-ಶೀಲಾ ಸಿ. ಶೆಟ್ಟಿ, ಬೆಂಗಳೂರು (ಲೇಖಕಿ, ಫ್ಯಾಷನ್ ಪತ್ರಕರ್ತೆ)
ಮುಂಬರುವ ಋತುಗಳಿಗೆ (Seasons) ಈಗಾಗಲೇ ನಿರ್ಧರಿಸಲಾಗಿರುವ ವೇರಬಲ್ ಹಾಗೂ ನಾನ್ ವೇರಬಲ್ ಕೆಟಗರಿಯ ವೈವಿಧ್ಯಮಯ ಡಿಸೈನರ್‌ವೇರ್‌ಗಳು (Designer Wears) ಪ್ರತಿಷ್ಠಿತ ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ (New York Fashion Week) ಅನಾವರಣಗೊಂಡವು. ಊಹೆಗೂ ಮೀರಿದ ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳು ಭಾಗವಹಿಸಿದ್ದ ಡಿಸೈನರ್‌ಗಳ ಸೃಜನಶೀಲತೆಗೆ (Creativity) ಕನ್ನಡಿ ಹಿಡಿದಂತಿದ್ದವು. ವಿಶೇಷವೆಂದರೇ, ಭಾರತೀಯ ಮೂಲದ ಕಮಲ್ ಹಾಸನ್ ಹೌಸ್ ಆಪ್ ಖಾದ್ದರ್‌ನ ಸತುರಾ ಕ್ರಿಯೇಷನ್‌ನ ಸಸ್ಟೈನಬಲ್ ಡಿಸೈನರ್‌ವೇರ್‌ಗಳು ಈ ಫ್ಯಾಷನ್ ವೀಕ್‌ನಲ್ಲಿ ಬಿಡುಗಡೆಗೊಂಡವು.
ಪ್ರತಿಭಾನ್ವಿತ ಡಿಸೈನರ್‌ಗಳ ವೇದಿಕೆ
ಇತ್ತೀಚೆಗೆ ನಡೆದ ಪ್ಯಾರಿಸ್ ಹಾಗೂ ಮಿಲಾನ್ ಫ್ಯಾಷನ್ ವೀಕ್‌ಗೆ ಹೋಲಿಸಿದಲ್ಲಿ, ಇಲ್ಲಿ ಅತಿ ಹೆಚ್ಚಾಗಿ ವೆಸ್ಟರ್ನ್ ಲೈಫ್‌ಸ್ಟೈಲ್ ಹಾಗೂ ಇಮ್ಯಾಜಿನೇಷನ್‌ಗೆ ಪ್ರಾಮುಖ್ಯತೆ ನೀಡಲಾಗಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಕೌನ್ಸಿಲ್ ಆಫ್ ಫ್ಯಾಷನ್ ಡಿಸೈನರ್ಸ್ ಆಫ್ ಅಮೆರಿಕಾ ಆಯೋಜಿಸಿದ್ದ, ಈ ಫ್ಯಾಷನ್ ವೀಕ್ ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳೊಂದಿಗೆ ಪ್ರತಿಭಾನ್ವಿತ ಡಿಸೈನರ್‌ಗಳಿಗೆ ಸದಾವಕಾಶ ನೀಡಿತ್ತು.
ಈ ಸುದ್ದಿಯನ್ನೂ ಓದಿ | Eid Milad 2024: ಈದ್ ಮಿಲಾದ್ ಸೆಲೆಬ್ರೆಷನ್‌ಗೆ ಬಂತು ಬಗೆಬಗೆಯ ಬ್ಯಾಂಗಲ್ಸ್!
ಗಮನ ಸೆಳೆದ ರನ್‌ವೇ ಫ್ಯಾಷನ್ ವಾಕ್
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಮುಂಬರುವ ವಸಂತ ಕಾಲ ಹಾಗೂ ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಡಿಸೈನ್ ಮಾಡಲಾದ ಡಿಸೈನರ್‌ವೇರ್‌ಗಳು ಅಲ್ಲಿನ ಸ್ಪ್ರಿಂಗ್-ಸಮ್ಮರ್‌ಗಾಗಿಯೇ ಮೀಸಲಾಗಿರುವುದು ಹೈ ಲೈಟ್ ಆಯಿತು. ಇನ್ನು, ಸರಿ ಸುಮಾರು 60 ಕ್ಕೂ ಹೆಚ್ಚು ಡಿಸೈನರ್‌ಗಳ ಕ್ರಿಯೇಟಿವಿಟಿಗೆ ಸಾಕ್ಷಿಯಾದ ರನ್‌ವೇ ಫ್ಯಾಷನ್ ರ್ಯಾಂಪ್ ವಾಕ್ ಮಾತ್ರ ಅತ್ಯದ್ಭುತವಾಗಿ ನಡೆಯಿತು ಎನ್ನುತ್ತಾರೆ ಫ್ಯಾಷನಿಸ್ಟಾ ಜಯ್.
