Sunday, 15th December 2024

ನಟ ದರ್ಶನ್‌ & ಗ್ಯಾಂಗ್‌ ವಿರುದ್ಧ ಕಾನ್ಸ್‌ ಟೇಬಲ್‌ ಮೇಲೆ ಹಲ್ಲೆ ಆರೋಪ

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್‌ & ಗ್ಯಾಂಗ್‌ ವಿರುದ್ಧ ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಏ.೨೨ ರಂದು ಮಂಡ್ಯದಲ್ಲಿ ಲೋಕಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರ ಪರ ದರ್ಶನ್‌ ಪ್ರಚಾರಕ್ಕೆ ಬಂದ ವೇಳೆ ಮದ್ದೂರಿನಲ್ಲಿ ಉದಯ್‌ ಗನ್‌ ಮ್ಯಾನ್ ‌ಆಗಿದ್ದ ಕಾನ್ಸ್‌ ಟೇಬಲ್‌ ನಾಗೇಶ್‌ ಮೇಲೆ ದರ್ಶನ್‌ ಗ್ಯಾಂಗ್‌ ಹಲ್ಲೆ ನಡೆಸಿತ್ತು ಎನ್ನಲಾಗಿದೆ.

ಮುಖಂಡರನ್ನು ದರ್ಶನ್‌ ಹತ್ತಿರಕ್ಕೆ ಬಿಟ್ಟುಕೊಳ್ಳದ ವಿಚಾರಕ್ಕೆ ಸಂಬಂಧಿಸಿದಂತೆ ನಾಗೇಶ್‌ ಜೊತೆಗೆ ಮಣಿ, ಲಕ್ಷ್ಮಣ ಹಾಗೂ ಇತರರು ಜಗಳ ಮಾಡಿದ್ದರು. ಬಳಿಕ ಉದಯ್‌ ಮನೆಮುಂದೆ ನಾಗೇಶ್‌ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಬಳಿಕ ನಾಗೇಶ್‌ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಸಂಧಾನದ ಮೂಲಕ ನಾಗೇಶ ರನ್ನು ಉದಯ್‌ ಕಳುಹಿಸಿದ್ದರು. ಗನ್‌ ಮ್ಯಾನ್‌ ಹುದ್ದೆಯಿಂದ ಹೊರಬಂದ ಪಿಸಿ ನಾಗೇಶ್‌ ಅವರು ಇದೀಗ ಡಿಎಆರ್‌ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.