Sunday, 27th October 2024

ಆರೋಗ್ಯ ರಕ್ಷಾ ಕಾರ‍್ಯಕ್ರಮವು ಉತ್ತಮ ಕಾರ‍್ಯಕ್ರಮ: ಡಾ.ನವೀನ್

ಚಿಕ್ಕನಾಯಕನಹಳ್ಳಿ : ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರೋಗ್ಯ ರಕ್ಷಾ ಕರ‍್ಯಕ್ರಮವು ಉತ್ತಮ ಕಾರ‍್ಯಕ್ರಮ ವಾಗಿದ್ದು, ಕೇವಲ ರೂ.೧೦೦/- ಗೆ ಉಚಿತ ಆರೋಗ್ಯ ಸೌಲಭ್ಯ ನೀಡುವಂತ ಕರ‍್ಯಕ್ರಮಗಳು ಕರ‍್ಮಸ್ಥಳದ ಯೋಜನೆಯಿಂದ ಮಾತ್ರ ಸಾಧ್ಯ ” ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ|| ನವೀನ್ ಹೇಳಿದರು.

ಪಟ್ಟಣದ ಯೋಜನಾ ಕಚೇರಿಯಲ್ಲಿ ೪೯ ಮಂದಿ ಸದಸ್ಯರಿಗೆ ಮಂಜೂರುಗೊಂಡ ರೂ.೩,೯೪,೦೦೦/- ಮೊತ್ತದ ಅರೋಗ್ಯ ಸೌಲಭ್ಯದ ಚೆಕ್ ನ್ನು ವಿತರಣೆ ಮಾಡಿ ಈ ವಿಚಾರ ಹೇಳಿದರು. ಕೋವಿಡ್ ಸಂರ‍್ಭದಲ್ಲಿ ರ‍್ಮಸ್ಥಳದ ಯೋಜನೆಯು ಅನೇಕರಿಗೆ ಬೇರೆ ಬೇರೆ ರೀತಿಯ ಸೌಲಭ್ಯ ಒದಗಿಸಿದ್ದು ಇದು ಎಲ್ಲರಿಗೂ ಮಾದರಿ ಕರ‍್ಯಕ್ರಮ” ಎಂದು ಹೇಳಿದರು. ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಪಾಂಡುರಂಗಯ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಈ ರ‍್ಷ ದ ಅರೋಗ್ಯ ರಕ್ಷಾ ಕಾರ್ಡ್ಗ ವಿತರಣೆ ಮಾಡಿ ಕಾರ‍್ಯ ಕ್ರಮಕ್ಕೆ ಶುಭ ಹಾರೈಸಿದರು.

ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಮಾತನಾಡಿ ಕಳೆದ ರ‍್ಥಿಕ ರ‍್ಷದಲ್ಲಿ ನಮ್ಮ ಯೋಜನೆಯ ಸುಮಾರು ೨೨೦೦೦ ಕ್ಕಿಂತ ಹೆಚ್ಚಿನ ಸದಸ್ಯರು ಅರೋಗ್ಯ ರಕ್ಷಾ ಕರ‍್ಡನ್ನು ಮಾಡಿದ್ದು, ಕೆಲವೇ ಸದಸ್ಯರು ರೂ. ೧೦೦೦೦/- ಉಚಿತ ಆರೋಗ್ಯ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಈ ರ‍್ಷವೂ ಕೇವಲ ರೂ.೧೦೦/- ರೂಪಾಯಿಗೆ ಸಂಘಗಳ ಸದಸ್ಯರು ಹಾಗೂ ಅವರ ನಾಮಿನಿದಾರರಿಗೆ ರೂ.೨೦೦೦೦/- ಸೌಲಭ್ಯ ಸಿಗಲಿದ್ದು, ಆರೋಗ್ಯ ಸಮಸ್ಯೆ ಆದಾಗ ಇದರ ಸದುಪ ಯೋಗ ಪಡೆದುಕೊಳ್ಳಬಹುದು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರೋಗ್ಯ ಇಲಾಖೆಯ ಶ್ರೀ ನಿರೂಪ್ ರಾವತ್ ಬಸವೇಶ್ವರ ನಗರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರಜನಿ ಉಪಸ್ಥಿತರಿದ್ದರು. ಕಚೇರಿಯ ಹಣಕಾಸು ಪ್ರಬಂಧಕರಾದ ತರ‍್ಥ ಪ್ರಸಾದ್ ಸ್ವಾಗತಿಸಿದರು, ಮೇಲ್ವಿಚಾರಕರಾದ ಭಾಸ್ಕರ್ ಕರ‍್ಯಕ್ರಮ ನಿರೂಪಿಸಿ, ವಂದಿಸಿದರು.