Friday, 22nd November 2024

ನನ್ನ ಆಯ್ಕೆ ನೀವು ಮಾಡಿ, ನಾನು ನಿಮ್ಮೆಲ್ಲರ ಧ್ವನಿಯಾಗಲಿದ್ದೇನೆ: ಅಂಜಲಿ ಲಿಂಬಾಳ್ಕರ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಲೋಕಸಭಾ ಕಾರ್ಯಕರ್ತರ ಸಭೆ ಬುಧವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಲಿಂಬಾಳ್ಕರ ಮಾತನಾಡಿ, ಇದು ಯಾವುದೇ ಧರ್ಮ, ಪಕ್ಷದ ಚುನಾವಣೆಯಲ್ಲ, ಜಾತಿಯ ಚುನಾವಣೆಯಲ್ಲ. ಇದು ಮಹಿಳೆಯರ ಸಮಾನತೆ ನೀಡುವ, ಬಡವರಿಗೆ ಧ್ವನಿಯಾಗುವ ಚುನಾವಣೆ ಇದಾಗಿದೆ. ಪ್ರತಿಯೊಬ್ಬ ರಿಗೂ ನ್ಯಾಯ ಸಿಗಬೇಕಿದೆ. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಮತ್ತೆ ಐದು ಗ್ಯರಂಟಿಯನ್ನು‌ನಾವು ನಿಮಗೆ ನೀಡುತ್ತೇವೆ ಎಂದ ಅವರು, 8 ಕ್ಷೇತ್ರದ ಜನರ ಆಶೀರ್ವಾದ ಬೇಕಿದೆ. ಇದು ಯಾವ ಜಿಲ್ಲೆ ಎನ್ನುವ ಯಾವ ಅಪಪ್ರಚಾರವೂ ಬೇಕಿಲ್ಲ ಇಲ್ಲಿಯ ಅಭ್ಯರ್ಥಿಯೂ ಅಲ್ಲಿಗೆ ಹೋಗುತ್ತಾರೆ ಯಾವ ಸುಳ್ಳಿಗೂ ನೀವು ಕಿವಿಗೊಡಬೇಡಿ ನನ್ನ ಆಯ್ಕೆ ನೀವು ಮಾಡಿ ನಾನು ನಿಮ್ಮೆಲ್ಲರ ಧ್ವನಿಯಾಗಲಿದ್ದೇನೆ ಎಂದರು.

ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೆಶಪಾಂಡೆ ಮಾತನಾಡಿ, ಅಭವೃದ್ಧಿಯ ದೃಷ್ಟಿಯಿಂದ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ನೀವು ನಮ್ಮ ಸಿಪಾಯಿಗಳು. ನೀವು ಪ್ರತೀ ಪಂಚಾಯಿತಿಯ, ಊರಿನ ಪ್ರತಿನಿಧಿಗಳು. ಮನೆ ಮನೆಗೆ ಅಂಜಲಿಯ ಪರ ನಿಲುವು ಆಗಬೇಕು. ಗ್ಯಾರಂಟಿ ಮೂಲಕ ನಿಮಗೆ ಬೇಕಿದ್ದನ್ನು ನಾವು ನೀಡಿದ್ದೇವೆ ನಮಗೆ ಬೇಕಿದ್ದು ನಿಮ್ಮ ಬೆಂಬಲ ಅದನ್ನು ನೀಡಿ, ಅಂಜಲಿ ಆಯ್ಕೆಗೆಯ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಣುವಂತೆ ತಿಳಿಸಿದರು.

