ಬೆಂಗಳೂರು: ದೊಡ್ಡಮ್ಮನ ಜೊತೆಗೆ ಬೈಕ್ ಮೇಲೆ ತೆರಳುತ್ತಿರುವ ಸಂದರ್ಭ ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಅಯಾನ್ ಎನ್ನುವ ಮಗು ಮೃತಪಟ್ಟಿದೆ.
ಗಾರೆಪಾಳ್ಯ ಜಂಕ್ಷನ್ ಬಳಿ ಘಟನೆ ನಡೆದಿದೆ. ದೊಡ್ಡಮ್ಮನ ಜೊತೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ನಡೆದ ದುರಂತವಾಗಿದೆ.
ಇದೇ ವೇಳೆ ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತಂತೆ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
4 ದಿನಗಳ ಅಂತರದಲ್ಲಿ ಇದು ಎರಡನೇ ಘಟನೆಯಗಿದ್ದು, ಕಳೆದ 4 ದಿನಗಳ ಹಿಂದೆ ಓವರ್ ಟೇಕ್ ಮಾಡಲು ಹೋಗಿ ಬೈಕ್ ಗೆ ಗುದ್ದಿದ್ದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದ, ಘಟನೆ ನಂತರ ಬಸ್ ಚಾಲಕ ಪರಾರಿಯಾಗಿದ್ದ.