Thursday, 25th July 2024

ಬೆಳ್ಳಾರೆ, ಸುಬ್ರಮಣ್ಯ ಠಾಣೆಗೆ ನೂತನ ಪಿಎಸ್‌ಐ ನೇಮಕ

ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಪಾರ್ಥಿವ ಶರೀರ ಮೆರವಣೆಗೆ ವೇಳೆ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌ ಮಾಡಿದ ಹಿನ್ನೆಲೆಯಲ್ಲಿ ಕೆಲವರನ್ನು ವರ್ಗಾವಣೆ ಮಾಡಿ, ಬೆಳ್ಳಾರೆ & ಸುಬ್ರಮಣ್ಯ ಠಾಣೆಗೆ ನೂತನ ಪಿಎಸ್‌ಐ ಯನ್ನು ನೇಮಕ ಮಾಡಲಾಗಿದೆ.

ಬೆಳ್ಳಾರೆಯಲ್ಲಿ ಎಸ್‌ಐ ಆಗಿದ್ದ ರುಕ್ಮ ನಾಯ್ಕ್, ಸುಬ್ರಮಣ್ಯ ಎಸ್‌ಐ ಆಗಿದ್ದ ಜಂಬೂ ರಾಜ್‌ ಮಹಾಜನ್‌ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಸುಳ್ಯ ಸರ್ಕಲ್‌ ವ್ಯಾಪ್ತಿಯ ಬೆಳ್ಳಾರೆ ಹಾಗೂ ಸುಬ್ರಮಣ್ಯ ಪೊಲೀಸ್‌ ಠಾಣೆಗಳಿಗೆ ನೂತನ ವಾಗಿ ಪೊಲೀಸ್‌ ಉಪನಿರೀಕ್ಷಕರನ್ನು ನೇಮಕ ಗೊಳಿಸಿ ಪಶ್ವಿಮ ವಲಯ ಐಜಿಪಿ ದೇವಜ್ಯೋತಿರೇ ಆದೇಶಿಸಿದ್ದಾರೆ.

ಕುಂದಾಪುರ ಎಸ್‌ಐ ಆಗಿದ್ದ ಸುಹಾಸ್‌ ಅವರು ಬೆಳ್ಳಾರೆ ಠಾಣೆಗೆ , ವಿಟ್ಲ ಠಾಣಾ ಎಸ್‌ಐ ಆಗಿದ್ದ ಮಂಜುನಾಥ್‌ ಟಿ ಅವರನ್ನು ಸುಬ್ರಮಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿದೆ. 

error: Content is protected !!