ಅದರ ಬದಲಾವಣೆಗೆ ಪ್ರಾಥಮಿಕ ಶಾಲಾ ಶಿಕ್ಷಣದ ಅವಶ್ಯಕತೆ ಇದೆ
ತಿಪಟೂರು: ದೇಶದ ಭವಿಷ್ಯ ನಿರ್ಣಯ ಮಾಡಲು ಹೊಸ ಶಿಕ್ಷಣ ನೀತಿಯು ಇಂದು ಅವಶ್ಯಕತೆಯಿದ್ದು ಭಾರತೀಯ ಜೀವನ ಶೈಲಿಯ ಪದ್ದತಿ, ಆಚಾರ-ವಿಚಾರ ಸಂಸ್ಕೃತಿಯು ಇಡೀ ಪ್ರಪಂಚಕ್ಕೆ ಅವಶ್ಯಕತೆಯಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಸಚಿವ ಬಿ ಸಿ ನಾಗೇಶ್ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಆವರಣದಲ್ಲಿ ಆಯೋಜನೆ ಮಾಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂWದ ವತಿಯಿಂದ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯ ಗಾರ ಹಾಗೂ ಅಕ್ಷರ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಕರ‍್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಬ್ರಿಟೀಷರ ಮೆಕಾಲೆ ಶಿಕ್ಷಣ ಪದ್ದತಿಯಿಂದ ನಮ್ಮ ದೇಶದ ಪ್ರಜೆಗಳು ವಿದೇಶಿಗಳಿಗೆ ತೆರಳಿ ತಮ್ಮ ಬುದ್ದಿಸಾಮರ್ಥ್ಯವನ್ನು ಅಲ್ಲಿ ವ್ಯಕ್ತಪಡಿಸುವ, ಸ್ವಾವಲಂಭಿ ವ್ಯಕ್ತಿಯಿಂದ ಮತ್ತೊಬ್ಬರ ಮೇಲೆ ಪರವಲಾಂಬಿಯಾಗುವ0ತೆ ಮಾಡಿದ ಮೆಕಾಲೆ ಶಿಕ್ಷಣವನ್ನು ತೆಗೆದು ಹಾಕಿ ನಮ್ಮ ದೇಶದ ಪ್ರದಾನಿ ಮೋದಿಯವರ ದೂರದೃಷ್ಟಿಯ ಯೋಜನೆಯ ಫಲವಾದ ಹೊಸ ಶಿಕ್ಷಣ ನೀತಿಯು ಇಂದು ನಮ್ಮ ದೇಶಕ್ಕೆ ಆವಶ್ಯಕತೆ ಇದೆ ಇದರಿಂದ ಪರವಾಲಂಭಿಯಾಗಿರುವ ವ್ಯಕ್ತಿಯನ್ನು ಸ್ವಾವಲಂಭಿ ಯನ್ನಾಗಿ ಮಾಡಲು ಪ್ರತಿ ಯೊಬ್ಬ ವ್ಯಕ್ತಿಯಲ್ಲಿ ಹಾಗೂ ಮಗುವಿನಲ್ಲೂ ದೇಶಾಭಿಮಾನ ಸಂಸ್ಕೃತಿ ಬೆಳಸಲು, ಮಗುವಿನ ಶಕ್ತಿಗೆ ಅನುಗುಣವಾಗಿ ವಿದ್ಯೆ ಯನ್ನು ಕಲಿಯಲು ಅವಕಾಶ ನೀಡಿ ದೇಶದ ಭವಿಷ್ಯವನ್ನು ನಿರ್ಣಯ ಮಾಡುವ ಮತ್ತು ಸುಸಂಸ್ಕೃತ ವಾಗಿ ಬೆಳೆಯುವಂತೆ ಮಾಡುವುದೇ ನಮ್ಮ ಹೊಸ ಶಿಕ್ಷಣ ನೀತಿಯ ಉದ್ದೇಶವಾಗಿದೆ ಎಂದರು.
ಶಿಕ್ಷಕ ವೃತ್ತಿ ಎಂಬುದು ಅತಿ ಪವಿತ್ರವಾದ ಕೆಲಸ, ನಿಮ್ಮ ಜವಾಬ್ದಾರಿಯನ್ನು ಅರಿತು ಆತ್ಮ ತೃಪ್ತಿಯಿಂದ ಪ್ರಾಥಮಿಕ ಶಿಕ್ಷಕರು ಕರ್ತವ್ಯ ನಿರ್ವಹಿಸ ಬೇಕು. ರಾಷ್ಟçದ ಭವಿಷ್ಯವನ್ನು ನಿರ್ಥರಿಸುವ ಥಿಕ್ಸೂಚಿಯಾಗಿರುವ ತಾವುಗಳು ಪರಿವರ್ತನೆಯ ಅವಶ್ಯ ಕತೆಯು ನಿಮ್ಮಿಂದ ಮಾತ್ರ ಸಾಧ್ಯವಾಗಿದೆ. ಶಿಕ್ಷಕ ಎಂಬುವವರು ಮಕ್ಕಳಿಗೆ ಮಾತ್ರ ಪಾಠವನ್ನು ತಿಳಿಸುವವರು ಅಲ್ಲ ಅವರು ಊರಿಗೆ ಪಾಠವನ್ನು ಮಾಡುವಂತಹ ವ್ಯಕ್ತಿ ಆದ್ದರಿಂದ ತಮ್ಮಲ್ಲಿರುವ ಸಾಮರ್ಥ್ಯವನ್ನು ತಮ್ಮಗಳಿಗೆ ಸಿಕ್ಕಿರುವ ಅವಕಾಶದಲ್ಲಿ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳುವ ಶಿಕ್ಷಣವನ್ನು ನೀಡಿ ಎಂದು ಸಲಹೆ ನೀಡಿದರು.
