Sunday, 15th December 2024

ಜಮೀನು ವಿಚಾರ: ನಟಿ ಅನುಗೌಡ ಮೇಲೆ ಮಾರಣಾಂತಿಕ ಹಲ್ಲೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನುಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ.

ಅನುಗೌಡ ತಮ್ಮ ತಂದೆ-ತಾಯಿ ಜೊತೆ ಕಾಸ್ಪಾಡಿಯಲ್ಲಿ ಜಮೀನು ನೋಡಲು ಬೆಂಗಳೂರಿನಿಂದ ಆಗಮಿಸಿದ್ದರು.

ಜಮೀನು ವಿಚಾರವಾಗಿ ನೀಲಮ್ಮ ಹಾಗೂ ಮೋಹನ್ ಎಂಬವರಿಂದ ಗಲಾಟೆ ನಡೆ ದಿದ್ದು, ನಟಿ ಮೇಲೆ ಇಬ್ಬರೂ ಮಾರ ಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಾಯಗೊಂಡಿರುವ ಅನುಗೌಡ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೋಹನ್ ಹಾಗೂ ಆತನ ತಾಯಿ ನೀಲಮ್ಮ ವಿರುದ್ಧ ಸಾಗರ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.