ಮಾತನಾಡಿದಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ಮೂರು ದಿನಗಳ ಧರಣಿ ನಡೆಸುವುದಾಗಿ ಘೋಷಿಸಿ ದ್ದಾರೆ.
”ನಗರದಲ್ಲಿ ಅಕ್ರಮ ಬೈಕ್ ಟ್ಯಾಕ್ಸಿಗಳ ಓಡಾಟಕ್ಕೆ ಸಾರಿಗೆ ಇಲಾಖೆ ಅನುಮತಿ ನೀಡಿದೆ. ಆಟೋ ರಿಕ್ಷಾ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದೆ. ಸಾರಿಗೆ ಸಚಿವರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಹೇಳಿದ್ದಾರೆ.
“ಬೈಕ್ ಟ್ಯಾಕ್ಸಿಗಳನ್ನು ಓಡಿಸಲು ಅಗ್ರಿಗೇಟರ್‌ಗಳಿಗೆ ನೀಡಿರುವ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ನಾವು ನಾಳೆ ಆಟೋ ರಿಕ್ಷಾಗಳಿಗೆ ಕಪ್ಪು ಬಾವುಟಗಳನ್ನು ಕಟ್ಟಿ ಮೂರು ದಿನಗಳ ಪ್ರತಿಭಟನೆಯನ್ನು ಪ್ರಾರಂಭಿಸುತ್ತೇವೆ. ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡು ತ್ತಿದ್ದೇವೆ. ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯವರೆಗೆ ಮುಷ್ಕರ ನಡೆಸುತ್ತೇವೆ” ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಆಟೋ ಚಾಲಕರ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಸುಮಾರು 21 ಒಕ್ಕೂಟಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.
ಸೋಮವಾರ ಮುಷ್ಕರದ ವೇಳೆ ಬೆಂಗಳೂರಿನಲ್ಲಿ ಸುಮಾರು 2.1 ಲಕ್ಷ ಆಟೋರಿಕ್ಷಾಗಳು ಸೇವೆಯಿಂದ ಹೊರಗುಳಿಯುವ ನಿರೀಕ್ಷೆಯಿದೆ.