Wednesday, 11th December 2024

ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ…

ಮೊದಲ ದಿನವೇ ರಾಯರಿಗೆ ಶೇಷವಸ್ತ್ರ ಸಮರ್ಪಣೆ ಈ ಬಾರಿಯ ವೈಶಿಷ್ಟ್ಯ

ರಾಯಚೂರು : ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಈ ಬಾರಿಯ ವಿಶೇಷ ಕಳೆ ಎಂದರೆ ತಿರುಪತಿ ತಿರುಮಲ ದೇವಸ್ಥಾನದಿಂದ ಸಾಂಪ್ರದಾಯಿಕವಾಗಿ ಶೇಷ ವಸ್ತ್ರ, ಆರಾಧನಾ ಮಹೋತ್ಸವದ ಮೊದಲ ದಿನವೇ ಶೇಷವಸ್ತ್ರ ಆಗಮಿಸಿರುವುದು ವಿಶೇಷವಾಗಿದ್ದು, ತಿರುಮಲ ತಿರುಪತಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಶಾಮಲರಾವ್ ಅವರು ತಿರುಪತಿ ಯಿಂದ ತಂದಿರುವ ಪ್ರಸಾದ ರೂಪದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲು ತಂದಿದ್ದರು.

ಶ್ರೀಮಠದ ವತಿಯಿಂದ ಶೇಷವಸ್ತ್ರ ಸಮೇತರಾಗಿ ಆಗಮಿಸಿದ್ದ ಟಿಟಿಡಿಯ, ಕಾರ್ಯನಿವಾಹಕ ಅಧಿಕಾರಿಯನ್ನು ಶ್ರೀಮಠದ ಮುಖ್ಯ ದ್ವಾರದಿಂದ ಶ್ರೀಮಠದ ಪೀಠಾಪತಿ ಶ್ರೀ ಸುಬುಧೇಂದ್ರ ತೀರ್ಥರು ಸಕಲ ಮಂಗಳವಾದ್ಯದೊಂದಿಗೆ ಸ್ವಾಗತಿಸಿದರು. ನಂತರ ಶ್ರೀಗಳು ಶ್ರೀಮಠದ ಮುಖ್ಯ ದ್ವಾರದಿಂದ ಶೇಷವಸ್ತ್ರವನ್ನು ತಲೆಮೇಲೆ ಹೊತ್ತುಕೊಂಡು ಬಂದು ರಾಯರಿಗೆ ಸಮರ್ಪಿಸಿದರು. ನಂತರ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ಶಾಮಲರಾವ್ ದಂಪತಿಗಳಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿ ಫಲಪುಪ್ಪ, ಪರಿಮಳ ಪ್ರಸಾದ ನೀಡಿ ಗೌರವಿಸಿದರು.

ಶ್ರೀಗಳಿಂದ ಭಕ್ತರಿಗೆ ಆಶೀರ್ವಚನ : ತಿರುಪತಿ ಮತ್ತು ಮಂತ್ರಾಲಯದ ನಡುವೆ ಶತ ಶತಮಾನಗಳಿಂದ ಅವಿನಾಭಾವ ಸಂಬಂಧ ಇದೆ.ಪ್ರತಿ ವರ್ಷ ರಾಯರ ಆರಾಧನಾ ಸಂದರ್ಭದಲ್ಲಿ ತಿರುಪತಿ ತಿರುಮಲ ದೇವಸ್ಥಾನದಿಂದ ಪೂರ್ವಾರಾಧನೆ ಅಥವಾ ಮಧ್ಯಾರಾದನೆ ದಿನದಂದು ಶೇಷವಸ್ತ ಅಗಮಿಸುತ್ತಿತ್ತು.ಆದರೆ ಈ ಬಾರಿ ಆರಾಧನೆ ಮೊದಲ ದಿನವೇ ಭಗ್ನತ್ ಧ್ವಜಾರೋಹಣ ದಿನದಂದೇ ಆಗಮಿಸಿದ್ದು, ವೈಶಿಷವಾಗಿದೆ, ಇದು ತಿರುಪತಿ ತಿಮ್ಮಪ್ಪನ ಆಶೀರ್ವಾದ ಅವರ ಅಂತರಗದ ಭಕ್ತ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ದೊರೆತ ಆಶೀರ್ವಾದ ಎಂದು ಭಾವಿಸುತ್ತೇವೆ ಎಂದರು.

ತಿರುಪತಿಯಲ್ಲಿ ರಾಘವೇಂದ್ರ ಸ್ವಾಮಿ ಮಠಕ್ಕೆ ನಿವೇಶನ ನೀಡಿದ್ದು, ಶ್ರೀಮಠ ಅಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದು, ಈಗ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚಂದ್ರಬಾಬು ನಾಯ್ಡು ನೇತೃತ್ವದ ಸರಕಾರ ಈ ಹಿಂದೆಯೇ ಶ್ರೀಮಠಕ್ಕೆ ಮತ್ತೊಂದು ನಿವೇಶನ ನೀಡಿದ್ದು, ಅಲ್ಲಿ ಸಭಾಭವನೆ ನಿರ್ಮಿಸಲಾಗುತ್ತಿದೆ ಎಂದರು.

ಈಗ ತಿರುಪತಿ ಮತ್ತು ಮಂತ್ರಾಲಯ ನಡುವೆ ಧಾರ್ಮಿಕ,ಸಾಂಸ್ಕೃತಿಕ ಸಂಬಅಧಗಳು ಮತ್ತಷ್ಟು ಗಟ್ಟಿಗೊಳ್ಳುತ್ತಿದ್ದು, ಟಿಟಿಡಿಯ ನೂತನ ಕಾರ್ಯ ನಿರ್ವಾಹಕ ಅಕಾರಿ ಶಾಮಲರಾವ್ ಇಂದು ಪ್ರಥಮ ಬಾರಿಗೆ ಶೇಷವಸ್ತ್ರ ಸಮೇತರಾಗಿ ಆಗಮಿಸಿ ರಾಯರ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ. ಅವರು ಪತ್ನಿ ಸಮೇತರಾಗಿ ಆಗಮಿಸಿದ್ದು, ಸಂತಸದ ಸಂಗತಿ ಎಂದು ಶ್ರೀಗಳು ದಂಪತಿಗಳಿಗೆ ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ್ ರಾವ್ , ವೆಂಕಟೇಶ್ ಜೋಶಿ, ಐಪಿ ನರಸಿಂಹ,ವಾದಿರಾಜ ಆಚಾರ್ಯ ಸೇರಿದಂತೆ ಶ್ರೀಮಠದ ಅಧಿಕಾರಿಗಳು ಮತ್ತು ಭಕ್ತರು ಇದ್ದರು.