Monday, 18th November 2024

BBMP News: ಇನ್ನು 30 ವರ್ಷ ಬೆಂಗಳೂರಿನ ಕಸ ವಿಲೇವಾರಿ ಒಂದೇ ಕಂಪನಿಗೆ!

bbmp garbage

ಬೆಂಗಳೂರು: ಬೆಂಗಳೂರಿನ (Bangalore news) ಕಸ ವಿಲೇವಾರಿಯ (Garbage Disposal) ಗುತ್ತಿಗೆಯನ್ನು ಏಕಕಾಲಕ್ಕೆ ಮುಂದಿನ 30 ವರ್ಷಕ್ಕೆ ನೀಡುವುದಕ್ಕೆ ಬಿಬಿಎಂಪಿ (BBMP) ಮುಂದಾಗಿದೆ. ಕಳೆದ ವಾರ ಮಹಾನಗರ ಪಾಲಿಕೆಯು (BBMP news) 30 ವರ್ಷದ ಗುತ್ತಿಗೆ ಸಂಬಂಧ ರಾಜ್ಯ ಸರ್ಕಾರಕ್ಕೆ (State Government) ತ್ಯಾಜ್ಯ ವಿಲೇವಾರಿ ಡ್ರಾಫ್ಟ್ ಸಲ್ಲಿಸಿತ್ತು.

ಇದೀಗ ಪಾಲಿಕೆ ಕಾರ್ಯ ಯೋಜನೆಗೆ ಸರ್ಕಾರ ಒಪ್ಪಿಗೆ ಗ್ರೀನ್ ಸಿಗ್ನಲ್ ನೀಡಿದೆ. ಸರ್ಕಾರ ಈ ಯೋಜನೆಗೆ ಐದೇ ತಿಂಗಳಲ್ಲಿ ಒಪ್ಪಿಗೆ ನೀಡಿ ಜಾರಿಗೆ ಸೂಚಿಸಿದೆ. ಈ ಮೂಲಕ ನಗರದ ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಬಿಬಿಎಂಪಿ ಮಹತ್ವದ ಹೆಜ್ಜೆ ಇಟ್ಟಿದೆ.

30 ವರ್ಷದ ಕಸದ ಟೆಂಡರ್ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ನಾವು ಈ ಬಗ್ಗೆ ಸವಿಸ್ತಾರವಾದ ಡ್ರಾಫ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೆವು. ಇಂದು ಅಧಿಕೃತವಾಗಿ ಒಪ್ಪಿತ ಸಹಿಯೊಂದಿಗೆ ವಾಪಸ್ ನಮ್ಮ‌ ಕೈ ಸೇರಲಿದೆ. ಮುಂದಿ‌ನ 30 ವರ್ಷದ ಕಸ ವಿಲೇವಾರಿ ಸಂಪೂರ್ಣ ಮಾಹಿತಿ ಡ್ರಾಫ್ಟ್ ನಲ್ಲಿ ಉಲ್ಲೇಖಿಸಲಾಗಿದೆ. ಶೀಘ್ರವೇ ಓಪನ್ ಟೆಂಡರ್ ಮಾಡಲು ಮುಂದಾಗುತ್ತೇವೆ. ಕಾನೂನು ಪ್ರಕಾರವೇ ಟೆಂಡರ್‌ಗೆ ಬಿಡ್ ನಡೆಸಿ ಗುತ್ತಿಗೆ ನೀಡುತ್ತೇವೆ ಎಂದು ಬಿಬಿಎಂಪಿ‌ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದರು.

ಬಿಬಿಎಂಪಿ ಕಸ ಡ್ರಾಫ್ಟ್‌ನಲ್ಲಿ ಏನೇನಿದೆ?

  • ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆ 30 ವರ್ಷಕ್ಕೆ ಅನ್ವಯ
  • ಒಂದೇ ಕಂಪೆನಿಗೆ 30 ವರ್ಷಕ್ಕೆ ಕಸ ವಿಲೇವಾರಿ ಟೆಂಡರ್
  • 30 ವರ್ಷದ ಗುತ್ತಿಗೆ ಪಡೆಯಲು ಓಪನ್ ಬಿಡ್ ನಡೆಸಲಿರುವ ಪಾಲಿಕೆ
  • ಅತಿ ಕಡಿಮೆಗೆ ಬಿಡ್ ಮಾಡುವ ಸಂಸ್ಥೆಗೆ ಗುತ್ತಿಗೆ ನೀಡಲು ಪಾಲಿಕೆ ನಿರ್ಧಾರ
  • ಎಂಟು ವಲಯದಲ್ಲಿ ಒಂದು ಕಂಪೆನಿಗೆ ಕಸ ವಿಲೇವಾರಿ ಹೊಣೆ
  • ಮನೆಯಿಂದ ಕಸ ಸಂಗ್ರಹ, ಸಾರಿಗೆ ಹಾಗೂ ವಿಲೇವಾರಿ ಎಲ್ಲವೂ ಗುತ್ತಿಗೆದಾರರದ್ದೇ ಹೊಣೆ
  • ಪಾಲಿಕೆ ವಾಹನಗಳು, ಪೌರಕಾರ್ಮಿಕರು ಬಳಸಲೇ ಬೇಕು ಎನ್ನುವ ಒತ್ತಡವಿಲ್ಲ
  • ಬಳಸಿದರೆ ಅದರ ಸಂಪೂರ್ಣ ನಿರ್ವಹಣೆ ಕೂಡ ಅದೇ ಕಂಪೆನಿಯದ್ದು
  • ಸದ್ಯ ಪ್ರತಿ ದಿನ ನಗರದಲ್ಲಿ 5 ಸಾವಿರ ಅಧಿಕ ಟನ್ ಕಸ ಉತ್ಪತ್ತಿ
  • 5 ಸಾವಿರ ಟನ್ ಲೆಕ್ಕದಲ್ಲಿ ಸದ್ಯ ವಾರ್ಷಿಕವಾಗಿ 480 ಕೋಟಿ ವೆಚ್ಚ
  • ಈ ಹೊಸ ಯೋಜನೆಯಲ್ಲಿ 6,566 ಟನ್ ಲೆಕ್ಕದಲ್ಲಿ ಟೆಂಡರ್ ನೀಡಲು ಮುಂದು
  • ಇದರ ಪ್ರಕಾರ ವಾರ್ಷಿಕವಾಗಿ 730 ಕೋಟಿ ನೀಡಲಿರುವ ಪಾಲಿಕೆ
  • ಪ್ರತಿ ವರ್ಷ ಮೂಲ ವಿಲೇವಾರಿ ಬೆಲೆಗೆ 10% ನಷ್ಟು ಏರಿಕೆ
  • ಸದ್ಯ ದಿನಕ್ಕೆ 1.80 ಕೋಟಿ ಕಸವಿಲೇವಾರಿಗೆ ಖರ್ಚು
  • ಹೊಸ ಯೋಜನೆ ಪ್ರಕಾರ 30 ವರ್ಷಕ್ಕೆ 33 ಕೋಟಿ ಪ್ರತಿ ದಿನ ವೆಚ್ಚ
  • ಅದರಂತೆ 30 ವರ್ಷಕ್ಕೆ ವಾರ್ಷಿಕವಾಗಿ 12 ಸಾವಿರ ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ
  • ಹೊಸ ಪ್ರಸ್ತಾವನೆ ಪ್ರಕಾರ ಪಾಲಿಕೆ ಬೊಕ್ಕಸಕ್ಕೆ ಸುಮಾರು 40% ಹೆಚ್ಚುವರಿ ಹೊರೆ

ಇದನ್ನೂ ಓದಿ: Bengaluru news: ಪರವಾನಗಿ ಇಲ್ಲದ ಪಿಜಿಗಳಿಗೆ ಬಿಬಿಎಂಪಿ ಬೀಗ