Thursday, 12th December 2024

Auto fare: ತುಮಕೂರು ನಗರ: ಆಟೋ ಕನಿಷ್ಟ ದರ 25 ರುಪಾಯಿ

ತುಮಕೂರು: ನಗರದಲ್ಲಿ ಆಟೋ ರಿಕ್ಷಾಗಳ ಕನಿಷ್ಟ ದರ, ಮೊದಲ 2 ಕಿ.ಮೀ.ಗೆ ಕನಿಷ್ಟ ದರ 25 ರುಪಾಯಿ ಮಾತ್ರ ಎಂದು ಸಾರಿಗೆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮೊದಲ 2 ಕಿ.ಮೀ.ಗೆ ಕನಿಷ್ಟ ದರ (ಮೂವರು ಪ್ರಯಾಣಿಕರಿಗೆ) 25 ರುಪಾಯಿ ಆಗಿರುತ್ತದೆ. ನಂತರದ ಪ್ರತಿ ಕಿ.ಮೀ.ಗೆ ದರ 13 ರುಪಾಯಿ ಆಗುತ್ತದೆ. ಕಾಯುವ ದರ (ವೇಟಿಂಗ್ ಚಾರ್ಜ್) ಮೊದಲ 5 ನಿಮಿಷ ಉಚಿತವಿದ್ದು, ನಂತರದ 15 ನಿಮಿಷಗಳಿಗೆ ದರ 5 ರುಪಾಯಿ ಆಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Milk Price Hike: ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆ ಶಾಕ್‌; ಹಾಲಿನ ದರ ಹೆಚ್ಚಳ ಸುಳಿವು ಕೊಟ್ಟ ಸಿಎಂ!

ಪ್ರಯಾಣಿಕರು ಒಯ್ಯುವ 20 ಕೆ.ಜಿ. ಲಗೇಜ್ ಉಚಿತವಿದ್ದು, ಗರಿಷ್ಟ 50 ಕೆ.ಜಿ. ಲಗೇಜ್ ಹಾಕಬಹುದಾಗಿದೆ. ರಾತ್ರಿ ವೇಳೆ ಆಟೋ ಪ್ರಯಾಣಕ್ಕೆ ಹೆಚ್ಚುವರಿ ದರ ನಿಗದಿ ಪಡಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮೀಟರ್‌ನ ಒಂದೂವರೆಪಟ್ಟು ದರ ನಿಗದಿ ಪಡಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಆರ್.ಟಿ.ಐ. ಅರ್ಜಿಗೆ ಆರ್.ಟಿ.ಒ ಮಾಹಿತಿ ನೀಡಿದ್ದಾರೆ.

1,005 ಅಕ್ರಮ ಆಟೋಗಳಿಂದ 22 ಲಕ್ಷ ದಂಡ ಸಂಗ್ರಹ

2023ರ ಏಪ್ರಿಲ್ 1 ರಿಂದ 2024 ರ ಮಾರ್ಚ್ 31 ರವರೆಗೆ 653 ಆಟೊರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 14,55,400 ರುಪಾಯಿ ದಂಡ ಸಂಗ್ರಹಿಸಲಾಗಿದೆ. 2024 ರ ಏಪ್ರಿಲ್ 1 ರಿಂದ ಜುಲೈ 31 ರವರೆಗೆ 352 ಆಟೊರಿಕ್ಷಾಗಳ ವಿರುದ್ಧ ಕ್ರಮ ಕೈಗೊಂಡು ಒಟ್ಟು 8,02,600 ರುಪಾಯಿ ದಂಡ ಸಂಗ್ರಹಿಸಲಾಗಿದೆ. ಹೀಗೆ ಒಟ್ಟು 1,005 ಅಕ್ರಮ, ಅನಧಿಕೃತ ಆಟೊರಿಕ್ಷಾಗಳಿಂದ ಒಟ್ಟಾರೆ 22,58,000 ಲಕ್ಷ ದಂಡ ಸಂಗ್ರಹಿಸಲಾಗಿದೆ.

8,962 ಆಟೋಗಳು, 15 ಕಿ.ಮೀ. ವ್ಯಾಪ್ತಿ

ತುಮಕೂರು ಆರ್.ಟಿ.ಒ. ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 8,962 ಪ್ರಯಾಣಿಕ ಆಟೊರಿಕ್ಷಾಗಳಿಗೆ ಪರವಾನಗಿ ನೀಡಲಾ ಗಿದೆ. ನಗರದ ಕಾರ್ಪೊರೇಷನ್‌ನಿಂದ 15 ಕಿ.ಮೀ. ವ್ಯಾಪ್ತಿಯೊಳಗೆ ಮಾತ್ರ ಸಂಚರಿಸಲು ಈ ಆಟೋಗಳಿಗೆ ಅನುಮತಿ ನೀಡಲಾಗಿದೆ.

ಸಮವಸ್ತ್ರದ ಬಗ್ಗೆ ಮಾಹಿತಿ ಅಸ್ಪಷ್ಟ ಮಾಹಿತಿ ನೀಡಿದ್ದಾರೆ ಎಂದು ಅರ್ಜಿದಾರ ಆರ್.ವಿಶ್ವನಾಥನ್ ತಿಳಿಸಿದ್ದಾರೆ.