Sunday, 15th December 2024

ಡಿಕೆ ಶಿವಕುಮಾರ್’ಗೆ ಸಿಬಿಐ ಶಾಕ್: ಪುತ್ರಿ ಐಶ್ವರ್ಯಾಗೆ ನೋಟಿಸ್

ಬೆಂಗಳೂರು : ಪ್ರಜಾಧ್ವನಿ ಯಾತ್ರೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದು, ಐಶ್ವರ್ಯಾ ಪಾವ ತಿಸಿದ್ದ ಫೀಜ್ಹ್ ಬಗ್ಗೆ ಮಾಹಿತಿ ಸಿಬಿಐ ಮಾಹಿತಿ ಕೇಳಿದೆ.

ನನ್ನ ಮಗಳು ಐಶ್ವರ್ಯಾಗೆ ಸಿಬಿಐನವರು ನೋಟಿಸ್ ನೀಡಿದ್ದಾರೆ. ಕಾಲೇಜು ಶುಲ್ಕ ಕಟ್ಟಿದ್ದೆಲ್ಲವನ್ನೂ ಕೇಳುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಇನ್ನೊಂದೆಡೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.27 ರ ಸೋಮವಾರ ವಿಚಾರಣೆಗೆ ಹಾಜ ರಾಗುವಂತೆ ಇಡಿ ಅಧಿಕಾರಿಗಳು ಡಿಕೆಶಿಗೆ ಸಮನ್ಸ್ ನೀಡಿದ್ದಾರೆ.

ದೆಹಲಿಯ ಇಡಿ ಕಚೇರಿಯಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿ ಗಳು ನೋಟಿಸ್ ನೀಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರೇ ಹೇಳಿದ್ದಾರೆ.