Saturday, 23rd November 2024

ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರ ಅವಧಿ ವಿಸ್ತರಣೆ

ಬೆಂಗಳೂರು: ನಗರದಲ್ಲಿ ಸಂಚರಿಸುತ್ತಿರುವಂ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರದ ಅವಧಿ ಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಸಂಬಂಧ ಸಾರಿಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಾರ್ಚ್ 31, 2022ರವರೆಗೆ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರ ( ಫಿಟ್ ನೆಸ್ ಸರ್ಟಿಫಿಕೇಟ್ ) ಅವಧಿಯನ್ನು ನೀಡಲಾಗಿತ್ತು.

ಇತ್ತೀಚಿಗೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಆಟೋರಿಕ್ಷಾ ಸಂಘಟನೆಗಳನ್ನು ಒಳಗೊಂಡ ಸಮಿತಿಯ ನಡುವೆ ಸಭೆ ನಡೆದಿತ್ತು. ಈ ಸಭೆಯಲ್ಲಿ ನಿರ್ಣಯಿಸಿದಂತೆ ಎಲ್ ಪಿಜಿ ಕಿಟ್ ಅಳವಡಿಸಿರುವ ಟು-ಸ್ಟ್ರೋಕ್ ಆಟೋ ರಿಕ್ಷಾಗಳ ಅರ್ಹತಾ ಪ್ರಮಾಣ ಪತ್ರವನ್ನು ಆಗಸ್ಟ್ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.