Friday, 13th December 2024

ಅಧಿಕಾರಿಗಳ ಮೇಲೆ ಶಾಸಕ ಶಿವಾನಂದ ಪಾಟೀಲ್ ಒತ್ತಡ: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆರೋಪ

ಕೊಲ್ಹಾರ: ಕೂಡಗಿ ವಿದ್ಯುತ್ ಸ್ಥಾವರದ ಕೃತಕ ಕೆರೆಯ ನೀರು ಸಂಗ್ರಹದಿ0ದ ಮಸೂತಿ ಗ್ರಾಮದ ವ್ಯಾಪ್ತಿಯ ಸುಮಾರು ನಾಲ್ಕು ನೂರರಿಂದ ಐದು ನೂರು ಎಕರೆ ಫಲವತ್ತಾದ ಜಮೀನು ಜವುಳು ಉಂಟಾಗಿದ್ದು ಕೂಡಲೇ ಎನ್.ಟಿ.ಪಿ.ಸಿ ಅಧಿಕಾರಿ ಗಳು ರೈತರ ಜಮೀನುಗಳನ್ನು ಭೂಸ್ವಾಧಿನ ಪಡಿಸಿಕೊಂಡು ಸೂಕ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.

ಕೊಲ್ಹಾರ ಪಟ್ಟಣದಲ್ಲಿ ಮಾದ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಎನ್.ಟಿ.ಪಿ.ಸಿ ಪ್ರಾರಂಭದ ಸಂದರ್ಭದಲ್ಲಿ ನಾನು ಜಿಲ್ಲಾ ಉಸ್ತು ವಾರಿ ಸಚಿವನಾಗಿದ್ದೆ ಈ ಸಂದರ್ಭದಲ್ಲಿ ಜಿಲ್ಲೆಯ ಹಿತವನ್ನು ಪರಿಗಣ ಸಿ ವಿದ್ಯುತ್ ಸ್ಥಾವರವನ್ನು ಈ ಭಾಗಕ್ಕೆ ತರಬೇಕು ಎನ್ನುವ ಮಹಾತ್ವಾಕಾಂಕ್ಷೆ ಯಿ0ದ ಅಂದಿನ ಮುಖ್ಯಮಂತ್ರಿಗಳಲ್ಲಿ ಅರಿಕೆ ಮಾಡಿಕೊಂಡಾಗ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಸ್ಥಾವರವನ್ನು ಈ ಭಾಗಕ್ಕೆ ತರಲಾಯಿತು.

ಮುಳವಾಡ, ಚಿಮ್ಮಲಗಿ, ಗುತ್ತಿಬಸವಣ್ಣ ಏತನೀರಾವರಿಯಿಂದ ಜಿಲ್ಲೆಯ ೨೦ ಲಕ್ಷ ಎಕರೆ ಜಮೀನುಗಳಿಗೆ ನೀರು ಹರಿಯುತ್ತದೆ ಈ ನೀರನ್ನು ಲಿಫ್ಟ್ ಮೂಲಕ ತೆಗೆಯಬೇಕು ಇದಕ್ಕೆ ೧೫೦೦ ಮೆಗಾವ್ಯಾಟ್ ವಿದ್ಯುತ್ ಬೇಕು ಜಿಲ್ಲೆಯ ವಿದ್ಯುತ್ ಕೊರತೆ ಎನ್.ಟಿ.ಪಿ.ಸಿಯಿಂದ ನೀಗಿದೆ ಕೂಡಗಿ ವಿದ್ಯುತ್ ಸ್ಥಾವರದಿಂದ ಈ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ.

