Wednesday, 11th December 2024

ಜು.12 ರಂದು ಚಾಮರಾಜಪೇಟೆ ಬಂದ್ ಗೆ ಕರೆ

ಬೆಂಗಳೂರು : ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ವಿವಾದ ಸಂಬಂಧ ಜು.12 ರಂದು ನಾಗರಿಕ ಒಕ್ಕೂಟದಿಂದ ಚಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ.

ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನ ಮಾಲೀಕತ್ವದ ವಿವಾದ ಸಂಬಂಧ ಬಿಬಿಎಂಪಿ ಹಾಗೂ ವಕ್ಫ್ ಬೋರ್ಡ್ ಗೆ ಮಾಲೀ ಕತ್ವಕ್ಕೆ ಸಂಬಂಧಿಸಿದಂತೆ ದಾಖಲೆ ನೀಡುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ಇದೀಗ ಬಕ್ರೀದ್ ಹಬ್ಬದ ಬಳಿಕ ಜಾಮರಾಜಪೇಟೆ ಬಂದ್ ಗೆ ಕರೆ ನೀಡಲಾಗಿದೆ.