ಬೆಂಗಳೂರು: ಪ್ರಸ್ತುತ ಬೆಂಗಳೂರು ಮತ್ತು ಟೋಕಿಯೊ ನಡುವೆ ತಡೆರಹಿತ ವಿಮಾನ ಸೇವೆಯನ್ನು ಜಪಾನ್ ಏರ್‌ಲೈನ್ಸ್ (ಜೆಎಎಲ್) ನಿರ್ವಹಿಸುತ್ತಿದೆ. ಜೆಎಎಲ್ ಈಗ ಆಗಸ್ಟ್ ೬, ೨೦೨೨ರಿಂದ ವಾರಕ್ಕೆ ಎರಡು ಬಾರಿಯಿಂದ ಮೂರು ಬಾರಿ ವಿಮಾನಗಳ ಆವರ್ತನ ಹೆಚ್ಚಿಸಿದೆ. ಈ ಹೆಚ್ಚುವರಿ ವಿಮಾನವು ಜಪಾನ್‌ನಿಂದ ಮತ್ತು ಅಲ್ಲಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾಗಳಿಗೆ ಹಾಗೂ ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಮತ್ತೊಂದು ಅನುಕೂಲಕರ ಆಯ್ಕೆಯಾಗಿದೆ.
೨೦೨೦ರಲ್ಲಿ ತನ್ನ ಪ್ರಾರಂಭಿಕ ಅಭಿಯಾನ `ಕ್ಲೌಡ್ ಸರ್ವೀಸ್ ದಟ್ ಟೆಕೀಸ್ ಆರ್ ಲುಕಿಂಗ್ ಫಾರ್ವರ್ಡ್ ಟು(ಟೆಕಿಗಳು ನಿರೀಕ್ಷಿ ಸುವ ಕ್ಲೌಡ್ ಸೇವೆ’ ಎಂದಿರುವ ಜೆಎಎಲ್ ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಬೆಂಗಳೂರು ಮತ್ತು ಜಪಾನ್(ನರಿಟಾ) ನಡುವೆ ಮೊದಲ ಮತ್ತು ಏಕೈಕ ನೇರ ವಿಮಾನವನ್ನು ಉದ್ಘಾಟಿಸಿತು. ಕೋವಿಡ್-೧೯ ಸಾಂಕ್ರಾಮಿಕದಿಂದ ಈ ವಿಮಾನಯಾನ ಸಂಸ್ಥೆಯು ಅಗತ್ಯವಿದ್ದಾಗ ಮಾತ್ರ ವಿಶೇಷ ವಿಮಾನಗಳ ಹಾರಾಟ ನಡೆಸಿತು. ಭಾರತ ಸರ್ಕಾರದ ಏರ್ ಬಬಲ್ ಅರೇಂಜ್‌ಮೆ0ಟ್ ಅಡಿಯಲ್ಲಿ ಜೆಎಎಲ್ ಮಾರ್ಚ್ ೨೦೨೧ರಿಂದ ವಾರಕ್ಕೆ ಒಂದು ನಿಯಮಿತ ವಿಮಾನಗಳ ಕಾರ್ಯಾಚರಣೆ ನಡೆಸಿತು.
ವಿಶ್ವದಾದ್ಯಂತ ಸಾಂಕ್ರಾಮಿಕದಿಂದ ಕ್ರಮೇಣ ಚೇತರಿಸಿಕೊಂಡ ನಂತರ ಜೆಎಎಲ್ ತನ್ನ ವಿಮಾನಗಳ ಆವರ್ತನ ಹೆಚ್ಚಿಸಿತು. ಈ ವಿಮಾನಯಾನ ಸಂಸ್ಥೆಯ ಹೊಸ ವಿಮಾನದ ವೇಳಾಪಟ್ಟಿಯಂತೆ ವಾರಕ್ಕೆ ಮೂರು ರೌಂಡ್‌ಟ್ರಿಪ್ ವಿಮಾನಗಳು ಸಂಚರಿಸುತ್ತವೆ. ಜೆಎಎಲ್ ದಿನಕ್ಕೆ ಒಂದು ವಿಮಾನ ಕಾರ್ಯಾಚರಣೆ ಮಾಡುವ ಮೂಲ ಯೋಜನೆಯತ್ತ ಶ್ರಮಿಸುತ್ತಿದೆ.
