Thursday, 12th December 2024

ಟಿ ಶರ್ಟ್ ಬಗ್ಗೆಯಾದರೂ ಮಾತನಾಡಲಿ, ಚಡ್ಡಿ ಬಗ್ಗೆಯಾದರೂ ಮಾತನಾಡಲಿ: ಡಿ.ಕೆ.ಶಿ

ಬೆಂಗಳೂರು: ಬಿಜೆಪಿಯವರು ಬೇಕಾದರೆ ರಾಹುಲ್ ಗಾಂಧಿಯವರ ಟಿ ಶರ್ಟ್ ಬಗ್ಗೆಯಾ ದರೂ ಮಾತನಾಡಲಿ, ಚಡ್ಡಿ ಬಗ್ಗೆಯಾ ದರೂ ಮಾತನಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರು ಏನು ಬೇಕಾದರೂ ಮಾತನಾಡಲಿ, ನಾವು ಅದರ ಬಗ್ಗೆ ಮಾತನಾಡುವು ದಿಲ್ಲ. ರಾಹುಲ್ ಗಾಂಧಿ 46 ಸಾವಿರ ರೂ. ಟೀ ಶರ್ಟ್ ಹಾಕಿದ್ದ ಬಗ್ಗೆ ಮಾತನಾಡುವವರಿಗೆ ಹತ್ತು ಲಕ್ಷ ರೂ. ಕೋಟ್ ಹಾಕಿದ್ದು ಕಾಣುವುದಿಲ್ಲವೇ? ರಾಹುಲ್ ಗಾಂಧಿ ಯವರಿಗೆ ಅಷ್ಟು‌ ಮೊತ್ತದ ಟೀ ಶರ್ಟ್ ಧರಿಸುವ ಅರ್ಹತೆ ಇಲ್ಲವೇ? ಎಂದು ಪ್ರಶ್ನಿಸಿದರು.

ಒಟ್ಟಿನಲ್ಲಿ ಬಿಜೆಪಿಯವರು ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಗಮನಿಸು ತ್ತಿದ್ದಾರೆ ಎಂಬುದು ಇದರಿಂದ ಸಾಬೀತಾ ಗಿದೆ. ಬಿಜೆಪಿಯವರು ಕತ್ತರಿ ಇದ್ದಂತೆ. ಅವರು ದೇಶವನ್ನು ವಿಭಜಿಸುತ್ತಾರೆ. ರಾಹುಲ್ ಗಾಂಧಿ ಸೂಜಿ ಇದ್ದಂತೆ. ಅವರು ದೇಶವನ್ನು ಜೋಡಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ 28 ಶಾಸಕರ ಪೈಕಿ 26 ಶಾಸಕರು ರಿಯಲ್ ಎಸ್ಟೇಟ್ ನಲ್ಲಿ ಇದ್ದಾರೆ ಎಂಬ ಮಾಜಿ ಸಂಸದೆ ರಮ್ಯಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರು ನಮ್ಮ ಮನೆ ಹೆಣ್ಣು ಮಗಳು, ಪಕ್ಷದ ಮುಖಂಡರು, ಮಾಜಿ ಸಂಸದೆ. ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಅವರ ಟ್ವೀಟ್ ಬಗ್ಗೆ ಅವರನ್ನೇ ಕೇಳಿ. ಬೇಕಿದ್ದರೆ ಅವರು ನನ್ನನ್ನು ಕೇಳಲಿ ಎಂದರು.