ಸ್ಟಾರ್ಸ್ಕೇಪ್ಸ್ ಶೀಘ್ರದಲ್ಲೇ ಬಾಹ್ಯಾಕಾಶ ಪ್ರವಾಸೋದ್ಯಮ (astro tourism ) ಚಟುವಟಿಕೆಗಳಿಗಾಗಿ ಶಾಶ್ವತ ವೀಕ್ಷಣಾಲಯವನ್ನೂ ಪ್ರಾರಂಭಿಸಲಿದೆ.
ಮಡಿಕೇರಿ: ಭಾರತದ ಪ್ರಮುಖ ಆಸ್ಟ್ರೋ ಪ್ರವಾಸೋದ್ಯಮ ಕಂಪನಿಯಾದ ಸ್ಟಾರ್ ಸ್ಕೇಪ್ಸ್, ದಕ್ಷಿಣ ಭಾರತದ ಮೊದಲ ಬ್ಯಾಹ್ಯಾ ಕಾಶ ವೀಕ್ಷಣಾಲಯ ಮತ್ತು ಖಗೋಳಶಾಸ್ತ್ರ ಅನುಭವ ಕೇಂದ್ರವನ್ನು ಕೊಡಗಿನಲ್ಲಿ ಪ್ರಾರಂಭಿಸಿದೆ. ಅಲ್ಲಿಗೆ ಭೇಟಿ ನೀಡುವವರು ಸ್ಟಾರ್ ಗೇಜಿಂಗ್, ಹಗಲಿನಲ್ಲಿ ಸೂರ್ಯನ ವೀಕ್ಷಣೆಗಳು, ರಾತ್ರಿ ಆಕಾಶ ಪ್ರದರ್ಶನಗಳು ಮತ್ತು ಸನ್ ಡಿಯಲ್ ತಯಾರಿಕೆ, ಸ್ಟೆಮ್ ವರ್ಕ್ ಶಾಪ್ಗಳು, ರಾಕೆಟ್ ತಯಾರಿಕೆ ಮತ್ತಿತರ ಆಫ್ ಬೀಟ್ ಚಟುವಟಿಕೆಗಳನ್ನು ನಡೆಸಬಹು ದಾಗಿದೆ.
ಕೊಡಗಿನ ಸೊಂಪಾದ ಹಸಿರು ಭೂದೃಶ್ಯಗಳ ನಡುವೆ ನೆಲೆಗೊಂಡಿರುವ ಈ ವೀಕ್ಷಣಾಲಯವು ಎಲ್ಲಾ ವಯಸ್ಸಿನ ಪ್ರವಾಸಿಗರಿಗೆ ಆಕರ್ಷಕ ಮತ್ತು ಶೈಕ್ಷಣಿಕ ಖಗೋಳಶಾಸ್ತ್ರ ಚಟುವಟಿಕೆಗಳ ಅನುಭವ ನೀಡಲಿದೆ, ಇದು ಸ್ಟಾರ್ ಗೇಜಿಂಗ್ ವಿಹಾರಗಳು, ಖಗೋಳ ಫೋಟೊಗ್ರಫಿ ಸೆಷನ್ಗಳು ಮತ್ತು ಹಗಲು ಸೂರ್ಯನ ವೀಕ್ಷಣೆಗಳು ಸೇರಿದಂತೆ ಹಗಲು ಮತ್ತು ರಾತ್ರಿ ಸೇರಿದಂತೆ ನಿರಂತರ ಚಟುವಟಿಕೆಗಳನ್ನು ಒಳಗೊಂಡಿದೆ. ಕೊಡಗಿನ ಅನೇಕ ಜನಪ್ರಿಯ ರೆಸಾರ್ಟ್ ಗಳು ಮತ್ತು ಹೋಮ್ ಸ್ಟೇಗಳಿಗೆ ಹತ್ತಿರದಲ್ಲಿರುವ ಇದು ಬ್ರಹ್ಮಾಂಡ ಮತ್ತು ಅದರ ಹಿಂದಿನ ರಹಸ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಪರಿಪೂರ್ಣ ವಾದ ಸ್ಥಳವಾಗಿದೆ.
2ರ ಬೋರ್ಟಲ್ ಸ್ಕೇಲ್ ರೇಟಿಂಗ್ ಹೊಂದಿರುವ ಕೊಡಗು , ಸ್ಟಾರ್ ಗೇಜಿಂಗ್ ಗೆ ಹೆಚ್ಚು ಪ್ರಶಸ್ತ ಜಾಗವಾಗಿದೆ. ಇದು ಕಗ್ಗತ್ತಲ ಆಕಾಶಕ್ಕಾಗಿ 1ನೇ ಸ್ಥಾನ ಪಡೆದುಕೊಂಡಿದ್ದರೆ ಬೆಂಗಳೂರು ಮಹಾನಗರ 9ನೇ ಸ್ಥಾನವನ್ನು ಪಡೆದುಕೊಂಡಿದೆ. ಕೊಡಗಿನಲ್ಲಿ ಕಡಿಮೆ ಬೆಳಕಿನ ಮಾಲಿನ್ಯವಿದೆ. ಅದೇ ರೀತಿ ಅತ್ಯುತ್ತಮ ಪರಿಸರವನ್ನು ಹೊಂದಿದೆ ಪ್ರವಾಸಿಗರಿಗೆ ನಕ್ಷತ್ರ ವೀಕ್ಷಣೆಯಲ್ಲಿ ಪಾಲ್ಗೊಳ್ಳಲು ಮತ್ತು ನಕ್ಷತ್ರಗಳು, ನಕ್ಷತ್ರಪುಂಜಗಳು ಮತ್ತು ಕ್ಷೀರಪಥದ ಅಪೂರ್ವ ದರ್ಶನ ಮಾಡಲು ಅವಕಾಶ ನೀಡುತ್ತದೆ.
