Sunday, 15th December 2024

ಬಿಎಂಡಬ್ಲೂ ಬೈಕ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು: ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಿಎಂಡಬ್ಲೂ ಬೈಕ್ ಡಿಕ್ಕಿಯಾದ ಪರಿಣಾಮ, ಅದರಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಯಶವಂತಪುರ ಬಳಿಯ RMC ಯಾರ್ಡ್ ಬಳಿಯಲ್ಲಿ, ಕಂಬಕ್ಕೆ ಬಿಎಂಡಬ್ಲ್ಯೂ ಬೈಕ್ ಡಿಕ್ಕಿ ಯಾದ ಪರಿಣಾಮ, ಮನಮೋಹನ್(31) ಹಾಗೂ ನಿಖಿಲ್ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಯಶವಂತಪುರದಿಂದ ಆರ್ ಎಂ ಸಿ ಯಾರ್ಡ್ ಕಡೆಗೆ ಬಿಎಂಡಬ್ಲ್ಯೂ ಬೈಕ್ ನಲ್ಲಿ ಕುಡಿದ ಮತ್ತಿನಲ್ಲಿ ಮನಮೋ ಹನ್ ಹಾಗೂ ನಿಖಿಲ್ ಸಂಚರಿಸುತ್ತಿದ್ದರು. ಈ ವೇಳೆಯಲ್ಲಿ ನಿಯಂತ್ರಣ ತಪ್ಪಿ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೈಕ್ ಕಂಬಕ್ಕೆ ಡಿಕ್ಕಿಯಾಗಿ ಮೃತಪಟ್ಟಿರುವಂತ ಮನಮೋಹನ್ ಹಾಗೂ ನಿಖಿಲ್ ಮೃತದೇಹವನ್ನು ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಈ ಸಂಬಂಧ ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.