ಬೆಂಗಳೂರು: ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಜಾಗೃತಿ (ಸ್ವೀಪ್) ಬೈಕ್ ಜಾಥಾ ಕಾರ್ಯಕ್ರಮ ಸೋಮವಾರ ನಡೆಯಿತು.
ಮೇ 10 ರಂದು ನಡೆಯುವ ಸಾರ್ವತ್ರಿಕ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸ ಬೇಕೆಂದು ತಾಲ್ಲೂಕಿನ ತಹಶಿಲ್ದಾರರಾದ ಬಿ. ಅರ್ಚನಾ ಭಟ್ ಅವರು ಕರೆ ನೀಡಿದರು.
ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತ ಚುನಾ ವಣಾ ಅಯೋಗ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ತುಮಕೂರು ಮತ್ತು ತಾಲ್ಲೂಕು ಸ್ವೀಪ್ ಸಮಿತಿ ಚಿಕ್ಕನಾಯಕನ ಹಳ್ಳಿ ವತಿಯಿಂದ ಮತದಾನ ಜಾಗೃತಿ ಬೈಕ್ ಜಾಥಾವನ್ನು ತಾಲ್ಲೂಕು ಪಂಚಾಯತ್ ಆವರಣ ದಿಂದ ನಗರದ ದುಗುಡಿಹಳ್ಳಿ, ಶೆಟ್ಟಿಕೆರೆ, ಸಾಸಲು, ಸಿದ್ದರಾಮನಗರ, ವಡೇರಳ್ಳಿ, ಸೋಮಲಾ ಪುರ, ಅಗಸರಹಳ್ಳಿ, ಬ್ಯಾರ್ಡಳ್ಳಿ ಹಾಗೂ ಜೆಸಿ ಪುರ, ಗೋಡೆಕೆರೆ ಮಾರ್ಗವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿಸಿಕೊಡಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ವಸಂತ್ ಕುಮಾರ್ ಅವರು ಮಾತನಾಡಿ, ಮತದಾನ ನಮ್ಮ ಹಕ್ಕು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ತಪ್ಪದೇ ಮತ ಚಲಾಯಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು. ಮೇ 10 ರಂದು ಸಾರ್ವತ್ರಿಕ ಮತದಾನದ ಹಬ್ಬ ಇದೆ ಅದನ್ನು ಎಲ್ಲರೂ ಮನದಟ್ಟು ಮಾಡಿಕೊಂಡು ತಪ್ಪದೇ ಮತ ಚಲಾಯಿಸಿ, ಎಲ್ಲಾ ಜನರು ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದರು.
ತಾಲ್ಲೂಕು ಸಹಾಯಕ ನಿರ್ದೇಶಕರಾದ ಸುರೇಶ್ (ಗ್ರಾ.ಉ) ಮಾತನಾಡಿ, ಯಾವುದೇ ಆಮಿಷಕ್ಕೆ ಬಲಿಯಾಗದೆ ಮತದಾರರು ನೈತಿಕ ಮತದಾನವನ್ನು ಅನುಸರಿಸಬೇಕು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಸರಿಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ 200 ಕ್ಕೂ ಹೆಚ್ಚು ಬೈಕ್ ಸವಾರರು ಭಾಗವಹಿಸಿ ನಗರದಲ್ಲಿ ಚುನಾವಣಾ ಮತದಾನಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಘೋಷಾವಾಕ್ಯಗಳನ್ನು ಕೂಗುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ತಾಲ್ಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು, ತಾಲ್ಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ನೌಕರರು ಮತದಾನದ ಜಾಗೃತಿ ಅಂಗವಾಗಿ ಬೈಕ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.