Sunday, 15th December 2024

ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಕೊಲೆ

ಮೈಸೂರು: ಸಿದ್ಧಾರ್ಥನಗರ ಸಮೀಪ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (90) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಆರೋಪಿ ರವಿ (60) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆತ, ಸ್ವಾಮೀಜಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆಸ್ತಿ ವಿಚಾರದಲ್ಲಿ ಇದ್ದ ತಕರಾರು ಕಾರಣ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ನಜರ್‌ಬಾದ್‌ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.