ವಿದ್ಯುತ್ ಸ್ಥಾವರ ಪ್ರಾರಂಭದ ಸಂದರ್ಭದಲ್ಲಿ ಸಂಬ0ಧಿಸಿದ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಿದ್ದೆ ಉತ್ಪಾದನೆಯ ಅರ್ಧಭಾಗ ವಿದ್ಯುತ್ ಕರ್ನಾಟಕಕ್ಕೆ ನೀಡಬೇಕು, ಭೂಮಿ ಕಳೆದುಕೊಂಡ ಈ ಭಾಗದ ರೈತಾಪಿವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಜೊತೆಗೆ ಸಂದರ್ಭಕ್ಕೆ ತಕ್ಕಂತೆ ಹಾನಿ ಯನ್ನು ಪರಿಗಣ ಸಿ ಪರಿಹಾರ ಕೊಡಬೇಕು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರದ ಜೊತೆಗೆ ಉದ್ಯೋಗ ನೀಡಬೇಕು ಇನ್ನು ಅನೇಕ ಷರತ್ತುಗಳನ್ನು ಹಾಕುವ ಮೂಲಕ ಈ ಭಾಗಕ್ಕೆ ಎನ್.ಟಿ.ಪಿ.ಸಿ ಯನ್ನು ಬರಮಾಡಿಕೊಳ್ಳಲಾಗಿತ್ತು.

ಅದರಂತೆ ಸದ್ಯ ಮಸೂತಿ ವ್ಯಾಪ್ತಿಯ ಸುಮಾರು ೫೦೦ ಎಕರೆ ಭೂಮಿ ಕೃತಕ ಕೆರೆಯಿಂದ ಜವುಳು ಹಿಡಿದಿರುವುದು ನನ್ನ ಗಮನಕ್ಕೆ ರೈತರು ತಂದಾಗ ಕೂಡಲೇ ಸ್ಥಾವರದ ಅಧಿಕಾರಿಗಳಿಗೆ ಹಾಗೂ ತಹಶಿಲ್ದಾರರಿಗೆ ದೂರವಾಣ ಮೂಲಕ ಮಾತನಾಡಿ ಸರ್ವೆ ಕಾರ್ಯ ಮಾಡುವಂತೆ ತಿಳಿಸಿದ್ದೆನೆ ಶೀಘ್ರದಲ್ಲಿಯೇ ಸರ್ವೆ ಕಾರ್ಯ ಮಾಡುವುದಾಗಿ ಅವರು ತಿಳಿಸಿದ್ದಾರೆ ಎಂದು ಹೇಳಿದರು. ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಕೊರತೆ ನೀಗಿದೆ ಜಿಲ್ಲೆ ಹಸಿರಿನಿಂದ ಕಂಗೊಳಿಸುತ್ತಿದೆ ಅನೇಕ ಸೌಲಭ್ಯಗಳು ಎನ್.ಟಿ.ಪಿ.ಸಿ ತಿಮಯಿಂದ ದೊರೆತಿವೆ ಎಂದು ಅವರು ಹೇಳಿದರು.

ಶಾಸಕ ಶಿವಾನಂದ ಪಾಟೀಲರ ಹಸ್ತಕ್ಷೇಪ ಬೆಳ್ಳುಬ್ಬಿ ಆರೋಪ: ಕೂಡಗಿ ವಿದ್ಯುತ್ ಸ್ಥಾವರದ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ಜಮೀನುಗಳ ವ್ಯಾಪ್ತಿಯ ಗ್ರಾಮ ಪಂಚಾಯತಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಬರುವ ಕೋಟಿ, ಕೋಟಿ ಅನುದಾನದ ಹಂಚಿಕೆಯಲ್ಲಿ ಶಾಸಕ ಶಿವಾನಂದ ಪಾಟೀಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರದೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುಲು ಬಂದಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಬಿಡಬೇಕು ಜೊತೆಗೆ ಆಶ್ರಯ ಮನೆಗಳ ಹಂಚಿಕೆಯಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಇದು ಸಲ್ಲ!. ಸದಸ್ಯರು ಹಂಚಿಕೆ ಮಾಡುವ ಮನೆಗಳಲ್ಲಿ ಶಾಸಕರು ಹಸ್ತಕ್ಷೇಪ ಮಾಡದೆ ನಿಗಮದಿಂದ ಹೆಚ್ಚಿನ ಮನೆಗಳನ್ನು ತರುವ ಮೂಲಕ ಹಂಚಿಕೆ ಮಾಡಲಿ ಎಂದು ಹೇಳಿದರು ಎಂದು ಹರಿಹಾಯ್ದರು.