ನೀರು ನುಗ್ಗಿರುವ ಮನೆಗಳಿಗೆ 25 ಸಾವಿರ ಪರಿಹಾರ ನೀಡುತ್ತೇವೆ. ನೀರು ನುಗ್ಗಿ ಸಮಸ್ಯೆ ಯಾದವರಿಗೆ ಊಟದ ವ್ಯವಸ್ಥೆ ಮಾಡು ತ್ತೇವೆ. ಅಲ್ಲದೇ ಮನೆಯನ್ನು ಕ್ಲೀನ್ ಮಾಡಿ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ ಒಂದು ವಾರದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವಂತ ಬೇಸಿಗೆ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗುವಂತೆ ಆಗಿದೆ. ದಕ್ಷಿಣ ಒಳನಾಡು, ಕರಾವಳಿ, ಮಲೆನಾಡಿನ ಜಿಲ್ಲೆಗಳ ಜನತೆ ಅಕಾಲಿಕ ಮಳೆಯಿಂದಾಗಿ ಹೈರಾ ಣಾಗಿ ಹೋಗಿದ್ದಾರೆ. ಮಳೆಯ ಆರ್ಭಟಕ್ಕೆ ರಾಜ್ಯದಲ್ಲಿ ಸಿಡಿಲಾಘಾತಕ್ಕೆ ಇಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು, ಕಲಬುರ್ಗಿ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಹಾ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಜನಜೀವನ ಅಸ್ತವ್ಯಸ್ಥ ಗೊಂಡಿದೆ. ರಾಜ್ಯದಲ್ಲಿ ಮಳೆ ಸಂಬಂಧಿ ಕಾರಣಗಳಿಂದಾಗಿ 80ಕ್ಕೂ ಹೆಚ್ಚು ಅಧಿಕ ಮನೆಗಳು ಹಾನಿಗೊಳಗಾಗಿವೆ.
ವಿಜಯಪುರ ಜಿಲ್ಲೆಯಲ್ಲಿ 14 ಕುರಿಗಳು, ರಾಯಚೂರಿನಲ್ಲಿ 10 ಮೇಕೆಗಳು, 10 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ. ಉಳ್ಳಾಲ ಸಮೀಪದ ಕಿನ್ಯಾ ಬೆಳರಿಂಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿತಗೊಂಡಿದೆ.