Thursday, 12th December 2024

ಅವೈಜ್ಞಾನಿಕ ಕಾಮಗಾರಿ: ಮೇಳಕೋಟೆಯಲ್ಲಿ ಆಟೋಗೆ ಬೈಕ್ ಡಿಕ್ಕಿ

ತುಮಕೂರು: ಚಲಿಸುತ್ತಿದ್ದ ಆಟೋ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದ್ದು, ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮೇಳಕೋಟೆ ಮುಖ್ಯರಸ್ತೆಯಲ್ಲಿ ನಡೆದಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಈ ಅಪ ಘಾತ ಸಂಭವಿಸಿದೆ ಎನ್ನಲಾಗಿದೆ. ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಶರೇಂಜ್ ಗಾಯಗೊಂಡಿರುವ ಚಾಲಕ.

ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಪರಿಣಾಮ ಆಟೋ ನಡುರಸ್ತೆಯಲ್ಲಿಯೇ ಪಲ್ಟಿ ಯಾಗಿದ್ದು, ಪಲ್ಟಿಯಾದ ಆಟೋಗೆ ಬೈಕ್ ಡಿಕ್ಕಿಹೊಡೆದಿದೆ. ಬೈಕ್ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಅವೈಜ್ಞಾನಿಕ ರಸ್ತೆ ನಡುವೆ ನಿರ್ಮಿಸಿದ್ದ ಡ್ರೈನೇಜ್ ಕ್ಯಾಪ್. ಡ್ರೈನೇಜ್ ಕ್ಯಾಪ್ ಇರುವುದು ಕಾಣದೇ ಆಟೋ ಚಾಲಕ ಆಟೊ ಓಡಿಸಿದ್ದಾನೆ. ಆಟೋ ಪಲ್ಟಿಯಾಗಿ ಬಿದ್ದಿದ್ದು, ಇದೇ ವೇಳೆ ಬೈಕ್ ಕೂಡ ಆಟೋಗೆ ಡಿಕ್ಕಿ ಹೊಡೆದಿದೆ.