ಚಿಕ್ಕನಾಯಕನಹಳ್ಳಿ: ಬೆಳಗುಲಿ ಗ್ರಾಮ ಪಂಚಾಯಿತಿಯ ಆಡಳಿತದಲ್ಲಿ ಮಹಿಳಾ ಸದಸ್ಯೆಯರ ಪತಿರಾಯರು ಮೂಗು ತೂರಿಸುತ್ತಿರುವ ಬಗ್ಗೆ ದೂರು ಗಳು ಕೇಳಿಬರುತ್ತಿದ್ದು ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
೧೪ ಸಂಖ್ಯಾಬಲದ ಪಂಚಾಯಿತಿಯಲ್ಲಿ ೭ ಮಹಿಳಾ ಸದಸ್ಯರಿದ್ದಾರೆ. ಮಹಿಳಾ ಸದಸ್ಯರ ಪತಿರಾಯರು ಹಾಗು ಸಂಬ0ಧಿಕರು ಪಂಚಾಯಿತಿಯ ಯಾವುದೇ ಆಡಳಿತ ವಿಚಾರದಲ್ಲಿ ಭಾಗಿಯಾಗುವಂತಿಲ್ಲ ಎಂಬ ಸರಕಾರದ ನಿಯಮವಿದೆ. ಈ ನಡುವೆಯೂ ಪತಿರಾಯರು ತಾವೇ ಸದಸ್ಯರ ರೀತಿಯಲ್ಲಿ ಅತಿರೇಕದ ವರ್ತನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ.
ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮತ್ತು ಜಾತಿ ಮೀಸಲು ಅನ್ವಯ ಹೆಚ್ಚಿನ ಸಂಖ್ಯೆಯ ಸದಸ್ಯೆಯರು ಆಯ್ಕೆಯಾಗಿದ್ದಾರೆ. ಹಾಗು ಗ್ರಾ.ಪಂಗಳ ಅಧ್ಯಕ್ಷರು ಹಾಗು ಉಪಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ ಅವರ ಪರವಾಗಿ ಅವರ ಗಂಡ0ದಿರ ಅಧಿಪತ್ಯವೇ ಜೋರಾ ಗಿದ್ದು, ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಪಂಚಾಯಿತಿಯ ಅನುದಾನ ಹಾಗು ಕಾಮಾಗಾರಿಯ ಕೆಲಸಗಳನ್ನು ತಮ್ಮ ಹಿಂಬಾಲಕರ ಮೂಲಕ ನಿರ್ವಹಣೆ ಮಾಡುತ್ತಾರೆ.
ಗ್ರಾಪಂ ಗಳಲ್ಲಿ ಗೆದ್ದಂತಹ ಪುರುಷ ಸದಸ್ಯರು ಸಹ ಮಹಿಳಾ ಪತಿರಾಯರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಮಾಡಿಕೊಡುತ್ತಿದ್ದು ಯಾರಾದರೂ ಸದಸ್ಯರು ಅಥವಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದಂತಹ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಪತಿಯಂದಿರು ಗರಂ ಆಗುತ್ತಿದ್ದಾರೆ. ಕಾನೂನು ಪಾಲಿಸದಿದ್ದರೆ ಇತರೆ ಸದಸ್ಯರ ಟೀಕೆಗೆ ತುತ್ತಾಗುವಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಅಧಿಕಾರಿಗಳಿದ್ದಾರೆ.
ಮಹಿಳಾ ಸದಸ್ಯರ ಗಂಡ0ದಿರು ತಮ್ಮ ಹೆಂಡತಿಯರ ಹೆಸರಿನಲ್ಲಿ ಆಡಳಿತ ನಡೆಸುವ ಇಂತಹ ಪದ್ದತಿ ಜಿಲ್ಲೆಯೆಲ್ಲೆಡೆ ವ್ಯಾಪಿಸಿದೆ. ಇದು ಸಂವಿಧಾನ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಇಂತಹ ಪ್ರವೃತ್ತಿ ನಿರ್ಬಂಧಿಸಬೇಕು ಎಂದು ಬೆಳಗುಲಿ ಗ್ರಾ.ಪಂ ಸದಸ್ಯ ಶಾಂತರಾಜ್ ಹೇಳಿದರು.
ಸದಸ್ಯತ್ವ ರದ್ದತಿಗೆ ಕ್ರಮ
ಗ್ರಾ.ಪಂ.ಗಳಲ್ಲಿ ಮಹಿಳಾ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯೆಯರ ಪತಿ ಹಾಗು ಸಂಬAಧಿಕರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಒಂದು ವೇಳೆ ಸಂಬAಧಿಕರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿರುವುದು ಕಂಡುಬ0ದರೆ ಸದಸ್ಯತ್ವ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಯಾರು ಬೇಕಾದರೂ ಸೂಕ್ತ ಸಾಕ್ಷಿಯೊಂದಿಗೆ ದೂರು ದಾಖಲಿಸಬಹುದು ಎಂದು ತಾ.ಪಂ ಇಓ ವಸಂತ ಕುಮಾರ್ ತಿಳಿಸಿದ್ದಾರೆ.