ಹೊಸತನ ಮೂಡಿಸಿದ ಡಿಸೈನರ್‌ವೇರ್ಸ್
ಅಂದ ಹಾಗೆ, ಕಳೆದ ವೀಕೆಂಡ್‌ನಲ್ಲಿ ಆರಂಭಗೊಂಡು ಮುಂದುವರೆದಿರುವ ಈ ರನ್‌ವೇ ಫ್ಯಾಷನ್ ಶೋನಲ್ಲಿ, ಹೈ ಫ್ಯಾಷನ್ ಬ್ರಾಂಡ್‌ಗಳಾದ ಟಾಮಿ ಹಿಲ್‌ಫಿಗರ್, ಕಿಮ್ ಶುಯಿ, ಬ್ರಾಂಡಾನ್ ಮಾಕ್ಸ್ವೆಲ್, ಫಿಲಿಫ್ ಲಿಮ್ ಸೇರಿದಂತೆ ನಾನಾ ಬ್ರಾಂಡ್‌ಗಳು ಕ್ರಿಯೇಟಿವ್ ನಯಾ ಡಿಸೈನರ್‌ವೇರ್‌ಗಳನ್ನು ಅನಾವರಣ ಮಾಡಿದವು. ಅಲ್ಲದೇ, ಹೀಗೂ ಡಿಸೈನ್ ಮಾಡಬಹುದಾ! ಎಂಬುದನ್ನು ಭಾವಿ ಡಿಸೈನರ್‌ಗಳಿಗೆ ಮಾದರಿ ಕಲಿಕೆಯಂತೆ ಪ್ರದರ್ಶಿಸಿದವು ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.
ಫಾಲ್ ವಿಂಟರ್ ಫ್ಯಾಷನ್‌ವೇರ್ ಅನಾವರಣ
ಮುಂಬರುವ 2025 ಸೀಸನ್‌ವೇರ್‌ಗಳನ್ನು ಈಗಲೇ ಅನಾವರಣಗೊಳಿಸಿದ ಬ್ರಾಂಡ್‌ಗಳ ನಡುವೆ ಈ ಸಾಲಿನ ಮುಂಬರುವ ಫಾಲ್ ವಿಂಟರ್ ಫ್ಯಾಷನ್‌ವೇರ್‌ಗಳ ಪ್ರದರ್ಶನ ಪ್ರಸ್ತುತ ಟ್ರೆಂಡ್‌ಗೆ ಮ್ಯಾಚ್ ಆಗುವಂತಿದ್ದವು.
ಈ ಸುದ್ದಿಯನ್ನೂ ಓದಿ | Ghee Tea: ಸಖತ್ ಟ್ರೆಂಡಿಂಗ್‌ನಲ್ಲಿದೆ ತುಪ್ಪದ ಚಹಾ! ಏನಿದರ ಪ್ರಯೋಜನ?
ಒಟ್ಟಾರೆ, ಈ ರೀತಿಯ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ ವೀಕ್‌ಗಳು, ಡಿಸೈನಿಂಗ್ ಕ್ಷೇತ್ರದಲ್ಲಿ ಹೊಸತನವನ್ನು ಅನಾವರಣ ಮಾಡುವುದರೊಂದಿಗೆ ಭಾವಿ ಡಿಸೈನರ್‌ಗಳಿಗೆ ಹೊಸ ವಿನ್ಯಾಸದ ಕಲಿಕೆಗೆ ಸಹಕರಿಸುತ್ತವೆ ಎಂಬುದು ಫ್ಯಾಷನ್ ಎಕ್ಸ್‌ಪರ್ಟ್‌ಗಳ ಅಭಿಪ್ರಾಯವಾಗಿದೆ.