Tuesday, 15th October 2024

ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ರಂಗೇರಿಸಲಿರುವ ಷಾ

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಕರ್ನಾಟಕಕ್ಕೆ ಗೃಹ ಸಚಿವ ಅಮಿತ್‌ ಷಾ ಎರಡು ದಿನಗಳ ಭೇಟಿಯನ್ನು ಡಿ.29 ರಿಂದ ಆರಂಭಿಸಲಿದ್ದು, ದಕ್ಷಿಣ ರಾಜ್ಯಗಳ ಪೈಕಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕದಲ್ಲಿ ಚುನಾವಣೆ ಕಣ ರಂಗೇರಲಿದೆ.

ಪಕ್ಷದ ವಿರುದ್ಧ ಜನರಲ್ಲಿ ಬೇಸರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಷಾ ಭೇಟಿ ಅತ್ಯಂತ ಮಹತ್ವದ್ದಾಗಿದೆ. ಇನ್ನೊಂದೆಡೆ ಬಿಜೆಪಿಗೆ ರಾಜ್ಯದಲ್ಲಿ ಆಂತರಿಕ ಒಳಜಗಳಗಳೂ ಕಾಡು ತ್ತಿವೆ.

ಸಂಘಟನೆಯ ಸಾಮರ್ಥ್ಯವನ್ನು ಬಳಸಿಕೊಂಡು ಆಡಳಿತ ವಿರೋಧಿ ಅಲೆಯನ್ನು ಬುಡ ಮೇಲು ಮಾಡುವ ಮತ್ತು ಅದ್ಭುತ ಕಾರ್ಯತಂತ್ರವನ್ನು ಹಮ್ಮಿಕೊಳ್ಳುವ ಅವರ ಅದ್ಭುತ ಸಾಮರ್ಥ್ಯ ಎಲ್ಲರಿಗೂ ತಿಳಿದಿರುವುದರಿಂದ, ಸಂಘಟನಾ ಒಗ್ಗಟ್ಟು, ಚುನಾವಣಾ ಕಾರ್ಯ ತಂತ್ರ ಮತ್ತು ಆಡಳಿತದ ಬಗ್ಗೆ ಒಲವು ಮೂಡಿಸುವ ವಿಚಾರದಲ್ಲಿ ಶಾ ಕರ್ನಾಟಕ್ಕೆ ಭೇಟಿ ನೀಡುವ ಈ ಸಮಯದಲ್ಲಿ ಎಲ್ಲವನ್ನೂ ಸರಿ ಮಾಡುತ್ತಾರೆ ಎಂಬ ಭಾವನೆ ವ್ಯಕ್ತವಾಗಿದೆ.

ಬಿಜೆಪಿ ಸಂಘಟನೆ ಮತ್ತು ಚುನಾವಣಾ ಕಾರ್ಯತಂತ್ರದ ವಿಷಯದಲ್ಲಿ 2014 ರಿಂದಲೂ ಷಾ ಅತ್ಯಂತ ಪ್ರಮುಖ ಪಾತ್ರ ವಹಿಸು ತ್ತಿದ್ದಾರೆ. ಅಂದಿನಿಂದಲೂ, ತನ್ನ ಸಂಘಟನಾ ಚಾತು ರ್ಯ ಮತ್ತು ಚುನಾವಣಾ ಕೌಶಲ ಮತ್ತು ಪ್ರಧಾನಿ ಮೋದಿಯ ಜನಪ್ರಿಯತೆಯನ್ನು ಬಳಸಿಕೊಂಡು ಹಲವು ಚುನಾವಣೆ ಗಳನ್ನು ಎದುರಿಸಿದ್ದಾರೆ. ಈಶಾನ್ಯ ರಾಜ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಗತಿಯ ರೂಪುರೇಷೆ ರೂಪಿಸಿದ್ದೇ ಅವರು ಮತ್ತು ಈ ಪ್ರದೇಶಗಳಲ್ಲಿ ಹಿಂದೆಂದೂ ಬಿಜೆಪಿ ತನ್ನ ನೆಲೆಯನ್ನು ಹೊಂದಿರಲಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಸ್ವಂತ ವಾಗಿ ಚುನಾವಣೆ ಎದುರಿಸುವ ನಿರ್ಧಾರ ಮಾಡಿದರು. ಅದು ಕೂಡಾ ಉತ್ತಮ ಫಲ ಕೊಟ್ಟಿತ್ತು.

ಸಂಘಟನಾತ್ಮಕ ನಿರ್ಧಾರ ಮತ್ತು ಚುನಾವಣಾ ಕಾರ್ಯತಂತ್ರದ ವಿಷಯದಲ್ಲಿ ನಿರಂತರವಾಗಿ ಷಾ ಪ್ರಮುಖ ಪಾತ್ವ ವಹಿಸು ತ್ತಿದ್ದಾರೆ. ಕೇಂದ್ರ ಗೃಹ ಸಚಿವ ಹುದ್ದೆಯನ್ನು ವಹಿಸಿಕೊಂಡ ಮೇಲೆಯೂ ಅದನ್ನು ಅವರು ಮುಂದುವರಿಸಿದ್ದಾರೆ. 2021 ವಿಧಾನ ಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪಕ್ಷ ಅದ್ಭುತ ಪ್ರಗತಿ ಸಾಧಿಸುವುದಕ್ಕೆ ಅವರು ಕಾರಣರು. ಅತ್ಯಂತ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಮತ ಪ್ರಮಾಣ 2016 ರಲ್ಲಿ 10% ರಿಂದ 38% ಕ್ಕೆ ಏರಿಕೆಯಾಗಿತ್ತು ಮತ್ತು 3 ರಿಂದ 77 ಕ್ಕೆ ಹೆಚ್ಚಳ ಕಂಡಿತ್ತು.

