Wednesday, 18th September 2024

ಏಳು ನೇಪಾಳಿಗಳ ಬಂಧನ: 1.53 ಕೋಟಿ ಮೌಲ್ಯದ ವಸ್ತು ವಶ

ಬೆಂಗಳೂರು: ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನವಾದ ಒಂದು ತಿಂಗಳ ನಂತರ ಪೊಲೀಸರು ಏಳು ನೇಪಾಳಿಗಳ ತಂಡವನ್ನು ಬಂಧಿಸಿ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಉಪೇಂದ್ರ, ನಾರಾ ಬಹದ್ದೂರ್, ಖಕೇಂದ್ರ ಶಾಹಿ, ಕೋಮಲ್, ಸ್ವಸ್ತಿಕಾ, ಪಾರ್ವತಿ ಮತ್ತು ಶಾದಲಾ ಎಂದು ಗುರುತಿಸಲಾಗಿದೆ.

ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ನಿವಾಸದಿಂದ ಆರೋಪಿಗಳು ಸುಮಾರು ಐದು ಕೆಜಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದರು.

ಅಕ್ಟೋಬರ್ 21 ಮತ್ತು 29 ರ ನಡುವೆ ಟಿ.ಎನ್. ಬ್ರಮರೇಶ್ ಅವರ ನಿವಾಸದಲ್ಲಿ ಅವರು ಮತ್ತು ಅವರ ಕುಟುಂಬ ಗ್ರೀಸ್‌ಗೆ ಪ್ರವಾಸಕ್ಕೆ ತೆರಳಿದ್ದಾಗ ಕಳ್ಳತನ ನಡೆದಿತ್ತು. ಮನೆಯವರು ರಜೆ ಮುಗಿಸಿ ಮರಳಿದ ಬಳಿಕ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳ ಪೈಕಿ ಒಬ್ಬಾತ ಬ್ರಮರೇಶ್ ನಿವಾಸದ ಪಕ್ಕದಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಒಂದು ತಿಂಗಳಿನಿಂದ ಬ್ರಮರೇಶ್ ಅವರ ಮನೆಯವರ ಚಲನವಲನಗಳನ್ನು ಗಮನಿಸಿದ ತಂಡವು ಕಳ್ಳತನ ಮಾಡುವ ಮೊದಲು ಕುಟುಂಬ ರಜೆಗೆ ಹೋಗಲು ಕಾಯುತ್ತಿತ್ತು. ಪ್ರಮುಖ ಆರೋಪಿ ಉಪೇಂದ್ರ ಅಪರಾಧಿಯಾಗಿದ್ದು, ಆತನ ವಿರುದ್ಧ ನಗರ ಠಾಣೆಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *