Saturday, 14th December 2024

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ: ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಗದಗ: ಜಿಲ್ಲೆಯ ವಿವಿಧೆಡೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುವಾಗ ಪೊಲೀಸರು ದಾಳಿ‌ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು 12.88 ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಹಾಗೂ 6.50 ಲಕ್ಷ ರೂಪಾಯಿ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಗದಗ ಗ್ರಾಮೀಣ, ಬೆಟಗೇರಿ‌ ಬಡಾವಣೆ, ಬೆಟಗೇರಿ ಮತ್ತು ನರಗುಂದ ಪೊಲೀಸ್ ಠಾಣೆಗಳಲ್ಲಿ‌ ಪ್ರಕರಣ ದಾಖಲಾಗಿವೆ.