ಬೆಂಗಳೂರು: ಬಿಬಿಎಂಪಿ ಎಲೆಕ್ಷನ್ ನಡೆಸಲು ಸಜ್ಜಾಗುತ್ತಿರುವ ಸರ್ಕಾರ, ಕಳೆದ ಗುರುವಾರ ಬಿಬಿಎಂಪಿ ವಾರ್ಡ್ ಮರು
ವಿಂಗಡಣೆ ಮಾಡಿ ಅಂತಿಮ ಆದೇಶ ಪ್ರಕಟಿಸಿದೆ.
198 ಇದ್ದ ವಾರ್ಡ್ ಗಳನ್ನು ಡಿ ಲಿಮಿಟೇಷನ್ ಮಾಡಿ 243 ವಾರ್ಡ್ಗಳಾಗಿ ವಿಂಗಡಿಸಿದೆ. ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಮಾಡಿ, ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ.
ಕೆಲವು ವಾರ್ಡ್ಗಳಿಗೆ ಹಳೇ ಹೆಸರನ್ನೇ ಮರುನಾಮಕರಣ ಮಾಡಲಾಗಿದೆ. ಜನರ ಆಕ್ಷೇಪಕ್ಕೆ ಮಣಿದ ಸರ್ಕಾರದಿಂದ ಡಿ ಲಿಮಿಟೇಷನ್ ನಲ್ಲಿ ಕೆಂಗೇರಿ ವಾರ್ಡ್ ನಲ್ಲೂ ಬದಲಾವಣೆ ಮಾಡಿದೆ. ಕೆಂಗೇರಿ ಉಪನಗರ ವಾರ್ಡ್ ತೆಗೆದು ಹಳೆ ಹೆಸರು ಕೆಂಗೇರಿ ವಾರ್ಡ್ ಎಂದು ಅಂತಿಮಗೊಳಿಸಲಾಗಿದೆ.
ರಾಜ್ಯ ಪತ್ರದಲ್ಲಿ ಬಿಬಿಎಂಪಿ ನೀಡಿದ 24 ವಾರ್ಡ್ ಗಳ ಹೆಸರು ಬದಲಾವಣೆ
ವಾರ್ಡ್ ಸಂಖ್ಯೆ – ಅಂತಿಮ ವರದಿಯ ಹೆಸರು – ಕರಡು ವರದಿಯ ಹೆಸರು
28 ದೊಡ್ಡ ಬಿದರಕಲ್ಲು ಹಂದ್ರಹಳ್ಳಿ
33 ಕೆಂಗೇರಿ ಕೆಂಗೇರಿ ಉಪನಗರ
35 ಹೆಮ್ಮಿಗೆಪುರ ತಲಘಟ್ಟಪುರ
36 ಛತ್ರಪತಿ ಶಿವಾಜಿ ಕನ್ನೇಶ್ವರ ರಾಮ
37 ಚಾಣಕ್ಯ ವೀರಮದಕರಿ
39 ಕನ್ನೇಶ್ವರ ರಾಮ ಚಾಣಕ್ಯ
40 ವೀರಮದಕರಿ ಛತ್ರಪತಿ ಶಿವಾಜಿ
55 ಪುನೀತ್ ರಾಜ್‌ಕುಮಾರ್ ಕಾವೇರಿ ನಗರ
69 ಮನೋರಾಯನಪಾಳ್ಯ ಚೋಳನಗರ
77 ದೇವರಜೀವನಹಳ್ಳಿ ಮೋದಿ ಗಾರ್ಡನ್
84 ರಾಮಮೂರ್ತಿ ನಗರ ಕೌದೆಕೆನಹಳ್ಳಿ
85 ವಿಜಿನಾಪುರ ವಿಜ್ಞಾನಪುರ
87 ಮೇಡಹಳ್ಳಿ ತಂಬುಚಟ್ಟಿಪಾಳ್ಯ
93 ಎಚ್‌ಎಎಲ್ ವಿಮಾನನಿಲ್ದಾಣ
95 ನಾಗವಾರ ಗೋವಿಂದನಪುರ
153 ನಾಗರಬಾವಿ ಕಲ್ಯಾಣ ನಗರ
154 ಚಂದ್ರಲೇಔಟ್ ನಾಗರಬಾವಿ
180 ಅಗರ ವನ್ನಾರ್‌ಪೇಟೆ
183 ನೀಲಸಂದ್ರ ಆಸ್ಟಿನ್‌ಟೌನ್
184 ವನ್ನಾರ್‌ಪೇಟೆ ನೀಲಸಂದ್ರ
220 ಯಲಚೇನಹಳ್ಳಿ ಕನಕನಗರ
221 ಕೋಣನಕುಂಟೆ ಯಲಚೇನಹಳ್ಳಿ
232 ಎಚ್‌ಎಸ್‌ಆರ್ ಸಿಂಗಸಂದ್ರ ಎಚ್‌ಎಸ್‌ಆರ್ ಲೇಔಟ್
241 ಪುಟ್ಟೇನಹಳ್ಳಿ ಸಾರಕ್ಕಿ ಕೆರೆ ಸಾರಕ್ಕಿ ಕೆರೆ.