ಸಿಇಟಿ, ಟಿಇಟಿ ಪರೀಕ್ಷೆಯ ಮೂಲಕ ಶಿಕ್ಷಕ ವೃತ್ತಿಯನ್ನು ಪಡೆದು ಬಂದಿದ್ದು ಬೇರೆ ಇಲಾಖೆಗಿಂತ ವಿಶಿಷ್ಟವಾದ ಇಲಾಖೆ ಶಿಕ್ಷಣ ಇಲಾಖೆ. ವಿಶೇಷ ಗೌರವಕ್ಕೆ ಪಾತ್ರವಾಗುವ ಇಲಾಖೆಯಲ್ಲಿ ಕೆಲಸ ಮಾಡುವ ನೀವುಗಳು ದಾನ ಮಾಡುವ ಅಂಶವನ್ನು ಹೊಂದಿ ಕೊ0ಡಿದ್ದು, ತಮ್ಮ ಜೀವನದ ಜೊತೆ ಮಗುವಿನ ಜೀವನದ ಜೊತೆ, ಸರ್ವತೋಮುಖವಾಗಿ ಬೆಳೆಸುವ ಹಾಗೂ ಯಾವುದಕ್ಕೆ ಶಕ್ತಿಯಿಲ್ಲ ಅದಕ್ಕೆ ಶಕ್ತಿ ಕೊಡುವ ಕೆಲಸವನ್ನು ಮಾಡಬೇಕಾಗಿರುವ ಅಪಾರ ನಂಬಿಕೆಸ್ಥ ವೃತ್ತಿಯಾಗಿದೆ ಅದಕ್ಕೆ ಅರ್ಥಪೂರ್ಣ ವಾದ ನ್ಯಾಯವಾದ ಒದಗಿಸುವ ಕೆಲಸ ಮಾಡಿ ಎಂದರು.
ಹಿ0ದಿನ ಕಾಲದಲ್ಲಿ ದಾನಿಗಳ ಸಹಕಾರದಿಂದ ಶಾಲೆಗಳ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದವು ಸರ್ಕಾರಕ್ಕೆ ಶಕ್ತಿ ಹಾಗೂ ಹಣಕಾಸಿನ ವ್ಯವಸ್ಥೆಯು ಒದಗಿದಾಗ ಸಂಧರ್ಬಕ್ಕೆ ತಕ್ಕಂತೆ ಶಿಕ್ಷಕರ ೨೬ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸ ಲಾಗುವುದು ಎಂದರು.
ದಿವ್ಯ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿಯವರು ಶಿಕ್ಷಕರಾದವರು ಮಕ್ಕಳಿಗೆ ದೇಶಾಭಿಮಾನ ಸಂಸ್ಕೃತಿ ಆಚಾರ ವಿಚಾರಗಳು, ಸತ್ಯ ಧರ್ಮ, ಸನ್ನಡತೆಯನ್ನು ಬೆಳಸುವ ವಿದ್ಯೆ ಯನ್ನು ಕಲಿಸಬೇಕು, ತಾವು ಹೆತ್ತ ಮಕ್ಕಳು ತಂದೆ ತಾಯಿಯಂದಿರನ್ನು ವೃದ್ದಾಶ್ರಮಕ್ಕೆ ಕಳುಹಿಸುವ ಕೆಲಸ ನೆಡಯುತ್ತಿದೆ ಇಂತಹ ಕೆಲಸವು ಶೋಚನಿಯವಾಗಿದೆ . ಮಕ್ಕಳಿಗೆ ಪರೋಪಕಾರವನ್ನು ಮಾಡುವ, ಅವಿಭಕ್ತ ಕುಟುಂಬದ ಜೊತೆ ಬೆಳೆಯುವ ಮಾರ್ಗ ವನ್ನು ಕಲಿಸಬೇಕು.
ಶಿಕ್ಷಕರ ಸಂಘದ ರಾಜ್ಯಾಧ್ಯಾಕ್ಷರಾದ ಶಂಬುಲಿAಗನಗೌಡ ಪಾಟೀಲ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಉಪನ್ಯಾಸವನ್ನು ಸುಬ್ರಮಣ್ಯರವರು ಹೊಸ ಶಿಕ್ಷಣ ನೀತಿಯ ಬಗ್ಗೆ ತಿಳಿಸಿದರು. ಉಪನಿರ್ಧೇಶಕ ನಂಜಯ್ಯ, ನಿಕಟಪೂರ್ವ ಅದ್ಯಕ್ಷ ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ಬಸವರಾಜು ಗುರಿಕಾರ್, ಶಿಕ್ಷಕರ ಕಲ್ಯಾಣ ನಿಧಿ ಉಪನಿರ್ಧೇಶಕ ಹನುಮಂತ ರಾಯಪ್ಪ, ಡಯಟ್ ಪ್ರಾಂಶುಪಾಲ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ, ಉಪಾಧ್ಯಕ್ಷ ಕೆ.ನಾಗೇಶ್, ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಪರಮಶಿವಮೂರ್ತಿ, ಕಾರ್ಯದರ್ಶಿ ಚಿಕ್ಕಣ್ಣ, ತಿಪಟೂರು ತಾಲ್ಲೂಕು ಅದ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶೀ ಪಟ್ಟಿಬಿರಾಮು, ಓಂಕಾರ್‌ಮೂರ್ತಿ, ಸಹಕಾರ್ಯದರ್ಶಿ ನಾಗರಾಜು, ಹಾಗೂ ರಾಜ್ಯ ಜಿಲ್ಲೆಯ ಪ್ರಾಥಮಿಕ ಶಿಕ್ಷPರ ಸಂಘದ ಹತ್ತು ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಹಾಜರಿದ್ದರು.