ಬೆಂಗಳೂರು: ಬೆಂಗಳೂರು ನಗರದ (Bengaluru News) ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆ ವತಿಯಿಂದ ಶನಿವಾರ ಪಾರ್ಶ್ವವಾಯು ಜಾಗೃತಿ ಅಭಿಯಾನ ಘೋಷಿಸುವ ಮೂಲಕ ವಿಶ್ವ ಪಾರ್ಶ್ವವಾಯು ದಿನದ ಆಚರಣೆಗೆ ಚಾಲನೆ ನೀಡಲಾಯಿತು. ಭಾರತದಲ್ಲಿ ವ್ಯಾಪಕವಾಗುತ್ತಿರುವ ಪಾರ್ಶ್ವವಾಯು ವಿರುದ್ಧದ ಹೋರಾಟದಲ್ಲಿ ನಿರ್ಣಾಯಕರೆನಿಸಿಕೊಂಡಿರುವ ಆರೋಗ್ಯ ವೃತ್ತಿಪರರು, ಪಾಶ್ವವಾಯುವಿನಿಂದ ಪಾರಾದವರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಎಲ್ಲರನ್ನು ಈ ಯಶಸ್ವಿ ಕಾರ್ಯಕ್ರಮದಲ್ಲಿ ಒಂದುಗೂಡಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮೆಡಿಕವರ್ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ.ಪೂನಂ ಸಿ ಅವತಾರೆ ಮಾತನಾಡಿ, ಪಾರ್ಶ್ವವಾಯು ಸಮಸ್ಯೆಯು ಯುವಕರು ಮತ್ತು ವಯಸ್ಕರು ಸೇರಿದಂತೆ ಎಲ್ಲ ವಯೋಮಾನದವರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಜೀವನಶೈಲಿ ಹೊಂದಾಣಿಕೆಗಳು ಮತ್ತು ನಿಯಮಿತ ತಪಾಸಣೆಗಳು ಅತ್ಯಗತ್ಯ. ವಿಶೇಷವಾಗಿ ಅಪಾಯ ಹೆಚ್ಚಿರುವ ಜನರಿಗೆ ಸಮಸ್ಯೆ ಬಾಧಿಸದಂತೆ ನೋಡಿಕೊಳ್ಳುವುದಕ್ಕೆ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | DK Shivakumar: ಅಕ್ರಮ, ಕಳಪೆ ಗುಣಮಟ್ಟದ ಕಟ್ಟಡಗಳ ತೆರವಿಗೆ ಮುಲಾಜಿಲ್ಲದೆ ಕ್ರಮ; ಡಿ.ಕೆ. ಶಿವಕುಮಾರ್
ಎಮರ್ಜೆನ್ಸಿ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಕಲ್ಪಜಿತ್ ಬಾನಿಕ್, ಆರಂಭಿಕ ಎಚ್ಚರಿಕೆಯ ಕುರಿತು ಮಾತನಾಡಿ , ಪಾರ್ಶ್ವವಾಯು ಸೂಚನೆ ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವುದನ್ನು ‘ಸುವರ್ಣ ಅವಧಿ’ ಎಂದೇ ಕರೆಯುಲಾಗುತ್ತದೆ .ಈ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಚೇತರಿಕೆಯ ಅವಕಾಶ ಹೆಚ್ಚಿರುತ್ತದೆ ಹಾಗೂ ಗಣನೀಯ ಫಲಿತಾಂಶ ಪಡೆಬಹುದು. ಅದೇ ರೀತಿ ಜೀವ ಉಳಿಸಲು ಮತ್ತು ಜೀವನದ ಗುಣಮಟ್ಟ ಕಾಪಾಡಿಕೊಳ್ಳಲು ತ್ವರಿತ ನಿರ್ಣಯ ಅಗತ್ಯ ಎಂದು ಹೇಳಿದರು.
ಕನ್ಸಲ್ಟೆಂಟ್ ನ್ಯೂರೊಸರ್ಜನ್ ಡಾ.ಗಣೇಶ್ ಕೆ.ಮೂರ್ತಿ ಮಾತನಾಡಿ, ಪಾರ್ಶ್ವವಾಯು ಬಾಧಿಸಿ ಬದುಕುಳಿದರು ಮರಳಿ ಸ್ವಚ್ಛಂದ ಜೀವನ ನಡೆಸಲು ಪುನಶ್ಚೇತನದ ಅವಧಿ ಪ್ರಮುಖ ಹಂತವಾಗಿದೆ. ಸುಧಾರಿತ ನರಶಸ್ತ್ರಚಿಕಿತ್ಸಾ ವಿಧಾನಗಳೊಂದಿಗೆ ರೋಗಿಗಳ ಜೀವನದ ಗುಣಮಟ್ಟ ಹೆಚ್ಚಿಸುವ ಗುರಿಯನ್ನೂ ನಾವು ಹೊಂದಿರುತ್ತೇವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಅ. 28 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಅ.29 ರಂದು ವಾಕಥಾನ್ ಆಯೋಜನೆ
ಮೆಡಿಕವರ್ ಆಸ್ಪತ್ರೆ ವತಿಯಿಂದ ಅ.29 ರಂದು ನಿಗದಿಯಾಗಿರುವ ಈ ವಾಕಥಾನ್ ಪಾರ್ಶ್ವವಾಯು ಜಾಗೃತಿ ಮತ್ತು ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸಲು ಸಮುದಾಯವನ್ನು ಒಂದೆಡೆ ಸೇರಿಸುತ್ತದೆ.