ಮಧುಗಿರಿ: ಬೇಟೆಯಾಡಲು ಬಂದಾಗ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿ ಪರಾರಿಯಾಗಿದ್ದ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಿಗೇನ ಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ತಿಂಗಳೂರು-ಯಾಕರ‍್ಲಹಳ್ಳಿ ರಸ್ತೆಯಲ್ಲಿ ಪಕ್ಕದ ಗೌರಿಬಿದ ನೂರು ತಾಲ್ಲೂಕಿನ ಹೊಸೂರು ಹೋಬಳಿ ರಮಾಪುರದ ಚಲಪತಿ, ಶಿವಕುಮಾರ್, ನಾಗೇಶ್ ಸುದೀಪ್ ಎಂಬ ನಾಲ್ವರು ಮೊಲದ ಭೇಟೆಯಾಡಲು ಬಂದಿದ್ದರು. ಈ ಹಿಂದೆ ಚಲಪತಿ ಮತ್ತು ಸುದೀಪ್ ನಡುವೆ ಮೊಲದ ವಿಚಾರದಲ್ಲಿ ಗಲಾಟೆಯಾಗಿ ಹಳೆ ವೈಷಮ್ಯ ಬೆಳೆದಿತ್ತು ಎನ್ನಲಾಗಿದೆ.
ಮತ್ತೆ ಬೇಟೆಯಾಡಲು ಹೋಗುವ ನೆಪ ಕಟ್ಟಿದ್ದ ಚಲಪತಿ ಮಧುಗಿರಿ ತಾಲ್ಲೂಕಿನ ಗಡಿಭಾಗದ ಕೊಡಿಗೇನಹಳ್ಳಿಯ ತಿಂಗಳೂರು ಸಮೀಪದಲ್ಲಿ ಬೇಟೆಯಾಡಲು ಬಂದ ವೇಳೆ ಕೊಲೆ ಮಾಡಿ ಅಪಘಾತ ಮಾಡಿದಂತೆ ಮೃತ ದೇಹವನ್ನು ಎಸೆದು ಪರಾರಿಯಾ ಗಿದ್ದರು. ಕೊಡಿಗೇನಹಳ್ಳಿ ಠಾಣೆಯಲ್ಲಿ 304 ಕಾಯ್ದೆಯಡಿ ಅಪರಿಚಿತ ಶವ ಪತ್ತೆ ಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಬೇಧಿಸಿ ಡಿವೈಎಸ್ಪಿ ರಾಮಕೃಷ್ಣ ಸಿಪಿಐ ಎಂ.ಎಸ್ ಸರ್ದಾರ್, ಪಿಎಸೈ ನಾಗರಾಜು ಅವರು ತನಿಖೆ ಕೈಗೊಂಡ ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದ್ದು ಆರೋಪಿಗಳಾದ ಚಲಪತಿ ಬಿನ್ ಗಂಗಪ್ಪ (45), ಶಿವಕುಮಾರ್ ಬಿನ್ ಚಿಕ್ಕಪ್ಪಯ್ಯ (42), ನಾಗೇಶ್ ಬಿನ್ ಸುಭ್ರಮಣ್ಯ (25) ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.