2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಕೂಡಾ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಣರಂಗ ಅತ್ಯಂತ ಕ್ಲಿಷ್ಟವಾಗಿದೆ ಎನಿಸಿದಾಗ, ಷಾ ಮಧ್ಯ ಪ್ರವೇಶಿಸಿ, ಕಾರ್ಯತಂತ್ರವನ್ನು ರೂಪಿಸಿದರು. ಪಶ್ಚಿಮ ಉ.ಪ್ರದಲ್ಲಿನ ಜಾಟರು ಮತ್ತು ಗುರ್ಜರ್‌ಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಿ ರೈತರ ಪ್ರತಿಭಟನೆಯ ಪರಿಣಾಮವನ್ನು ಕಡಿಮೆ ಮಾಡಿದರು. ಪ್ರಧಾನಿ ಮೋದಿ ಜನಪ್ರಿಯತೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಮೂಲಕ ಅದನ್ನು ಮತಗಳನ್ನಾಗಿ ಪರಿವರ್ತಿಸಿದರು. ಸಮಾಜವಾದಿ ಪಕ್ಷದಿಂದಾಗಿ ಉಂಟಾಗಿದ್ದ ಒಬಿಸಿ ಮತ್ತು ಮುಸ್ಲಿಮ್‌ ಸಂಘನೆಯ ಆಘಾತವನ್ನು ಕಡಿಮೆ ಮಾಡಲು ಇದು ಅತ್ಯಂತ ಅಗತ್ಯ ದ್ದಾಗಿತ್ತು.

ಕರ್ನಾಟಕಕ್ಕೆ ಅವರು ಭೇಟಿ ನೀಡಿದ ಸಮಯದಲ್ಲಿ, ಬಿಜೆಪಿಯ ಆಯಕಟ್ಟಿನ ಸ್ಥಾನದಲ್ಲಿರುವವರ ಜೊತೆಗೆ ಸಂಘಟನಾತ್ಮಕ ಸಭೆಗಳನ್ನು ನಡೆಸಿ, ಬೇರು ಮಟ್ಟದಲ್ಲಿನ ಪರಿಸ್ಥಿತಿಗಳನ್ನು ಅವರು ತಮ್ಮ ಎರಡು ದಿನಗಳ ಭೇಟಿಯಲ್ಲಿ ವಿಶ್ಲೇಷಿಸಲಿದ್ದಾರೆ. ಇದರ ಜೊತೆಗೆ ಅವರು ಚುನಾವಣೆ ಹಿನ್ನೆಲೆಯಲ್ಲಿ ಹಲವು ಸಾರ್ವಜನಿಕ ಸಮಾರಂಭಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ.

224 ಸದಸ್ಯರಿರುವ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 117 ಸ್ಥಾನದಲ್ಲಿದೆ. ವಿಪಕ್ಷ ಕಾಂಗ್ರೆಸ್‌ 69 ಮತ್ತು ಜೆಡಿಎಸ್‌ 32 ಶಾಸಕ ರನ್ನು ಹೊಂದಿದೆ. ಉಳಿದಂತೆ ಸ್ವತಂತ್ರ ಶಾಸಕರಿದ್ದಾರೆ. 2024 ಲೋಕಸಭೆ ಚುನಾವಣೆಗೂ ಮುನ್ನ, ರಾಜ್ಯದಲ್ಲಿ ತನ್ನ ಸ್ಥಾನ ವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಲಿದೆ.

ಮೂಲಗಳ ಪ್ರಕಾರ ಪಕ್ಷದಲ್ಲಿ ಎಲ್ಲವನ್ನೂ ಸರಿ ಮಾಡುವ ನಿಟ್ಟಿನಲ್ಲಿ ಷಾ ಪ್ರವಾಸವು ಕಮಲ ಪಾಳೆಯಕ್ಕೆ ಮೊಟ್ಟ ಮೊದಲನೆ ಯದಾಗಿದೆ. ಪಕ್ಷದ ಇತರ ಮುಖಂಡರ ಜೊತೆಗೆ ರಾಜ್ಯದಲ್ಲಿ ಚುನಾವಣೆಗೂ ಮುನ್ನ ಹಲವು ಪ್ರವಾಸಗಳನ್ನು ಷಾ ಕೈಗೊಳ್ಳ ಲಿದ್ದಾರೆ. ಸಾರ್ವಜನಿಕ ಸಮಾರಂಭಗಳಲ್ಲಿ, ಇಡೀ ದೇಶದಲ್ಲಿ ಪ್ರಧಾನಿ ಮೋದಿಯ ಕೆಲಸಗಳ ಬಗ್ಗೆ ಮತ್ತು ಕರ್ನಾಟಕದ ಅಭಿವೃದ್ಧಿಗೆ ಪಕ್ಷದ ಕೊಡುಗೆಯ ಬಗ್ಗೆ ಷಾ ಮುಖ್ಯವಾಗಿ ಮಾತನಾಡಲಿದ್ದಾರೆ.

Read E-Paper click here