Sunday, 8th September 2024

39 ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರ ನೇಮಕ

ಬೆಂಗಳೂರು: ರಾಜ್ಯದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿ ಅಧ್ಯಕ್ಷರನ್ನು ನೇಮಿಸಿದೆ. ಈ ಪೈಕಿ, 9 ಜಿಲ್ಲೆಗಳಲ್ಲಿ ಹಾಲಿ ಅಧ್ಯಕ್ಷರುಗಳನ್ನೇ ಮುಂದು ವರಿಸಲಾಗಿದೆ.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಕಟಣೆ ಹೊರಡಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪಕ್ಷದ ನಿಷ್ಠಾವಂತ ರನ್ನೂ ಗುರುತಿಸಿ ಜವಾಬ್ದಾರಿ ವಹಿಸಿದ್ದಾರೆ.

ಹಾಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಅವರಿಗೆ ರಾಯಚೂರು ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕರಾದ ಎಲ್.ನಾಗೇಂದ್ರ ಅವರಿಗೆ ಮೈಸೂರು ನಗರ ಜಿಲ್ಲಾಧ್ಯಕ್ಷ,ಸಿ.ಎಸ್.ನಿರಂಜನ್‌ಕುಮಾರ್ ಅವರಿಗೆ ಚಾಮರಾಜ ನಗರ ಜಿಲ್ಲಾಧ್ಯಕ್ಷ ಹಾಗೂ ಅರುಣ್ ಕುಮಾರ್ ಪೂಜಾರ್ ಅವರಿಗೆ ಹಾವೇರಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ.

39 ಜಿಲ್ಲಾಧ್ಯಕ್ಷರ ಪೈಕಿ, ಒಂದು ಜಿಲ್ಲೆಗೆ ಒಬ್ಬರು ಮಹಿಳೆಯರನ್ನು ನೇಮಿಸಲಾಗಿದೆ. ಬೆಳಗಾವಿ ನಗರ ಘಟಕದ ಅಧ್ಯಕ್ಷರನ್ನಾಗಿ ಗೀತಾ ಸುತಾ‌ರ್ ರನ್ನು ನೇಮಿಸಲಾಗಿದೆ.

ಧಾರವಾಡ ಗ್ರಾಮಾಂತರ ನಿಂಗಪ್ಪ ಸುತ್ತಗಟ್ಟಿ

ಬೆಳಗಾವಿ ನಗರ: ಗೀತಾ ಸುತಾರ್

ಬೆಳಗಾವಿ ಗ್ರಾಮಾಂತರ: ಸುಭಾಷ್ ಪಾಟೀಲ್

ಚಿಕ್ಕೋಡಿ: ಸತೀಶ್ ಅಪ್ಪಾಜಿಗೋಳ್

ಬಾಗಲಕೋಟೆ: ಶಾಂತಗೌಡ ಪಾಟೀಲ್

ವಿಜಯಪುರ: ಆರ್.ಎಸ್.ಪಾಟೀಲ್

ಬೀದರ್: ಸೋಮನಾಥ ಪಾಟೀಲ್

ಮೈಸೂರು ನಗರ ಎಲ್.ನಾಗೇಂದ್ರ

ಮೈಸೂರು ಗ್ರಾಮಾಂತರ ಎಲ್.ಆರ್.ಮಹಾದೇವಸ್ವಾಮಿ

ಚಾಮರಾಜನಗರ ಸಿ.ಎಸ್.ನಿರಂಜನ್ ಕುಮಾರ್

ಮಂಡ್ಯ ಇಂದ್ರೇಶ್ ಕುಮಾರ್

ಹಾವೇರಿ ಅರುಣ್ ಕುಮಾರ್ ಪೂಜಾರ

ದಾವಣಗೆರೆ: ರಾಜಶೇಖರ್

ತುಮಕೂರು: ಎಚ್.ಎಸ್.ರವಿಶಂಕರ(ಹೆಬ್ಬಾಕ)

ಬೆಂಗಳೂರು ಗ್ರಾಮಾಂತರ: ರಾಮಕೃಷ್ಣಪ್ಪ

ಚಿಕ್ಕಬಳ್ಳಾಪುರ: ರಾಮಲಿಂಗಪ್ಪ

ವಿಜಯನಗರ: ಚನ್ನಬಸವನಗೌಡ ಪಾಟೀಲ್

ಬಳ್ಳಾರಿ: ಅನಿಲ್ ಕುಮಾರ್ ಮೋಕಾ

ರಾಯಚೂರು: ಡಾ.ಶಿವರಾಜ ಪಾಟೀಲ್

ಕೊಪ್ಪಳ: ನವೀನ್ ಗುಳಗಣ್ಣನವರ್

ಯಾದಗಿರಿ: ಅಮೀನ್ ರೆಡ್ಡಿ

ಕೋಲಾರ: ಡಾ.ಕೆ.ಎನ್.ವೇಣುಗೋಪಾಲ್

ಬೆಂಗಳೂರು ಉತ್ತರ: ಎಸ್.ಹರೀಶ್

ಬೆಂಗಳೂರು ಕೇಂದ್ರ: ಸಪ್ತಗಿರಿಗೌಡ

ಬೆಂಗಳೂರು ದಕ್ಷಿಣ: ಕೆ.ಸಿ.ರಾಮಮೂರ್ತಿ

ಹುಬ್ಬಳ್ಳಿ-ಧಾರವಾಡ ತಿಪ್ಪಣ್ಣ ಮಜ್ಜಗಿ

ಉತ್ತರ ಕನ್ನಡ ಎನ್.ಎಸ್.ಹೆಗಡೆ

ಶಿವಮೊಗ್ಗ ಟಿ.ಡಿ.ಮೇಘರಾಜ್

ಚಿಕ್ಕಮಗಳೂರು ದೇವರಾಜ ಶೆಟ್ಟಿ

ಉಡುಪಿ ಕಿಶೋರ್ ಕುಂದಾಪುರ

ರಾಮನಗರ: ಆನಂದಸ್ವಾಮಿ

ಮಧುಗಿರಿ: ಬಿ.ಸಿ.ಹನುಮಂತೇಗೌಡ

ಚಿತ್ರದುರ್ಗ: ಎ.ಮುರಳಿ

ಕೊಡಗು ರವಿ ಕಾಳಪ್ಪ

ಹಾಸನ ಸಿದ್ದೇಶ್ ನಾಗೇಂದ್ರ

ಕಲಬುರಗಿ ಗ್ರಾಮಾಂತರ : ಶಿವರಾಜ ಪಾಟೀಲ್ ರದ್ದೇವಾರಿ

ಕಲಬುರಗಿ ನಗರ: ಚಂದ್ರಕಾಂತ ಪಾಟೀಲ್

ಗದಗ: ರಾಜು ಕುರಡಗಿ

ದಕ್ಷಿಣ ಕನ್ನಡ ಸತೀಶ್ ಕುಂಪಲ

Leave a Reply

Your email address will not be published. Required fields are marked *

error: Content is protected !!