Sunday, 15th December 2024

ಸಾವಿರಾರು ಕುಟುಂಬಗಳಿಗೆ ಉದ್ಯೋಗ ಕೊಟ್ಟ ಅನ್ನದಾತ ಬಸವನಗೌಡ ಪಾಟೀಲ

ಇಂಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇವಲ ಶಾಸಕರಷ್ಟೇ ಅಲ್ಲ,ಹಿಂದೂ ರ‍್ಮ,ಸಂಸ್ಕೃತಿಯ ರಕ್ಷಕರು.ಸಿದ್ದಸಿರಿ ಸೌಹರ‍್ದ ಬ್ಯಾಂಕ ಸ್ಥಾಪಿಸಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟ ಉದ್ಯೋಗದಾತರು ಎಂದು ಸಿದ್ದಸಿರಿ ಸೌಹರ‍್ದ ಸಹಕಾರಿ ಬ್ಯಾಂಕಿನ ನಿರ್ದೆಶಕ ಜಗದೀಶ ಕ್ಷತ್ರಿ ಹೇಳಿದರು.

ಅವರು ವಿಜಯಪುರ ನಗರ ಶಾಸಕ,ಹಿಂದು ಹುಲಿ ಬಸನಗೌಡ ಪಾಟೀಲ ಯತ್ನಾಳ ಅವರ ಜನ್ಮದಿನ ನಿಮಿತ್ಯ ಸಿದ್ದಸಿರಿ ಸಹಕಾರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿ ಹಾಗೂ ಸಿಬ್ಬಂದಿ ಅವರ ವತಿಯಿಂದ ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ,ಅಕ್ಕಪೂಜೆ ಸಲ್ಲಿಸಿ ಶುಭ ಕೋರಿ ಮಾತನಾಡಿದರು.

ಬಸನಗೌಡ ಪಾಟೀಲ ಯತ್ನಾಳ ಅವರು ರ‍್ಮ ರಕ್ಷಣೆಯ ಜೊತೆಗೆ ಗೋ ರಕ್ಷಣೆ ಕೆಲಸವೂ ಮಾಡುತ್ತಿದ್ದಾರೆ.ಗೋವಿಗೆ ಹಿಂದೂ ರ‍್ಮದಲ್ಲಿ ಪೂಜ್ಯನೀಯ ಭಾವನೆ ಇದೆ. ಗೋಶಾಲೆಗಳನ್ನು ತೆರೆದು ಗೋ ಸಂತತಿ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಅಷ್ಠೆ ಸಿಮೀತವಲ್ಲದೆ ಸಾಮಾಜಿಕ, ರಾಜಕೀಯ,ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ನೂರಾರು ರ‍್ಷ ಭಗವಂತ ಅವರಿಗೆ ಅಯುಷ್ಯ ನೀಡಲಿ,ಸಮಾಜ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ ಎಂದು ಶುಭ ಹಾರೈಸಿದರು.

ಗುರುಗೌಡ ಬಿರಾದಾರ,ರವಿಕಾತ ಪಾಟೀಲ ಸೇರಿದಂತೆ ಬ್ಯಾಂಕ ಸಿಬ್ಬಂದಿ ಈ ಸಂರ‍್ಭದಲ್ಲಿ ಇದ್ದರು.