ಬೆಂಗಳೂರು: ಭಾರತದಲ್ಲಿ ಮುಂಚೂಣಿಯಲ್ಲಿ ಇರುವ ದೊಡ್ಡ ಪ್ರಮಾಣದ ಸಮುದಾಯ ಡೆವಲಪರ್‌ಗಳಲ್ಲಿ ಒಂದಾಗಿರುವ ಪ್ರಾವಿಡೆಂಟ್ ಹೌಸಿಂಗ್, ಈ ವಾರಾಂತ್ಯದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಜೆಪಿ ನಗರದಲ್ಲಿ ‘ಪ್ರಾವಿಡೆಂಟ್ ಬೆಂಗಳೂರು ಹೋಮ್ ಹಬ್ಬ’ ಆಯೋಜಿಸಲಿದೆ. ಈ ಹೋಮ್ ಹಬ್ಬದ ಕೊಡುಗೆಗಳಲ್ಲಿ ಹಲವಾರು ಶುಲ್ಕಗಳ ಮನ್ನಾ ಇರಲಿದೆ. ಇದರಿಂದಾಗಿ ಮನೆ ಖರೀದಿಸುವವರು ₹ ೯ ಲಕ್ಷದವರೆಗೆ ಉಳಿತಾಯ ಮಾಡಬಹುದು.
ಹಬ್ಬಕ್ಕೆ ಭೇಟಿ ನೀಡುವವರು, ಬೆಂಗಳೂರು, ಗೋವಾ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ಮಂಗಳೂರು ನಗರಗಳಲ್ಲಿನ ೧೧ ಪ್ರಾವಿಡೆಂಟ್ ಯೋಜನೆಗಳ ಸಂಪರ‍್ಣ ಮಾಹಿತಿ ಪಡೆಯಬಹುದು. ಜೊತೆಗೆ, ಪರ‍್ವಾ ಲ್ಯಾಂಡ್‌ನಿಂದ ರೂಪಿಸಲಾಗಿರುವ ನಿವೇಶನ ಅಭಿವೃದ್ಧಿ ಯೋಜನೆಗಳನ್ನು ಸಹ ಈ ಹಬ್ಬದಲ್ಲಿ ಪ್ರರ‍್ಶಿಸಲಾಗುವುದು.
ಬೆಂಗಳೂರು ಹೋಮ್ ಹಬ್ಬದ ಸಂಭ್ರಮಾಚರಣೆಗಳ ಭಾಗವಾಗಿ, ಪ್ರಾವಿಡೆಂಟ್ ಗ್ರಾಹಕರು ವಿವಿಧ ಕೊಡುಗೆಗಳನ್ನು ನಿರೀಕ್ಷಿಸ ಬಹುದು. ಪ್ರೀಮಿಯಂ ಸ್ಥಳ, ಎತ್ತರದ ಮಹಡಿ ಮತ್ತು. ಕ್ಲಬ್‌ಹೌಸ್ ಸದಸ್ಯತ್ವಕ್ಕೆ ಅನ್ವಯಗೊಳ್ಳುವ ಹೆಚ್ಚುವರಿ ಶುಲ್ಕಗಳನ್ನು ಮನ್ನಾ ಮಾಡಲಾಗುವುದು. ಮೂರು ದಿನಗಳವರೆಗೆ ನಡೆಯಲಿರುವ ‘ಹೋಮ್ ಹಬ್ಬ’ದ ಸಂರ‍್ಭದಲ್ಲಿ ಮನೆ ಖರೀದಿಸುವ ಗ್ರಾಹಕರಿಗೆ ಕಾರ್ ಪರ‍್ಕಿಂಗ್ ಶುಲ್ಕವನ್ನು ಸಹ ಮನ್ನಾ ಮಾಡಲಾಗುವುದು.
ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‌ನ ಸಿಒಒ ಮಲ್ಲಣ್ಣ ಸಾಸಲು ಅವರು ಮಾತನಾಡಿ, ‘ಮನೆಗಳನ್ನು ಖರೀದಿಸುವ ವಿಷಯದಲ್ಲಿ ಬೆಂಗಳೂರಿನ ಮನೆ ಖರೀದಿದಾರರ ಆದ್ಯತೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. ವೆಚ್ಚ ಮಾಡುವ ಪ್ರತಿಯೊಂದು ರೂಪಾಯಿಗೆ ಹೆಚ್ಚಿನ ಮೌಲ್ಯ ಒದಗಿಸುವ ಸುಸ್ಥಿರವಾದ, ಉತ್ತಮವಾಗಿ ವಿನ್ಯಾಸಗೊಳಿಸಿದ ಮನೆಗಳನ್ನು ಖರೀದಿಸುವುದಕ್ಕೆ ಈಗ ಗ್ರಾಹಕರು ಹೆಚ್ಚಿನ ಒಲವು ತೋರುತ್ತಾರೆ.
ಪ್ರಾವಿಡೆಂಟ್ ಇದನ್ನು ಪ್ರಮುಖವಾಗಿ ಪರಿಗಣಿಸಿದೆ. ಪ್ರತಿಯೊಬ್ಬ ಗ್ರಾಹಕರು ಸರಿಸಾಟಿಯಿಲ್ಲದ ಮೌಲ್ಯವನ್ನು ಪಡೆಯಬೇಕು ಮತ್ತು ಅವರು ರ‍್ಚು ಮಾಡುವ ಹಣಕ್ಕೆ ಅವರು ಏನೆಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂಬುದನ್ನು ನಿಖರವಾಗಿ ತಿಳಿದಿರುವು ದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ವಸತಿ ಯೋಜನೆಗಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸ ಗಳನ್ನು ರೂಪಿಸಲು ನಾವು ಪರಿಶ್ರಮಪಟ್ಟಿದ್ದೇವೆ.
