Sunday, 15th December 2024

ಟಿ2 ಕುರಿತು ಪ್ರಯಾಣಿಕರಿಗೆ ಸೂಚನೆ ಪ್ರಕಟಿಸಿದ ಬಿಐಎಎಲ್‌

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌೨ನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರು ಟಿ೨ಗೆ ನೇರವಾಗಿ ತೆರಳಬಹುದು.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಐಎಎಲ್‌, ಟಿ೨ನಲ್ಲಿ ಈಗಾಗಲೇ ಏರ್‌ಏಷ್ಯಾ ಇಂಡಿಯಾ ಮತ್ತು ಸ್ಟಾರ್ ಏರ್‌ ದೇಶೀಯ ಏರ್‌ಲೈನ್ಸ್‌ ಕಾರ್ಯಾಚರಣೆ ಶುರು ಮಾಡಿದ್ದಾರೆ. ಈ ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿದ ಪ್ರಯಾಣಿಕರು ಈ ಬಗ್ಗೆ ಮಾಹಿತಿ ಇಲ್ಲದೇ ಟರ್ಮಿನಲ್‌ ೧ಗೆ ತೆರಳುತ್ತಿದ್ದಾರೆ. ಇದು ಪ್ರಯಾಣಿಕರಿಗೆ ಅನಾನುಕೂಲ ನಿರ್ಮಾಣ ಮಾಡುತ್ತಿದೆ. ಏರ್‌ಏಷ್ಯಾ ಇಂಡಿಯಾ ಹಾಗೂ ಸ್ಟಾರ್‌ಏರ್‌ ಏರ್‌ಲೈನ್ಸ್‌ ಎರಡೂ ತಮ್ಮ ಸಂಪೂರ್ಣ ದೇಶಿಯ ಕಾರ್ಯಾಚರಣೆಯನ್ನು ಟಿ೨ಗೆ ಸ್ಥಳಾಂತರಿಸಿದೆ. ಹೀಗಾಗಿ ಈ ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ ಬಳಿಕ ಪ್ರಯಾಣಿಕರು ಒಮ್ಮೆ ಟಿಕೆಟ್‌ ನೋಡಿ ಟರ್ಮಿನಲ್‌ ಗೆ ಪ್ರವೇಶಿಸುವಂತೆ ವಿನಂತಿಸಿದೆ.

ಟಿ1 ಮತ್ತು ಟಿ೨ ಟರ್ಮಿನಲ್ ಗಳು ಒಂದೇ ವಿಮಾನ ನಿಲ್ದಾಣದ ಆವರಣದಲ್ಲಿದ್ದು, ಸುಮಾರು 600 ಮೀಟರ್‌ಗಳ ಅಂತರದಲ್ಲಿದೆ. ಎರಡು ಟರ್ಮಿನಲ್‌ಗಳ ನಡುವಿನ ಸಂಪರ್ಕಕ್ಕಾಗಿ 24X7 ಗಂಟೆ ನಿಯಮಿತ ಆವರ್ತನದಲ್ಲಿ ಸಂಪರ್ಕ ವಾಹನ (ಶಟಲ್ ಬಸ್) ಸೇವೆಗಳು ಲಭ್ಯವಿರುತ್ತವೆ.

T1 ನಲ್ಲಿ, ಸಂಪರ್ಕ ವಾಹನ (ಶಟಲ್ ಬಸ್) ಸೇವೆಗಳು ಕೆಳಗೆ ನಮೂದಿಸಿರುವ ಸ್ಥಳಗಳಿಂದ ಲಭ್ಯವಿರುತ್ತದೆ.
1. ರಿಲೇ ಔಟ್‌ಲೆಟ್‌ನ ಮುಂದಿರುವ ನಿರ್ಗಮನ ವಲಯದ (ಡಿಪಾರ್ಚರ್ ಜೋನ್ ನ) ಒಳಗಿನ ಲೇನ್‌ನಿಂದ.
2. ಕೆರ್ಬ್‌ಸೈಡ್ ನಿಂದ (ಟರ್ಮಿನಲ್‌ 1ನ ಪೂರ್ವ ತುದಿ).

• T2 ನಲ್ಲಿ, ಆಗಮನ ವಲಯದ(ಅರೈವಲ್ಸ್) ಒಳಗಿನ ಲೇನ್‌ನ ಪಿಕ್ ಅಪ್ ಪಾಯಿಂಟ್‌ P16/P17 ನಿಂದ.

ಪ್ರಸ್ತುತ ಟಿ1ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರಿಗೆ ವಾಹನಗಳು ಟಿ2 ನ ಪ್ರಯಾಣಿಕರಿಗೂ ಸಹ ಲಭ್ಯವಿರುತ್ತದೆ. ಏರ್‌ಪೋರ್ಟ್ ಟ್ಯಾಕ್ಸಿಗಳು, ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿಗಳು (ಓಲಾ / ಉಬರ್), ಬಿಎಂಟಿಸಿ ಬಸ್‌, ಕೆಎಸ್‌ಆರ್‌ಟಿಸಿ ಬಸ್‌ಗಳು* ಮತ್ತು ಖಾಸಗಿ ಕಾರುಗಳು ಒಳಗೊಂಡಿವೆ. ಟಿ2ನ ಆಗಮನದ ಮಟ್ಟದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಹ ಲಭ್ಯವಿದೆ.
ನೀವು ಪ್ರಯಾಣಿಸುವ ಟರ್ಮಿನಲ್‌ನಲ್ಲಿನ ಬದಲಾವಣೆಯ ಕುರಿತು ಪ್ರಶ್ನೆ ಅಥವಾ ಕಾಳಜಿ ಹೊಂದಿದ್ದರೆ, ದಯವಿಟ್ಟು ಸಹಾಯಕ್ಕಾಗಿ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.
BLR ವಿಮಾನ ನಿಲ್ದಾಣ
· +91-8884998888 (WhatsApp ಮಾತ್ರ)
· +91-80-22012001/+91-80-66785555
ವಿಮಾನಯಾನ ಸಂಬಂಧಿತ ಪ್ರಶ್ನೆಗಳಿಗೆ ದಯವಿಟ್ಟು ಸಂಪರ್ಕಿಸಿ
· ಸ್ಟಾರ್‌ಏರ್ +91-22-50799555 ಅಥವಾ ಇಮೇಲ್: CustomerCare@starair.in
· ಏರ್‌ಏಷ್ಯಾ ಇಂಡಿಯಾ +91-80-46662222/+91-80-67662222 ಅಥವಾ https://www.airasia.co.in/support

*