ಬೆಂಗಳೂರಿನಿAದ ಟೋಕಿಯೊ(ನರಿಟಾ)ಗೆ ನೇರ ವಿಮಾನಗಳ ಹಾರಾಟ ಮರು ಪ್ರಾರಂಭವನ್ನು ಸಂಭ್ರಮಿಸಲು ಜೆಎಎಲ್ ಮತ್ತು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಜೆಎಲ್ ೭೫೪ ವಿಮಾನದ ಚೆಕ್-ಇನ್ ಕೌಂಟರ್ ನಲ್ಲಿ ದೀಪ ಬೆಳಗುವ ಮತ್ತು ಆಗಸ್ಟ್ ೫, ೨೦೨೨ರಂದು ರಾತ್ರಿ ನಿರ್ಗಮನದ ಮುನ್ನ ಹೆಬ್ಬಾಗಿಲು ತೆರೆಯುವ ಸಂಭ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಬೃಹತ್ ಹಾಗೂ ಮಧ್ಯಮ ಹಂತದ ಕೈಗಾರಿಕೆಗಳ ಸಚಿವ ಡಾ.ಮುರುಗೇಶ್ ಆರ್.ನಿರಾಣಿ ಮತ್ತು ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಐಎಎಸ್ ಉಪಸ್ಥಿತ ರಿದ್ದರು. ಅವರಿಬ್ಬರೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಜಪಾನ್‌ಗೆ ಜೆಎಲ್೭೫೪ನಲ್ಲಿ ಸಂಚರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಪಾನ್ ಏರ್‌ಲೈನ್ಸ್ನ ಉಪಾಧ್ಯಕ್ಷ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ಶ್ರೀ ಶಿನ್ಯಾ ನರುಸೆ, “ಬೆಂಗಳೂರಿನಲ್ಲಿ ಹೆಚ್ಚು ಅನುಕೂಲಕರ ವಿಮಾನಗಳ ಮೂಲಕ ಬೆಂಗಳೂರಿನಲ್ಲಿ ಸಮುದಾಯಕ್ಕೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸಲು ಪ್ರಗತಿಗೆ ನಾವು ಬಹಳ ಉತ್ಸುಕರಾಗಿದ್ದೇವೆ ಮತ್ತು ಆದ್ದರಿಂದ ಉತ್ತರ ಅಮೆರಿಕಾಗೆ ಸಂಪರ್ಕಿಸಲು ಹೆಚ್ಚಿನ ಆಯ್ಕೆ ಗಳನ್ನು ಕೂಡಾ ಒದಗಿಸುತ್ತಿದ್ದೇವೆ. ಭಾರತ ಮತ್ತು ಜಪಾನ್ ನಡುವೆ ಸಂಚರಿಸುವ ನಮ್ಮ ಅತಿಥಿಗಳಿಗೆ ಅತ್ಯುತ್ತಮ ಸುರಕ್ಷತೆ ಮತ್ತು ಸೌಖ್ಯ ಒದಗಿಸಲು ನಾವು ಶ್ರಮಿಸುವುದನ್ನು ಮುಂದುವರಿಸುತ್ತೇವೆ ಮತ್ತು ಹಾಗೆ ಮಾಡುವಲ್ಲಿ ಎರಡೂ ದೇಶಗಳ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯಗಳಿಗೆ ಕೊಡುಗೆ ನೀಡುತ್ತೇವೆ” ಎಂದರು.
“ಬಿಐಎಎಲ್‌ನಲ್ಲಿ ನಮ್ಮ ಪ್ರಮುಖ ಕಾರ್ಯತಂತ್ರೀಯ ಆದ್ಯತೆಗಳಲ್ಲಿ ಒಂದು ನಮ್ಮ ಪ್ರಯಾಣಿಕರ ಪ್ರಮಾಣ ಹೆಚ್ಚಾದಂತೆ ಪ್ರಮುಖ ಅಂತರರಾಷ್ಟ್ರೀಯ ತಾಣಗಳಿಗೆ ತಡೆರಹಿತ ಕನೆಕ್ಟಿವಿಟಿ ಹೆಚ್ಚಿಸುವುದಾಗಿದೆ. ಜಪಾನ್ ಭಾರತದಿಂದ ವಾಣಿಜ್ಯ ಹಾಗೂ ವಿರಾಮದ ಪ್ರಯಾಣಿಕರಿಂದ ನೇರ ವಿಮಾನಗಳಿಗೆ ಅಪಾರ ಮಾರುಕಟ್ಟೆ ಸಾಮರ್ಥ್ಯ ಹೊಂದಿದೆ.
