Saturday, 14th December 2024

ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್ ಸಾವು

ಬೆಂಗಳೂರು : ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಮರಾಜಪೇಟೆಯ ಮಾಜಿ ಕಾರ್ಪೋರೇಟರ್ ಪತಿ ಅಯೂಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಚಾಮರಾಜಪೇಟೆಯ ಟಿಪ್ಪುನಗರದ ವಾರ್ಡ್ ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯೂಬ್ ಖಾನ್ ಅವರಿಗೆ, ಅಣ್ಣನ ಪುತ್ರನೇ ಚಾಕುವಿನಿಂದ ಇರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಅಣ್ಣನ ಮಗನೇ ಮಾಜಿ ಕಾರ್ಪೋರೇಟರ್ ಪತಿಗೆ ಚಾಕುವಿನಿಂದ ಇರಿದಿದ್ದರ ಹಿಂದೆ ಆಸ್ತಿ ವಿವಾದ ಕಾರಣ ಎನ್ನಲಾಗಿದೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.