Saturday, 26th October 2024

ಕೋರಮಂಗಲ: ಚಾಯ್ ಸುಟ್ಟ ಬಾರ್ ಔಟ್ಲೆಟ್ ಆರಂಭ

•ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ ಜಾಗತಿಕ ಬೆವರೇಜ್ ಬ್ರ್ಯಾಂಡ್ – ಚಾಯ್ ಸುಟ್ಟ ಬಾರ್

•ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಜನರೂ ತುಂಬ ಇಷ್ಟಪಟ್ಟು ಭಾಗವಹಿಸಿದರು.

ಬೆಂಗಳೂರು: ತನ್ನ ಕಡ್ಲ್ ದಿ ಕುಲ್ಹಾದ್ ಯೋಜನೆ ಮತ್ತು ದೃಷ್ಟಿಕೋನದೊಂದಿಗೆ ಐಟಿ ನಗರವಾದ ಬೆಂಗಳೂರಿನಲ್ಲಿ ಚಾಯ್ ಸುಟ್ಟ ಬಾರ್ ಒಂದು ವರ್ಷದ ಹಿಂದೆಯೇ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಈಗ, ಕೋರಮಂಗಲದ ಐಷಾರಾಮಿ ಪ್ರದೇಶ ದಲ್ಲಿ ತನ್ನ ಮಳಿಗೆಯನ್ನು ತೆರೆಯುವ ಮೂಲಕ, ಚಹಾಗಿಂತ ಕಾಫಿಗೆ ಒಲವು ತೋರುವ ಈ ನಗರದ ಮೇಲೆ ತನ್ನ ಹಿಡಿತವನ್ನು ಬಲ ಪಡಿಸಿದೆ.

26 ಮೇ 2022ರಂದು ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಂ. 130, ಕಎಎಚ್ಬಿ ಕಾಲೋನಿ, 17ನೇ ಎಚ್ ಮೇನ್, ಎಂಐಜಿ, 5ನೇ ಬ್ಲಾಕ್, ಕೊರಮಂಗಲ ಈ ವಿಳಾಸದಲ್ಲಿ ಚಾಯ್ ಸುಟ್ಟ ಬಾರ್ ತನ್ನ ಮಳಿಗೆಯನ್ನು ಉದ್ಘಾಟಿಸಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾದ ಉದ್ಘಾಟನಾ ಸಮಾರಂಭ ರಾತ್ರಿ 10.30ರವರೆಗೂ ನಡೆಯಿತು. ಚಹಾ ಮತ್ತು ಕಾಫಿ ಪ್ರಿಯರ ಭಾರೀ ಜನಸ್ತೋಮ ಕಂಡುಬಂತು. ಚಹಾದ ರುಚಿಯನ್ನು ಅವರೆಲ್ಲರೂ ಇಷ್ಟಪಟ್ಟು ಆಸ್ವಾದಿಸಿದರು. ಕಾಫಿಯನ್ನು ಹೆಚ್ಚು ಇಷ್ಟಪಡು ವವರೂ ಚಹಾದ ಸ್ವಾದ ಮತ್ತು ಸುಗಂಧಕ್ಕೆ ಮಾರುಹೋದರು. ಮಳಿಗೆಯ ಒಳಾಂಗಣದಲ್ಲಿದ್ದ ಸಮಾರಂಭದ ಸ್ಟಾರ್, ಅತ್ಯುತ್ತಮವಾಗಿತ್ತು ಹಾಗೂ ಕ್ಲಾಸಿಯಾಗಿತ್ತು. ಆಗಮಿಸಿದ್ದ ಜನರು ಅಲ್ಲಿ ನಿಂತು ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.

