-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳೆಯರನ್ನು ಸೆಳೆದಿದ್ದ ಬನಾರಸ್ ಸೀರೆಗಳು ಇದೀಗ ರೂಪ ಬದಲಿಸಿವೆ. ಸಲ್ವಾರ್ ಸೂಟ್ ಆಗಿ, ಯುವತಿಯರ ಮನ ಗೆದ್ದಿವೆ. ಫೆಸ್ಟಿವ್ ಸೀಸನ್‌ನಲ್ಲಿ (Banaras Salwar Suit Fashion) ಗ್ರ್ಯಾಂಡ್ ಲುಕ್ ನೀಡುತ್ತಿವೆ.
ಗ್ರ್ಯಾಂಡ್ ಬನಾರಸ್ ಸಲ್ವಾರ್ ಸೂಟ್
“ಬನಾರಸ್ ಸೀರೆಗಳು ಮೊದಲಿನಿಂದಲೂ ಗ್ರ್ಯಾಂಡ್ ಲುಕ್ ನೀಡುವ ಸೀರೆಗಳಾಗಿದ್ದು, ಮಾನಿನಿಯರ ವಾರ್ಡ್ರೋಬ್‌ಗಳಲ್ಲಿ ಜಾಗ ಪಡೆದಿವೆ. ಸೀರೆಗಳನ್ನು ಸದಾ ಉಡಲಾಗದಿದ್ದವರಿಗೆಂದು ಇದೀಗ ನಾನಾ ವಿನ್ಯಾಸದ ಬನಾರಸ್ ಸಲ್ವಾರ್ ಸೂಟ್ ಮೆಟಿರಿಯಲ್ ಅಥವಾ ಫ್ಯಾಬ್ರಿಕ್‌ಗಳು ಬಂದಿವೆ. ರೆಡಿಮೇಡ್ ಸಲ್ವಾರ್ ಸೂಟ್‌ಗಳು ಕಾಲಿಟ್ಟಿವೆ. ಇವು ಧರಿಸಿದಾಗ ನೋಡಲು ಗ್ರ್ಯಾಂಡ್ ಲುಕ್ ನೀಡುತ್ತವೆ” ಎನ್ನುತ್ತಾರೆ ಫ್ಯಾಷನಿಸ್ಟ್ ರಿತಿಕ್. ಅವರ ಪ್ರಕಾರ, ಬನಾರಸ್ ಫ್ಯಾಬ್ರಿಕ್‌ನ ಈ ಸಲ್ವಾರ್ ಸೂಟ್‌ಗಳು ಇದೀಗ ಹಳೇ ಪ್ರಿಂಟ್ಸ್‌ಗೆ ವಿರಾಮ ಹಾಕಿ ಕಂಟೆಂಪರರಿ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಅವರು.
ಈ ಸುದ್ದಿಯನ್ನೂ ಓದಿ | Reliance Retail: ಇಸ್ರೇಲ್‌ನ ಡೆಲ್ಟಾ ಗಲಿಲ್ ಜತೆ ಭಾರತದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಘೋಷಿಸಿದ ರಿಲಯನ್ಸ್ ರೀಟೇಲ್
ಟ್ರೆಂಡ್‌ನಲ್ಲಿರುವ ಬನಾರಸ್ ಸಲ್ವಾರ್ ಸೂಟ್ ಪ್ರಿಂಟ್ಸ್
ನಾನಾ ಬಗೆಯ ಹೂಗಳ ಫ್ಲೋರಲ್ ಪ್ರಿಂಟ್ಸ್, ಝರಿ ವರ್ಕ್, ಬುಟ್ಟಾ, ಕಾಂಟ್ರಾಸ್ಟ್ ಕಲರ್ ಬನಾರಸ್ ಸೂಟ್, ಬಾರ್ಡರ್ ಪ್ರಿಂಟ್ಸ್ ಬನಾರಸ್ ಸೂಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡ್ ಲಿಸ್ಟ್‌ನಲ್ಲಿವೆ. ಇನ್ನು ಸಿಲ್ಕ್ ಮೆಟಿರಿಯಲ್‌ನವು ಅತಿ ಹೆಚ್ಚು ಚಾಲ್ತಿಯಲ್ಲಿವೆ. ಗ್ರ್ಯಾಂಡ್ ಲುಕ್ ನೀಡುವಂತಹ ಝರಿ ವರ್ಕ್‌ನ ಸಲ್ವಾರ್ ಸೂಟ್ ಅನಾರ್ಕಲಿ, ಎ ಲೈನ್, ಪಟಿಯಾಲ, ಪಲ್ಹಾಜೋ ಹೀಗೆ ನಾನಾ ಬಗೆಯ ವಿನ್ಯಾಸದಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರು.