ಎಲ್ಲ ಗ್ರಾಹಕರಿಗೆ ‘ಖಂಡಿತವಾಗಿಯೂ ಹೆಚ್ಚು ಸೌಲಭ್ಯ’ ಒದಗಿಸುವುದು ನಮ್ಮ ಬದ್ಧತೆಯಾಗಿದೆ, ‘ಬೆಂಗಳೂರು ಹೋಮ್ ಹಬ್ಬ’ದಲ್ಲಿ ಪ್ರಕಟಿಸಲಾಗುವ ಹಲವಾರು ಕೊಡುಗೆಗಳ ಫಲವಾಗಿ– ಅಲ್ಲಿ ಪ್ರರ‍್ಶನಗೊಳ್ಳುವ ವಿವಿಧ ವಸತಿ ಯೋಜನೆಗಳ ಮನೆಗಳು ಹಲವಾರು ರಿಯಾಯ್ತಿಗಳೊಂದಿಗೆ ಮನೆ ಖರೀದಿದಾರರಿಗೆ ಮತ್ತು ಹೂಡಿಕೆದಾರರಿಗೆ ನಂಬಲಸಾಧ್ಯವಾದ ಅವಕಾಶ ಗಳನ್ನು ಒದಗಿಸಲಿವೆ’ ಎಂದು ಹೇಳಿದ್ದಾರೆ.
ನಾವು ಮೊದಲ ಬಾರಿಗೆ ಪರಿಚಯಿಸಿದ ‘ಬೆಂಗಳೂರು ಹೋಮ್ ಹಬ್ಬ’ದ ಪರಿಕಲ್ಪನೆಗೆ ೨೦೧೭ ರಲ್ಲಿ ಚಾಲನೆ ನೀಡಲಾಗಿತ್ತು. ಅಲ್ಲಿಂದೀಚೆಗೆ, ವಸತಿ ನರ‍್ಮಾಣ ಯೋಜನೆಗಳ ಪುಟ್ಟ ಮಾರುಕಟ್ಟೆಗಳಿಂದ ಗ್ರಾಹಕರನ್ನು ಸೆಳೆಯಲು ನೆರೆಹೊರೆಯಲ್ಲಿ ಇರುವ ಕನ್ವೆನ್ಷನ್ ಹಾಲ್‌ಗಳಲ್ಲಿ ‘ಹೋಮ್ ಹಬ್ಬ’ ಆಯೋಜಿಸಲಾಗುತ್ತಿತ್ತು. ಹಿಂದಿನ ರ‍್ಷದ ಆವೃತ್ತಿಯನ್ನು ಮೈಸೂರು ರಸ್ತೆ ಬಳಿ ಆಯೋಜಿಸಲಾಗಿತ್ತು. ೫೦೦ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಸಾರಕ್ಕಿ ಜಂಕ್ಷನ್ ಮೆಟ್ರೊ ರೈಲು ನಿಲ್ದಾಣದ ಸಮೀಪದಲ್ಲಿ ರುವ ಜೆ.ಪಿ.ನಗರದ ಸಿಂಧೂರ ಕನ್ವೆನ್ಷನ್ ಹಾಲ್‌ನಲ್ಲಿ ಈ ಬಾರಿ ಮೂರು ದಿನಗಳ ಕಾಲ ವಸತಿ ಉತ್ಸವ ನಡೆಯಲಿದೆ.
ಈ ವಸತಿ ಉತ್ಸವದಲ್ಲಿ ಗ್ರಾಹಕರ ವಿವಿಧ ಅಗತ್ಯಗಳನ್ನು ಈಡೇರಿಸುವ ₹ ೩೯.೯೯ ಲಕ್ಷದ ಬೆಲೆಯಿಂದ ಪ್ರಾರಂಭವಾಗುವ ವಿಭಿನ್ನ ಗಾತ್ರದ ಮನೆಗಳನ್ನು ಪ್ರರ‍್ಶಿಸಲಾಗುವುದು. ಸ್ಟುಡಿಯೊ ಅಪರ‍್ಟ್‌ಮೆಂಟ್‌ಗಳಿಂದ ಹಿಡಿದು ೧ ರಿಂದ ೩ ಬಿಎಚ್‌ಕೆ ಮನೆಗಳನ್ನು ಹೊಂದಿರುವ ನಮ್ಮ ವಸತಿ ನರ‍್ಮಾಣ ಯೋಜನೆಗಳು – ಕರ‍್ಯಗತಗೊಳಿಸುವ ಮುಂಚಿನ, ಚಾಲ್ತಿಯಲ್ಲಿ ಇರುವ ಮತ್ತು ನರ‍್ಮಾಣ ಕಾಮಗಾರಿ ಪರ‍್ಣಗೊಂಡು ವಾಸಕ್ಕೆ ಯೋಗ್ಯವಾಗಿರುವ ಹಂತದಲ್ಲಿ ಇವೆ.
ಬೆಂಗಳೂರಿನ ಮನೆ ಖರೀದಿ ಉತ್ಸವಗಳ ಪೈಕಿ ಪ್ರಮುಖವಾಗಿರುವ, ಫೆಬ್ರುವರಿ ೨೪ ರಿಂದ ೨೬ ರವರೆಗೆ ನಡೆಯಲಿರುವ ‘ಬೆಂಗಳೂರು ಹೋಮ್ ಹಬ್ಬ’ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಭಾರಿ ರಿಯಾಯ್ತಿ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಿ.