Thursday, 14th November 2024

ವಾಕಿಂಗ್ ಮಾಡುತ್ತಿದ್ದ ವೃದ್ದೆ, ಮೊಮ್ಮಗಳಿಗೆ ಕಾರು ಡಿಕ್ಕಿ

ಬೆಂಗಳೂರು: ವಾಕಿಂಗ್ ಮಾಡುತಿದ್ದ ವೃದ್ದೆ ಮತ್ತು ಮೊಮ್ಮಗಳ ಮೇಲೆ ಕಾರು ಡಿಕ್ಕಿಯಾಗಿ, ಇಬ್ಬರಿಗೂ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ಘಟನೆ ನಡೆದಿದ್ದು, ಶೀಲಾ ಎನ್ನುವ ವೃದ್ಧೆ, ಮೊಮ್ಮಗಳ ಜೊತೆ ಫುಟ್ಬಾತ್ ನಲ್ಲಿ ವಾಕಿಂಗ್ ಎಂದು ತೆರಳಿದ್ದಾಗ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವೃದ್ಧೆ ಇನ್ನು ಮೊಮ್ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರು ಏಕಾಏಕಿ ಹಾದುಹೋಗಿರುವ ದಿಂದ ಶೀಲ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತೀ ವೇಗದಿಂದ ಕಾರು ಚಾಲನೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಮೊಮ್ಮಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ಅತಿ ವೇಗವಾಗಿ ಚಾಲನೆ ಮಾಡಿದ ಚಾಲಕನನ್ನು ಕುಮಾರ್ ಎಂದು ಗುರುತಿಸಲಾಗಿದೆ. ಮೊದಲಿಗೆ ಇಬ್ಬರಿಗೂ ಕಾರು ಡಿಕ್ಕಿ ಆಗಿ ನಂತರ ಬೈಕಿಗೆ ಡಿಕ್ಕಿ ಯಾಗಿತ್ತು. ಬೈಕ್ ಎಡಕ್ಕೆ ಹೊಡೆದು ಕಾಂಪೌಂಡಿಗೆ ಕಾರು ಡಿಕ್ಕಿಯಾಗಿದೆ.

ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲ ನಡೆಸುತ್ತಿದ್ದಾರೆ.