Sunday, 15th December 2024

Bengaluru News: ಚಿತ್ರಕಲಾ ಪರಿಷತ್‌ನಲ್ಲಿ ‘ಇಂಡಿಯನ್ ಹಾತ್ ಫೆಸ್ಟಿವಲ್’ ಆರಂಭ

Bengaluru News

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸೆ.6ರಿಂದ ಸೆಪ್ಟೆಂಬರ್ 15 ರವರೆಗೆ 10 ದಿನಗಳ ಕರಕುಶಲ ಮೇಳ ʼಇಂಡಿಯನ್ ಹಾತ್ ಫೆಸ್ಟಿವಲ್ʼಗೆ ವಿಧ್ಯುಕ್ತ ಚಾಲನೆ ದೊರೆತಿದೆ (Bengaluru News). ಗೌರಿ, ಗಣೇಶ ಹಬ್ಬದ ವಿಶೇಷಗಳು, ಬಾಗೀನ ಮತ್ತಿತರೆ ವಸ್ತುಗಳು ಲಭ್ಯವಿದೆ.

ಕುಶಲ ಕರ್ಮಿಗಳ ಅಸಾಧಾರಣ ಕೈಚಳಕದಿಂದ ಮೂಡಿ ಬಂದ ವೈವಿಧ್ಯಮಯ ವಸ್ತ್ರ, ಒಡವೆ, ವಿನೂತನ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಮಧ್ಯವರ್ತಿಗಳಿಲ್ಲದೇ ನೇರವಾಗಿ ಕುಶಲ ಕರ್ಮಿಗಳಿಂದ ಗ್ರಾಹಕರಿಗೆ ತಲುಪಿಸಲಾಗುತ್ತಿದೆ.

ವಿಭಿನ್ನವಾದ ದೇವರ ವಿಗ್ರಹಗಳು, ಲಾಫಿಂಗ್ ಬುದ್ಧ, ಕುಂಬಾರಿಕೆಯಲ್ಲಿ ಮೂಡಿಬಂದ ಬಣ್ಣ ಬಣ್ಣದ ವಸ್ತುಗಳು, ಸೀರೆಗಳು, ಕುರ್ತಾಗಳನ್ನೊಳಗೊಂಡ ಒಂದೊಂದು ಮಳಿಗೆಯೂ ವಿಭಿನ್ನವಾಗಿವೆ. ಬೆಂಗಳೂರು ನಗರದ ನಾಗರಿಕರನ್ನು ಮೇಳ ಕೈಬೀಸಿ ಕರೆಯುತ್ತಿದೆ.

ಈ ಸುದ್ದಿಯನ್ನೂ ಓದಿ | BESCOM Cash Counter: ವಿದ್ಯುತ್‌ ಗ್ರಾಹಕರಿಗೆ ಗುಡ್‌ ನ್ಯೂಸ್‌, ಸೆ. 8, 15ರ ಭಾನುವಾರವೂ ತೆರೆದಿರಲಿವೆ ಬೆಸ್ಕಾಂ ಕ್ಯಾಶ್‌ ಕೌಂಟರ್‌

ಕಲಾವಿದೆ ಮಂದಾರ ದೇವರಾಜ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಂದು ವಸ್ತು ಅಮೂಲ್ಯವಾಗಿದ್ದು, ಇವುಗಳನ್ನು ಮನೆಗೆ ಕೊಂಡೊಯ್ಯುವುದು ನಿಜಕ್ಕೂ ಸಂಭ್ರಮ ತರುವ ವಿಷಯ. ಮಹಿಳೆಯರು, ಮಕ್ಕಳು, ಮನೆ ಮಂದಿ ಮಳಿಗೆಗೆ ಆಗಮಿಸಿ ಖರೀದಿಯ ಸಡಗರದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.