರುತ್ತದೆ. ಕೊಠಡಿಯೊಳಗಿನ ನೆಲಹಾಸು ಸಂಪೂರ್ಣ ತೇವದಿಂದ ಒಮ್ಮೊಮ್ಮೆ ನೀರಿನಿಂದ ತುಂಬುತ್ತದೆ. ಇದರಿಂದಾಗಿ ಪುಟಾಣಿ ಮಕ್ಕಳು ಕೂರಲೂ ಆಗದೇ, ಮೇಲ್ಛಾವಣಿ ಕುಸಿದು ಬೀಳುವ ಆತಂಕದಲ್ಲಿ ದಿನ ಕಳೆಯು ವಂತಾಗಿದೆ.
ಅದೇ ರೀತಿ ಮಳೆ ಬಂದಾಗಲೆಲ್ಲ ಮಕ್ಕಳಿಗೆ ವಿತರಿಸುವ ಹಾಗೂ ಅಡುಗೆ ತಯಾರಿಸುವ ಅಕ್ಕಿ,ಬೇಳೆಯಂತಹ ಆಹಾರ ಪದಾರ್ಥಗಳು ಮಳೆ ನೀರಿನಿಂದ ನೆನೆದು ಹಾಳಾಗುತ್ತಿರುತ್ತವೆ. ಇಂತಹ ನಿತ್ಯ ಸವಾಲುಗಳಿಂದ ಅಂಗನವಾಡಿ ಕೇಂದ್ರ ನಡೆಯಬೇಕಿದೆ. ಹಾಗಾಗಿ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
*
ಕೃಷ್ಣಾಪುರ ಗ್ರಾಮದ ಅಂಗನವಾಡಿ ಕೇಂದ್ರ ಸೋರುತ್ತಿರುವ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದೆ, ಪರಿಶೀಲಿಸಿದ್ದು, ಕೂಡಲೇ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
-ರಾಮಚಂದ್ರ,ಸಿಡಿಪಿಓ ,ಬಾಗೇಪಲ್ಲಿ
ನಮ್ಮೂರಿಗೆ ಸುಸಜ್ಜಿತ ಅಂಗನವಾಡಿ ಕಟ್ಟಡದ ಅವಶ್ಯಕತೆ ಇದ್ದು, ಈಗಿನ ಚಪ್ಪಡಿಕಲ್ಲಿನ ಕಟ್ಟಡವು ಸೋರಿ,ಆತಂಕವನ್ನು ಸೃಷ್ಟಿಸುತ್ತಿದೆ. ಸಂಬಂಧಪಟ್ಟವರು ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿ ವಿನಂತಿ.
– ನಾಗರಾಜ,ಕೃಷ್ಣಾಪುರ ಗ್ರಾಮಸ್ಥ
ಇದನ್ನೂ ಓದಿ: Lakshmi Hebbalkar: ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್