Saturday, 14th December 2024

ಟಾಟಾ ಮೋಟರ್ಸ್ ನ ವಾಣಿಜ್ಯ ವಾಹನಗಳ ದರ ಹೆಚ್ಚಳ: ಏಪ್ರಿಲ್ 1 ರಿಂದ ಜಾರಿ

ಬೆಂಗಳೂರು: ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಶೇ.2 ರವರೆಗೆ ಹೆಚ್ಚಳ ಮಾಡಿದೆ.

ಈ ಪರಿಷ್ಕೃತ ದರಗಳು 1 ಏಪ್ರಿಲ್ 2024 ರಿಂದ ಜಾರಿಗೆ ಬರಲಿವೆ. ಇನ್ಪುಟ್ ವೆಚ್ಚದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಟಾಟಾ ಮೋಟರ್ಸ್ ಈ ದರ ಪರಿಷ್ಕರಣೆ ಮಾಡಿದೆ. ಈ ದರ ಪರಿಷ್ಕರಣೆಯು ವಾಹನಗಳ ಒಂದೊಂದು ಮಾಡೆಲ್ ಮತ್ತು ವೇರಿಯೆಂಟ್ ಗಳಿಗೆ ವ್ಯತ್ಯಾಸವಾಗಿರುತ್ತದೆ. ಈ ದರ ಪರಿಷ್ಕರಣೆಯು ಎಲ್ಲಾ ಶ್ರೇಣಿಯ ವಾಣಿಜ್ಯ ವಾಹನಗಳಿಗೆ ಅನ್ವಯವಾಗುತ್ತದೆ.