Thursday, 12th December 2024

ಡಾ.ಸಿ.ಎನ್.ಮಂಜುನಾಥ್ ಪರ ಕ್ಯಾಂಪೇನ್: ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

ತುಮಕೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರವಾಗಿ ಕ್ಯಾಂಪೇನ್ ಮಾಡಿದ್ದ ಗ್ರಾ.ಪಂ ಸದಸ್ಯನ ಮೇಲೆ ಕಾಂಗ್ರೆಸ್​ ಬೆಂಬಲಿಗ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕುಣಿಗಲ್ ತಾಲೂಕಿನ ಅಂಚೇಪಾಳ್ಯದಲ್ಲಿ ನಡೆದಿದೆ.

ಮಂಜುನಾಥ್ ಪರ ಕೆಂಪನಹಳ್ಳಿ ಗ್ರಾ.ಪಂ ಜೆಡಿಎಸ್​ ಸದಸ್ಯ ಮಂಜುನಾಥ್ ಪ್ರಚಾರ ಮಾಡಿದ್ದರು. ಇದಕ್ಕಾಗಿ ಕಾಂಗ್ರೆಸ್​ ಬೆಂಬಲಿತ ವ್ಯಕ್ತಿ ಬೊರೇಗೌಡ ಹಾಗೂ ಬೆಂಬಲಿಗರು ಸೇರಿ ಮಾತನಾಡಬೇಕು ಎಂದು ಈತನನ್ನು ಕರೆಯಿಸಿ, ಅಂಚೇಪಾಳ್ಯದ ಬಳಿ ಬೋರೇಗೌಡ ಚಾಕು ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.

ಚಾಕು ಇರಿಯುತ್ತಿದ್ದಂತೆ ತಕ್ಷಣ ಜೀವ ಉಳಿಸಿಕೊಳ್ಳಲು ಕೆಳಕ್ಕೆ ಬಗ್ಗಿದ್ದರಿಂದ ಚಾಕು ತಲೆಗೆ ಚುಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕುಣಿಗಲ್​ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಬಂಧ ಕುಣಿಗಲ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.