Sunday, 15th December 2024

ಬೈಲಪ್ಪನ ಮಠ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಹಾಯಧನ ಮಂಜೂರು

ಚಿಕ್ಕನಾಯಕನಹಳ್ಳಿ: ತಾಲೂಕಿನ ಬೈಲಪ್ಪನ ಮಠ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಯೋಜನೆಯ “ಗ್ರಾಮ ಕಲ್ಯಾಣ ಯೋಜನೆ” ಅಡಿಯಲ್ಲಿ ಮಂಜೂರುಗೊಂಡ ರೂ.1.5 ಲಕ್ಷ ಮೊತ್ತದ ಮಂಜೂರಾತಿ ಪತ್ರವನ್ನು ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಸಹಕಾರ ಸಂಘದ ಅಧ್ಯಕ್ಷರಾದ ಉಮೇಶ್ ರವರಿಗೆ ನೀಡಿದರು.
ನಂತರ ಮಾತನಾಡಿದ ಅವರು “ಗುಣಮಟ್ಟದ ಹಾಲನ್ನು ಸಹಕಾರ ಸಂಘಕ್ಕೆ ನೀಡುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ತಾವೆಲ್ಲರೂ ಕೈ ಜೋಡಿಸಬೇಕು. ಯೋಜನೆಯ ಪಾಲುದಾರ ಬಂಧುಗಳಿಗೆ ಬ್ಯಾಂಕ್ ಮುಖೇನ ಪ್ರಗತಿನಿಧಿ ನೀಡುವ ಮೂಲಕ ಉತ್ತೇಜನ ಕೆಲಸ ಮಾಡುತ್ತಿದೆ. ಇದರ ಸದುಪಯೋಗ ಎಲ್ಲರೂ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕ ಭಾಸ್ಕರ್,ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಸೇವಾಪ್ರತಿನಿಧಿ ಭಾರತಿ, ಸಂಘದ ನಿರ್ದೇಶಕರು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.