ಈದ್-ಮಿಲಾದ್ ಹಬ್ಬಕ್ಕೆ ಎಥ್ನಿಕ್ ಲುಕ್ ಗ್ಯಾರಂಟಿ
“ಬನಾರಸ್ ಸಲ್ವಾರ್ ಸೂಟ್‌ಗಳು ಎಥ್ನಿಕ್ ಲುಕ್ ನೀಡುವುದರಿಂದ ಈ ಫೆಸ್ಟಿವ್ ಸೀಸನ್‌ನಲ್ಲಿ ನಯಾ ಡಿಸೈನ್‌ನಲ್ಲಿ ಹಾಗೂ ಸಾಕಷ್ಟು ಕಲರ್‌ಗಳಲ್ಲಿ ಆಗಮಿಸಿವೆ. ಅದರಲ್ಲೂ ಈದ್-ಮಿಲಾದ್ ಹಬ್ಬ ಸಮೀಪಿಸುತ್ತಿರುವುದು ಈ ಡಿಸೈನ್‌ಗಳು ಹೆಚ್ಚು ಅಪ್ಷನ್‌ನಲ್ಲಿ ಬಿಡುಗಡೆಗೊಳ್ಳಲು ಕಾರಣ” ಎನ್ನುತ್ತಾರೆ ಮಾರಾಟಗಾರರಾದ ರತನ್ ಸೇಠ್.
ಈ ಸುದ್ದಿಯನ್ನೂ ಓದಿ | Apple Intelligence: ಐಫೋನ್, ಐಪ್ಯಾಡ್, ಮ್ಯಾಕ್‌ನಲ್ಲಿ ಶೀಘ್ರವೇ ಲಭ್ಯವಾಗಲಿದೆ ಆಪಲ್ ಇಂಟೆಲಿಜೆನ್ಸ್!
ಬನಾರಸ್ ಸಲ್ವಾರ್ ಸೂಟ್ ಆಯ್ಕೆ ಹಾಗೂ ಸ್ಟೈಲಿಂಗ್‌ಗೆ 5 ಸೂತ್ರ
ಹೆವ್ವಿ ಡಿಸೈನ್‌ನದ್ದಾದಲ್ಲಿ ಆದಷ್ಟೂ ಮಿನಿಮಲ್ ಜ್ಯುವೆಲ್ ಧರಿಸಿ.
ಲೈಟ್‌ವೈಟ್ ಸಲ್ವಾರ್ ಸೂಟ್ ಎಲ್ಲಾ ಸೀಸನ್‌ಗೂ ಹೊಂದುತ್ತದೆ.
ಗ್ರ್ಯಾಂಡ್ ಲುಕ್‌ಗಾಗಿ ಇವನ್ನು ಧರಿಸಬಹುದು.
ನಿಮ್ಮ ಪರ್ಸನಾಲಿಟಿಗೆ ತಕ್ಕಂತಹ ವಿನ್ಯಾಸ ಅಥವಾ ಪ್ರಿಂಟ್ಸ್ ನದ್ದನ್ನು ಕೊಳ್ಳಿ.
ಡಾರ್ಕ್ ಶೇಡ್‌ನವು ಇದೀಗ ಅತಿ ಹೆಚ್ಚು ಪ್ರಚಲಿತದಲ್ಲಿವೆ.
ಈ ಸಲ್ವಾರ್ ಸೂಟ್‌ಗಳೊಂದಿಗೆ ದುಪಟ್ಟಾ ಧರಿಸುವುದು ಮಸ್ಟ್.
ರೆಡಿಮೇಡ್ ಆದಲ್ಲಿ ಟ್ರಯಲ್ ನೋಡಿ ಆಯ್ಕೆ ಮಾಡಿ.