ದಕ್ಷಿಣ ಭಾರತದಿಂದ ಜಪಾನ್‌ಗೆ ನೇರ ಸಂಪರ್ಕವಿರುವ ಏಕೈಕ ವಿಮಾನ ನಿಲ್ದಾಣ ನಮ್ಮದಾಗಿದೆ. ಆದ್ದರಿಂದ ಜಪಾನ್ ಏರ್ ಲೈನ್ಸ್ನಿಂದ ಟೋಕಿಯೊ ನರಿಟಾ ವಿಮಾನ ನಿಲ್ದಾಣಕ್ಕೆ ಮೂರನೇ ವಾರದ ವಿಮಾನ ಸೇರ್ಪಡಿಕೆ ಮಾಡಲು ಉತ್ಸುಕ ರಾಗಿದ್ದೇವೆ, ಇದು ಭಾರತ ಮತ್ತು ಜಪಾನ್ ನಡುವೆ ಹಾಗೂ ಜಪಾನ್ ಆಚೆಗೂ ಜನರು ಸಂಚರಿಸಲು ಮತ್ತಷ್ಟು ಅನುಕೂಲ ಕಲ್ಪಿಸುತ್ತದೆ” ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಚೀಫ್ ಸ್ಟಾçಟಜಿ ಅಂಡ್ ಡೆವಲಪ್ ಮೆಂಟ್ ಆಫೀಸರ್ ಶ್ರೀ ಸಾತ್ಯಕಿ ರಘುನಾಥ್ ಹೇಳಿದರು.
ಜೆಎಎಲ್ ಬೋಯಿಂಗ್ ೭೮೭-೮ ವಿಮಾನಗಳ ಮೂಲಕ ೩೦ ಬಿಸಿನೆಸ್ ಕ್ಲಾಸ್ ಮತ್ತು ೧೫೬ ಇಕಾನಮಿ ಕ್ಲಾಸ್ ಪ್ರಶಸ್ತಿ ಪುರಸ್ಕೃತ ಸೀಟುಗಳೊಂದಿಗೆ ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತದೆ. ವಿಮಾನದ ವೇಳಾಪಟ್ಟಿಯಂತೆ ಬೆಂಗಳೂರಿನಲ್ಲಿ ಮಧ್ಯ ರಾತ್ರಿಯಲ್ಲಿ ನಿರ್ಗಮಿಸುತ್ತದೆ ಗ್ರಾಹಕರು ಅನುಕೂಲಕರವಾಗಿ ಜಪಾನ್‌ನಲ್ಲಿ ಇಳಿದು ಮರುದಿನದ ಇಡೀ ದಿನದ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಬಹುದು. ಅಲ್ಲದೆ ಜೆಎಎಲ್ ನೇರವಾಗಿ ಉತ್ತರ ಅಮೆರಿಕಾಗೆ ಟೋಕಿಯೊ ನರಿಟಾ ವಿಮಾನ ನಿಲ್ದಾಣದಿಂದ ೧೧ ತಾಣಗಳಿಗೆ ಸಂಪರ್ಕಿಸುವುದರಿAದ ಇದು ಪ್ರಯಾಣಿಕರಿಗೆ ಸಾಕಷ್ಟು ಬಿಡುವು ನೀಡುತ್ತದೆ.
ಜೆಎಎಲ್‌ನ ಸ್ಕೆöÊಟ್ರಾಕ್ಸ್-೫ ಸ್ಟಾರ್ ವಿಮಾನದಲ್ಲಿ ಪ್ರಯಾಣಿಕರು ಸಂಪೂರ್ಣ ಮನಃಶ್ಯಾಂತಿಯಿAದ ಸಂಚರಿಸಬಹುದು. ಜೆಎಎಲ್ ೫-ಸ್ಟಾರ್ ಕೋವಿಡ್-೧೯ ಏರ್‌ಲೈನ್ ಸೇಫ್ಟಿ ರೇಟಿಂಗ್ ಮತ್ತು ಅಪೆಕ್ಸ್(ಏರ್‌ಲೈನ್ ಪ್ಯಾಸೆಂಜರ್ ಎಕ್ಸ್ಪೀರಿಯೆನ್ಸ್ ಅಸೋಸಿಯೇಷನ್)ಗೆ ಕೋವಿಡ್-೧೯ ಸುರಕ್ಷತೆಯ ಕ್ರಮಗಳಿಗೆ ಪ್ರಮಾಣೀಕರಣಗಳನ್ನು ಪಡೆದಿದೆ. ಜೆಎಎಲ್ ಸುರಕ್ಷತೆ, ಸುಸ್ಥಿರತೆ ಮತ್ತು ಅತಿಥಿಗಳ ಒಟ್ಟಾರೆ ಅನುಭವಕ್ಕೆ ಅಪೆಕ್ಸ್ನ ಉದ್ಘಾಟನೆಯ ವರ್ಲ್ಡ್ ಕ್ಲಾಸ್ ೨೦೨೨ ಪ್ರಮಾಣೀಕರಣ ಪಡೆದ ಏಳು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ.