Saturday, 14th December 2024

BasavanthaRayaGowda Patil: ತಂದೆ-ತಾಯಿ ಗುಡಿಕಟ್ಟಿಸಿ ದೇವರ ಸ್ಥಾನದಲ್ಲಿ ಪೂಜಿಸುವ ಭೀಮು ರಾಠೋಡ ಕಾರ್ಯ ಶ್ಲಾಘ ನೀಯ- ಬಸವಂತರಾಯಗೌಡ ಪಾಟೀಲ

ಇಂಡಿ: ಈ ಭೂಮಿಯಮೇಲೆ ಅನೇಕ ವಿಚಿತ್ರಗಳು ನೋಡಿದ್ದೇವೆ ಕಂಡಿದ್ದೇವೆ ಆದರೆ ತಂದೆ,ತಾಯಿಗಳು ಇದ್ದರೂ ಕೂಡಾ ಎಷ್ಟೋ ಜನ ಸರಿಯಾಗಿ ನೋಡಿಕೊಳ್ಳದೆ ವೃದ್ದಾಶ್ರಮಕ್ಕೆ ತಳ್ಳುತ್ತಾರೆ ಆದರೆ ಭೀಮು ರಾಠೋಡ ತಂದೆ-ತಾಯಿ ಇಲ್ಲದೆ ಇದ್ದರೂ ಕೂಡಾ ಗುಡಿಕಟ್ಟಿಸಿ ದೇವರಗಳ ಸ್ಥಾನದಲ್ಲಿ ಆರಾಧಿಸುತ್ತಿರುವ ಕಾರ್ಯ ತಂದೆ-ತಾಯಿ ಗುಡಿಕಟ್ಟಿಸಿ ದೇವರ ಸ್ಥಾನದಲ್ಲಿ ಪೂಜಿಸುವ ಭೀಮು ರಾಠೋಡ ಕಾರ್ಯ ಶ್ಲಾಘನೀಯ- ಬಸವಂತರಾಯಗೌಡ ಪಾಟೀಲ ಎಂದು ಶಾಸಕರ ಸಹೋದರ ಬಸವಂತರಾಯಗೌಡ ಪಾಟೀಲ ಹೇಳಿದರು.

ಕೆಸರಾಳ ಎಲ್.ಟಿ ಯಲ್ಲಿ ಶಂಕರ, ಚಾಂದುಬಾಯಿ ಇವರ ಗುಡಿ ಲೋಕಾರ್ಪಣೆ ಹಾಗೂ ಜಾತ್ರಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಜೀವನದಲ್ಲಿ ಹಿಂದೆ ನೋಡಿ ಮುಂದೆ ಸಾಗಬೇಕು. ಇತಿಹಾಸ ಮರೆತ ವರು ಇತಿಹಾಸ ಸೃಷ್ಠಿಸಲಾರರು. ಭೀಮು ರಾಠೋಡ ತಂದೆ ತಾಯಿ ಅಕಾಲಿಕ ೧೨ ವರ್ಷಗಳ ಹಿಂದೆ ದೈವಾಧೀನ ರಾಗಿದ್ದಾರೆ ಎಷ್ಟೋ ಜನರು ಮರೆಯುತ್ತಾರೆ ಆದರೆ ದೇವರ ಸ್ಥಾನದಲ್ಲಿ ಪೂಜಿಸುತ್ತಿರುವ ಇವರು ಇಂದಿನ ಅಧುನಿಕ ಸಮಾಜಕ್ಕೆ ಪ್ರೇರಣೆ ಇಂತಹವರನ್ನು ನೋಡಿ ಕಲಿಯಬೇಕು.

ನಿಜವಾಗಿ ದೇವರು ಎಲ್ಲಿದ್ದಾನೆ ಎಂದರೆ ತಂದೆ -ತಾಯಿಗಳೆ ದೇವರು ಪ್ರಾಚೀನ ಕಾಲದ ವೇದ ಪುರಾಣಗಳಲ್ಲಿ ಮಾತೃ ದೇವೋ ಭವನ ಪಿತ್ರು ದೇವೋ ಭವ ಎಂದಿದ್ದಾರೆ. ವಿಘ್ನವಿನಾಶಕ ಶ್ರೀಗಣೇಶನಿಗೆ ಪ್ರಪಂಚ ಪರ್ಯಟನ ಮಾಡು ಎಂದು ಹೇಳಿದರಂತೆ ಆವಾಗ ತಂದೆ -ತಾಯಿಗಳ ಸುತ್ತ ಸುತ್ತಿ ಪ್ರಪಂಚ ಸುತ್ತಾಡಿ ಬಂದೆ ಎಂದರAತೆ ಇದರ ಅರ್ಥ ಇಡೀ ವಿಶ್ವ ತಂದೆ ತಾಯಿ ಎಂದರೆ ತಪ್ಪಾಗುವುದಿಲ್ಲ . ಕಿತ್ತು ತಿನ್ನು ಬಡತನ ಜಮೀನು ಮಾರಿ ದೇಶಾಂತರಕ್ಕೆ ಹೋಗಿದ ಭೀಮು ರಾಠೋಡ ಅಂದು ಕಳೆದ ಕೊಂಡ ಆಸ್ತಿಗಿಂತ ಇಂದು ದುಪ್ಪಟ್ಟು ಗಳಿಸಿದಕ್ಕೆ ತಂದೆ ತಾಯಿ ಆರ್ಶೀವಾದ. ಶ್ರವಣಕುಮಾರ ತಂದೆ ತಾಯಿಗಳ ಬಗ್ಗೆ ಇದ್ದ ಭಕ್ತಿ ಪುರಾಣಗಳಲ್ಲಿ ಕೇಳಿದ್ದೇವೆ ಆದರೆ ಅಧುನಿಕ ಶ್ರವಣಕುಮಾರ ಭೀಮು ರಾಠೋಡ ಎಂದರೆ ಅತೀಶೋಕ್ತಿ ಅಲ್ಲ ಇಂತಹವರು ಸಮಾಜದಲ್ಲಿ ಇರಬೇಕು ಇವರಿಂದ ಸಮಾಜ ಒಳ್ಳೇಯದಾಗುತ್ತದೆ ಎಂದರು.

ಶಂಕರ, ಚಾಂದುಬಾಯಿ ರಾಠೋಡ , ಶಾಸಕರ ಸಹೋದರ ಬಸವಂತರಾಯಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಜಾವೀದ ಮೋಮಿನ, ದೇವೇಂದ್ರ ಕುಂಬಾರ. ಪಿಂಟು ರಾಠೋಡ, ಭೀಮು ರಾಠೋಡ,ಸಂಜಿವ ಜಾಧವಧರ್ಮು ರಾಠೋಡ ಸೇರಿದಂತೆ ಅನೇಕ ರಾಜಕೀಯ ಮುಖಂಡರು , ಗಣ್ಯರು ಕಾರ್ಯಕ್ರಮದಲ್ಲಿದ್ದರು.