ಸಚಿವ ಮಂಕಾಳ ವೈದ್ಯ ಮಾತನಾಡಿ, ಬಿಜೆಪಿಯವರು ಸುಳ್ಳಿಹೇಳುವುದನ್ನು ಬಿಟ್ಟರೆ ಇನ್ನೇನು ಮಾಡಿದ ಉದಾಹರಣೆಗಳಿಲ್ಲ. ನಾವು ಅಭಿವೃದ್ಧಿಗೆ ಇರುವವರಲ್ಲ. ಅದು ಆಗುತ್ತದೆ ಎಂದು ಹೇಳಿ ಉತ್ತರ ಕನ್ನಡ ಜಿಲ್ಲೆಯನ್ನು ಈ ಸ್ಥಿತಿಗೆ ತಂದಿದ್ದಾರೆ.
ಪ್ರತಿಯೊಬ್ಬ ಕಾರ್ಯಕರ್ತರಿಂದಲೂ ಸುಳ್ಳು ಹೇಳುವುದೇ ಆಗಿದೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿಯೂ ಸಮಸ್ಯೆಗಳಿವೆ. ಜಿಲ್ಲೆಯ ಪ್ರತಿನಿಧಿಯಾಗಿ ಜಿಲ್ಲೆಯ ಬಗ್ಗೆ ಮಾತೆತ್ತದ ಸಂಸದರು ಬಿಜೆಪಿಗರು ನಮಗೆ ಬೇಕಾಗಿಲ್ಲ. ನಾವು ಹೇಳಿದ್ದನ್ನು ಮಾಡಿ ನಿಮ್ಮಲ್ಲಿಗೆ ಬಂದಿದ್ದೇವೆ. ನುಡಿದಂತೆ ನಡೆದಿದ್ದೇವೆ.

ನಾವು ಈಗಾಗಲೇ ಮೂವತ್ತು ವರ್ಷವನ್ನು ಕಳೆದುಕೊಂಡಿದ್ದೇವೆ. ಈ ತಪ್ಪನ್ನು ಮತ್ತೆ ನೀವು ಮಾಡಬೇಡಿ ಎಂದ ಅವರು,
ಕಾಂಗ್ರೆಸ್ ನಲ್ಲಿ ನಾವು ಒಟ್ಟಾಗಿದ್ದೇವೆ. ಗೆದ್ದೇ ಗೆಲ್ತೇವೆ ಎಂದರು. ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ದೇಶದ ಸರ್ವಧರ್ಮದ ಸಮಯನ್ವತೆ ಕೊಡಬೇಕಿದೆ. ಆದರೆ ಕೇಂದ್ರ ಸರಕಾರ ಆ ಕಾರ್ಯ ಮಾಡುತ್ತಿಲ್ಲ. ಅಧಿಕಾರದ ದಾಹಕ್ಕಾಗಿ ಕೇಂದ್ರ ಸರಕಾರ ಬಿಜೆಪಿ ಸುಳ್ಳು ಹೇಳುತ್ತಿದೆ. ಎಲ್ಲರನ್ನೂ ಸರಿ ಸಮಾನತೆಯಿಂದ ಕಾಂಗ್ರೆಸ್‌ನೋಡುತ್ತಿದೆ ಎಂದರು. ಆರ್ಥಿಕವಾಗಿ ಹಿಂದುಳಿದವರಿಗೆ ಸಮಾನತೆ ಕೊಡುವ ನಿಟ್ಟಿನಲ್ಲಿ ನಾವು ಕಾರ್ಯ ಮಾಡಿದ್ದೇವೆ. ಗ್ಯಾರಂಟಿ ಮೂಲಕ ಜನರ ಮನ ತಲುಪುತ್ತೇನೆ. ನಾನು ಆಯ್ಕೆಯಾದಕ್ಕಿಂತ ಹೆಚ್ಚಿನ ಮತಗಳನ್ನು ಲೋಕಸಭಾ ಅಭ್ಯರ್ಥಿ ಅವರಿಗೆ ಕೊಡಿಸಿ ಗೆಲ್ಲುವ ಕಾರ್ಯ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಾಯಿಗೌಂವ್ಕರ್ ಸೇರಿದಂತೆ ಹಲವು ಕಾಂಗ್ರೆಸ್‌ಮುಖಂಡರು ಇದ್ದರು. ಇದಕ್ಕೂ ಮುನ್ನ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ವಾರ್ ರೂಂ ಅನ್ನು ಉದ್ಘಾಟಿಸಲಾಯಿತು