ಕೇಂದ್ರದ ಬಿಡುಗಡೆಯ ಬಗ್ಗೆ ಮಾತನಾಡಿದ ಸ್ಟಾರ್ಸ್ಕೇಪ್ಸ್ನ ಸಿಇಒ ಮತ್ತು ಸಹ-ಸಂಸ್ಥಾಪಕ ಪಾಲ್ ಸಾವಿಯೊ, ಕೊಡಗು ಸ್ವಲ್ಪ ಸಮಯದಿಂದ ನಮ್ಮ ಯೋಜನೆಯ ಸಂಭಾವ್ಯ ತಾಣವಾಗಿತ್ತು. ಬ್ರಹ್ಮಾಂಡದ ಅದ್ಭುತಗಳನ್ನು ಅನ್ವೇಷಿಸಲು ಜನರಿಗೆ ವಿಶಿಷ್ಟ ವೇದಿಕೆಯನ್ನು ಕಲ್ಪಿಸಿರುವುದಕ್ಕೆ ನಾವು ರೋಮಾಂಚನ ಗೊಂಡಿದ್ದೇವೆ. ಅನುಭವ ಕೇಂದ್ರವು ಮುಂದೆ ಏನಾಗಲಿದೆ ಎಂಬುದರ ಮುನ್ನೋಟ ದೊರಕಿದೆ. ನಮ್ಮ ಮುಂಬರುವ ಶಾಶ್ವತ ವೀಕ್ಷಣಾಲಯದ ಬಗ್ಗೆ ನಾವು ಉತ್ಸುಕರಾಗಿದ್ದೇವೆ, ಇದು ವ್ಯಾಪಕ ಶ್ರೇಣಿಯ ಖಗೋಳ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
ಖಗೋಳಶಾಸ್ತ್ರ ಉತ್ಸಾಹಿಗಳು, ಪ್ರವಾಸಿಗರು ಮತ್ತು ಸ್ಥಳೀಯರಿಗೆ ಆಳವಾದ ಅನುಭವವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಕೊಡಗು ನೀಡುವ ಗಮನಾರ್ಹ ಆಸ್ಟ್ರೋ (ಬಾಹ್ಯಾಕಾಶ) ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಪ್ರದೇಶದ ಸ್ಥಳೀಯ ಸಮುದಾಯ, ಹೋಮ್ ಸ್ಟೇಗಳು ಮತ್ತು ರೆಸಾರ್ಟ್ಗಳೊಂದಿಗೆ ಜತೆಯಾಗಲು ನಾವು ಎದುರು ನೋಡುತ್ತಿದ್ದೇವೆ.
ಹೆಚ್ಚಿನ ವಿವರಗಳಿಗಾಗಿ, ಭೇಟಿ ನೀಡಿ
ಸ್ಟಾರ್ ಸ್ಕೇಪ್ಸ್ ವೀಕ್ಷಣಾಲಯ ಮತ್ತು ಅನುಭವ ಕೇಂದ್ರ – ಕೂರ್ಗ್
ಸೆಲೆಸ್ಟಿಯಲ್ ಎಸ್ಕೇಪೇಡ್ಸ್, 9/8,
ವಿದ್ಯಾನಗರ, ಕರವಾಲೆ ಬಡಗ, ಮಡಿಕೇರಿ, ಕರ್ನಾಟಕ 571201
Google ಮ್ಯಾಪ್ – Link
ಸ್ಟಾರ್ ಸ್ಕೇಪ್ಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ
ಸ್ಟಾರ್ಸ್ಕೇಪ್ಟ್ ಒಂದು ಅನನ್ಯ ವೇದಿಕೆಯಾಗಿದ್ದು, ಇದು ನಮ್ಮ ಸ್ಟ್ರಾಟೋಸ್ಪಿಯರ್ ಆಚೆಗಿನ ವಿಶಾಲ ಆಕಾಶದ ಬಗ್ಗೆ ನಿಮ್ಮ ಕುತೂಹಲಕ್ಕೆ ಧ್ವನಿ ನೀಡಲು ಸಮಗ್ರ ಖಗೋಳಶಾಸ್ತ್ರದ ಅನುಭವವನ್ನು ಕಲ್ಪಿಸುತ್ತದೆ. 2017ರಲ್ಲಿ ಖಗೋಳಶಾಸ್ತ್ರಜ್ಞ ರಾಮಶಿಶ್ ರೇ ಅವರು ಪಾಲ್ ಸಾವಿಯೊ ಅವರೊಂದಿಗೆ 2019ರಲ್ಲಿ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿ ಸೇರಿಕೊಂಡರು, ಸ್ಟಾರ್ಸ್ಕೇಪ್ಸ್ ಭಾರತದ ಮೊದಲ ಮತ್ತು ಏಕೈಕ ವೀಕ್ಷಣಾಲಯಗಳ ಚೈನ್ ಆಗಿದೆ ಇದು ಪ್ರವಾಸದ ಉತ್ಸಾಹಿಗಳಿಗೆ ಸಮಗ್ರ ಖಗೋಳಶಾಸ್ತ್ರದ ಅನುಭವವನ್ನು ನೀಡುತ್ತದೆ.