Thursday, 19th September 2024

ಅಡಿಕೆ ತಟ್ಟೆ ತಯಾರಿಕರ ಅಭಿವೃದ್ಧಿಗೆ ಜಿಯೋ ಟ್ಯಾಗ್ ಅಗತ್ಯ

ಗುಬ್ಬಿ : ಅಡಿಕೆ ತಟ್ಟೆ ತಯಾರಿಕರ ಅಭಿವೃದ್ಧಿಗೆ ಜಿಯೋ ಟ್ಯಾಗ್ ಅಗತ್ಯ ಎಂದು ಅಡಿಕೆ ತಟ್ಟೆ ತಯಾರಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಎಸ್ ಕೆ ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಇಸ್ಲಾಂಪುರ ಗೇಟಿನ ಬಳಿ ಅಡಿಕೆ ತಟ್ಟೆ ತಯಾರಕರ ಅಭಿವೃದ್ಧಿ ಸಂಘದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರ ಅಧಿಕೃತ ಅಡಿಕೆ ತಟ್ಟೆ ತಯಾರಿಕ ಘಟಕಗಳಿದ್ದು, ಅನೇಕ ಕುಟುಂಬಗಳು ಇದನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ.
ಅಡಿಕೆ ಹಾಳೆಯನ್ನು ಸಾಗಾಟ ಮಾಡುವವರಿಗೂ ಸಹ ಯಾವುದೇ ರಕ್ಷಣೆ ವಿಮೆಗಳು ಲಭ್ಯ ವಿಲ್ಲದಂತಾಗಿದೆ ಜಿಯೋ ಟ್ಯಾಗ್ ವ್ಯವಸ್ಥೆಯಿಂದ ಅನೇಕ ರಾಜ್ಯ ಮತ್ತು ರಾಷ್ಟ್ರ ಗಳಿಂದ ಉತ್ತಮ ಬೆಲೆಗೆ ಕೊಂಡುಕೊಳ್ಳುವುದರ ಜೊತೆಗೆ ವೈಜ್ಞಾನಿಕವಾಗಿ ಪರೀಕ್ಷಿಸಿದ ಪರಿಸರ ಸ್ನೇಹಿ ಗುಣಮಟ್ಟದ ಉತ್ಪನ್ನಗಳನ್ನು ಕೊಡಬಹುದು.
ಸಂಘದ ವತಿಯಿಂದ ಉತ್ಪಾದಕರ ಅನಾನುಕೂಲಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಂಘದ ವತಿಯಿಂದ ವಿಶಾಲವಾದ ಜಾಗ ಖರೀದಿಸಿ ಉತ್ಪನ್ನ ಗಳನ್ನು ಶೇಖರಿಸಿ ಉತ್ತಮ ಬೆಲೆಗೆ ಮಾರಾಟ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಗೌರವಾಧ್ಯಕ್ಷ ರಮೇಶ್ ಮಾತನಾಡಿ, ಏಷ್ಯಾದಲ್ಲಿಯೇ ಕರ್ನಾಟಕ ಅಡಿಕೆ ಬೆಳೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಅನ್ಯ ರಾಜ್ಯಗಳಿಗೆ ಜಿಯೋ ಟ್ಯಾಗ್ ವ್ಯವಸ್ತೆಯನ್ನು ಒದಗಿಸಿಕೊಡಲು ಸರ್ಕಾರ ಮುಂದಾಗಬಾರದು ಪ್ರತಿಯೊಂದಕ್ಕೂ ಬಳಕೆಯಾಗುವ ಅಡಿಕೆ ಬೆಳೆಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು ತಯಾರಿಕರಿಗೆ ಹಾಗೂ ಮಾರಾಟಗಾರರಿಗೆ ಸಂಘ ಸಹಕಾರಿಯಾಗಲಿದೆ ಎಂದರು.
ರಘು ಪೂಜಾರ್ ಮಾತನಾಡಿ ಗ್ರಾಮೀಣ ಭಾಗದ ಜನರು ಕಿರು ಉದ್ದಿಮೆ ಘಟಕಗಳನ್ನು ನಿರ್ಮಿಸಿಕೊಂಡು ಹೆಚ್ಚು ಅವಲಂಬಿತ ರಾಗಿದ್ದಾರೆ. ಪ್ಲಾಸ್ಟಿಕ್ ಮುಕ್ತ ಮಾಡಲು ಸರ್ಕಾರದ ಜೊತೆ ಕೈಜೋಡಿಸಿದ್ದಾರೆ ಹೆಚ್ಚು ಸಾಲ  ಹಾಗೂ ವಿಮಾ ಸೌಲಭ್ಯಗಳು ಸಿಗು ವಂತಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ್, ಅಮಿತ್, ಚಂದ್ರಶೇಖರ್, ಕಿಶೋರ್, ನಾಗೇಶ್, ಅನಿಲ್ ಕುಮಾರ್, ಶೋಭ ರಾಣಿ ಹಾಗೂ ಅಡಿಕೆ ತಟ್ಟೆ ತಯಾರಿಕ ಮಾಲೀಕರು ಉಪಸ್ಥಿತರಿದ್ದರು.

Read E-Paper click here