Sunday, 15th December 2024

ಬಿಗ್ ಬಾಸ್ ಕನ್ನಡದ 10ನೇ ಆವೃತ್ತಿಯ ಡೇಟ್ ಫಿಕ್ಸ್

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಕನ್ನಡದ 10ನೇ ಆವೃತ್ತಿಯ ಡೇಟ್ ಫಿಕ್ಸ್ ಆಗಿದೆ.
ಇಂದಿನಿಂದ ಸರಿಯಾಗಿ 16 ದಿನಗಳಲ್ಲಿ 10ನೇ ಆವೃತ್ತಿಯ ಬಿಗ್ ಬಾಸ್ ಕನ್ನಡ ಶೋ ಆರಂಭವಾಗಲಿದೆ.
ಈ ಬಾರಿಯದ್ದು ಹ್ಯಾಪಿ ಬಿಗ್ಬಾಸ್ ಥೀಮ್ನಲ್ಲಿ ನಡೆಯಲಿದೆ. ಅಕ್ಟೋಬರ್ 8 ರಿಂದ ದೊಡ್ಮನೆ ಕಾರ್ಯಕ್ರಮ ಬಿಗ್ ಬಾಸ್ ಆರಂಭವಾಗಲಿದೆ. ಮೋಸ್ಟ್​ ಪಾಪ್ಯುಲರ್​ ಕಾರ್ಯ ಕ್ರಮ ಈ ಬಾರಿ 10ನೇ ವರ್ಷಕ್ಕೆ ಕಾಲಿಟ್ಟಿದೆ.

ಈ ಹಿನ್ನೆಲೆಯಲ್ಲಿ ಸಾಕಷ್ಟು ಕೌತುಕ ಮೂಡಿಸಿದೆ. ಅಕ್ಟೋಬರ್ 8 ರಂದು ಕಾರ್ಯಕ್ರಮ ಪ್ರಸಾರವಾಗಲಿದ್ದರೆ, ಅಕ್ಟೋಬರ್ 7 ರಂದು ಲಾಂಚ್ ಶೂಟಿಂಗ್ ನಡೆಯಲಿದೆ ಎಂದು ವರದಿಯಾಗಿದೆ.