Thursday, 25th July 2024

ನಟ ಅನಿರುದ್ಧನನ್ನು ಬ್ಯಾನ್‌ ಮಾಡಿಲ್ಲ, 2 ವರ್ಷ ಕಿರುತೆರೆಯಿಂದ ದೂರ ಇಟ್ಟಿದ್ದೇವೆ

ಬೆಂಗಳೂರು: ʻನಟ ಅನಿರುದ್ಧ ಬ್ಯಾನ್‌ ಮಾಡಿಲ್ಲʼ , 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ದೂರು ಇಟ್ಟಿದ್ದಾರೆ ಎಂದು ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌ ಎಂದಿದ್ದಾರೆ.

ಜೊತೆಜೊತೆಯಲ್ಲಿ ಧಾರವಾಹಿ ತಂಡದ ಜೊತೆ ಕಿರಿಕ್‌ ಮಾಡಿಕೊಂಡ ಹಿನ್ನೆಲೆ ಯಲ್ಲಿ ಎರಡು ವರ್ಷ ಕಿರುತೆರೆಯಿಂದ ನಟ ಅನಿರುದ್ಧನನ್ನು ದೂರ ಇಡಲಾ ಗಿದೆ. ಸ್ಕ್ರಿಪ್‌ ವಿಚಾರಕ್ಕೆ ನಿರ್ದೇಶಕ ಮಧು ಅವರಿಗೆ ಮೂರ್ಖ ಎಂದು ಕರೆದು, ನಿಂದಿಸಿದ್ದಾರೆ.

ಧಾರವಾಹಿ ದೃಶ್ಯ ಬದಲಾವಣೆ ಮಾಡುವಂತೆ ಜಗಳವಾಡಿದ್ದಾರೆ. ಇದರಿಂದಾಗಿ ನಟ ಅನಿರುದ್ಧ ಧಾರವಾಹಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಹೀಗೆ ಹಲವು ಬಾರಿ ಆಡಿದ ಜಗಳಕ್ಕೆ ನಿರ್ಮಾಪಕ ಅರೋರು ಜಗದೀಶ್‌ ಬೇಸತ್ತು, ಕಿರುತೆರೆ ನಿರ್ಮಾಪಕ ಸಂಘದ ಸಭೆ ಕೆರೆದು ಚರ್ಚೆ ನಡೆಸಿ ಕಿರುತೆರೆಯಲ್ಲಿ ಅವಕಾಶ ಕೊಡಬಾರದು ನಿರ್ಧರಿಸಿದ್ದಾರೆ.

ನಟ ಅನಿರುದ್ಧನನ್ನು ಬ್ಯಾನ್‌ ಮಾಡಿಲ್ಲʼ 2 ವರ್ಷಗಳ ಕಾಲ ದೂರ ಇಟ್ಟಿದ್ದೇವೆ ಮಾಧ್ಯಮಗಳೊಂದಿಗೆ ಮಾತನಾಡಿ ನಿರ್ಮಾಪಕ ಸಂಘದ ಅಧ್ಯಕ್ಷ ಭಾಸ್ಕರ್‌ ಸ್ಪಷ್ಟನೆ ನೀಡಿದ್ದಾರೆ.

error: Content is protected !!