Wednesday, 9th October 2024

ಆನೇಕಲ್‌ನಲ್ಲಿ ಪೊಲೀಸ್ ಶೂಟೌಟ್

ಆನೇಕಲ್‌: ಮೆಣಸಿಗನಹಳ್ಳಿ ಹೇಮಂತ್ ಕುಮಾರ್ ಕೊಲೆ‌ ಪ್ರಕರಣದ ಆರೋಪಿಗಳು ಅಡಗಿರುವ ಮಾಹಿತಿ ಮೇಲೆ ಸ್ಥಳಕ್ಕೆ ಹೋದ ಪೋಲೀಸರ ಮೇಲೆಯೆ ಹಲ್ಲೆಗೆ ಮುಂದಾಗಿದ್ದಾರೆ.

ಆಗ ಆರೋಪಿಗಳ ಕಾಲಿಗೆ ಆನೇಕಲ್ ಸಬ್ ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಗುಂಡು ಹಾರಿಸಿದ್ದಾರೆ. ವಣಕನಹಳ್ಳಿ ಖಾಸಗಿ ಲೇಔಟ್ ನಲ್ಲಿ ಘಟನೆ

ಆಕಾಶ್ ಗುಂಡೇಟು ತಿಂದಿರುವ ಕೊಲೆ ಆರೋಪಿ. ಸದ್ಯ ಆರೋಪಿ ಆಕಾಶ್ ಗೆ ಆನೇಕಲ್ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ನಾಲ್ಕು ಮಂದಿಯಲ್ಲಿ ಒಬ್ಬನಿಗೆ ಗುಂಡೇಟು ಮತ್ತೊಬ್ಬ ಪೋಲೀಸ್ ಕಸ್ಟಡಿಯಲ್ಲಿ ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.