ಈ ಅದ್ಭುತ ಪ್ರತಿಕ್ರಿಯೆಯಿಂದ ಮಳಿಗೆಯ ಮಾಲೀಕರು ಪುಳಕಿತರಾದರು. “ಬ್ರ್ಯಾಂಡ್ನ ಮೇಲೆ ಜನರು ಹೊಂದಿರುವ ಪ್ರೀತಿ ಯಿಂದಾಗಿ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದ್ದಾರೆ. ಈ ರೀತಿಯ ಪ್ರೀತಿ ಮತ್ತು ಬೆಂಬಲವು ಈ ಜನರಿಗೆ ಅತ್ಯುತ್ತಮ ಸೇವೆ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ” ಎಂದರು. ಚಾಯ್ದ ಅದ್ಭುತ ಆಶೀರ್ವಾದವನ್ನು ತಮ್ಮ ಹೃದಯದಲ್ಲಿ ಸವಿನೆನಪಾಗಿ ಇರಿಸಿಕೊಂಡಿರುವ ಜನರು ಹಿತವಾದ ಭಾವನೆ ಹಾಗೂ ಹೊಳೆಯುವ ನಗುವಿನೊಂದಿಗೆ ಆಗಮಿಸಿ, ಮಳಿಗೆಗೆ ಶುಭ ಹಾರೈಸಿದರು.

ಹೊರಗೆ ಬಿಸಿಲಿನ ಶಾಖದಿಂದ ಪಾರಾಗಲು, ಜನರಿಗೆ ಚೇತೋಹಾರಿ ಅನುಭವ ನೀಡಲು ಮಳಿಗೆಯು ವಿವಿಧ ಲಸ್ಸಿ ಮತ್ತು ಮೊಜಿಟೋಗಳಂತಹ ಕೆಲವು ಬೇಸಗೆಯ ವಿಶೇಷ ಪಾನೀಯಗಳನ್ನೂ ಪರಿಚಯಿಸಿದೆ. ಕಂಪನಿಯು ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಕುಲ್ಹಾದ್ಗಳನ್ನು ಬಳಸುತ್ತ, 1,500ಕ್ಕೂ ಹೆಚ್ಚು ಕುಂಬಾರ ಕುಟುಂಬಗಳನ್ನು ಬೆಂಬಲಿಸುತ್ತಿದೆ. ದುರ್ಬಲ ವರ್ಗಗಳಿಗೆ ವಿಶೇಷ ಒತ್ತು ನೀಡುತ್ತಿದ್ದು, ಸಮಾಜದ ವಿವಿಧ ವರ್ಗಗಳ 500ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಭಾರತದ ಎಲ್ಲೆಡೆ 300ಕ್ಕೂ ಹೆಚ್ಚು ಮಳಿಗೆಗಳಲ್ಲಿ, 150ಕ್ಕೂ ಹೆಚ್ಚು ನಗರಗಳ ಜನರಿಗೆ ಬ್ರ್ಯಾಂಡ್ನ ಆತ್ಮೀಯ ಚಹಾವನ್ನು ವಿತರಿಸಲಾಗುತ್ತಿದೆ. ದುಬೈ, ಓಮನ್ ಮತ್ತು ನೇಪಾಳ ಮುಂತಾದ ಹಲವು ದೇಶಗಳಲ್ಲೂ ಪ್ರಸಿದ್ಧವಾಗಿದೆ.

ಚಾಯ್ ಸುಟ್ಟ ಬಾರ್ನ ಸಂಸ್ಥಾಪಕ ಅನುಭವ್ ದುಬೆ ಮಾತನಾಡಿ, “ನಮ್ಮ ಕುಲ್ಹಾದ್ ಚಾಯ್ ಬಗ್ಗೆ ಪ್ರಚಾರ ಮಾಡಿ, ಭಾರತದ ಮಣ್ಣಿನ ಪರಿಮಳವನ್ನು ಜಗತ್ತಿನ ಜನರೆಲ್ಲರೂ ಪ್ರತಿ ಗುಟುಕಿನೊಂದಿಗೆ ಆಸ್ವಾದಿಸುವಂತೆ ಮಾಡಲು ನಾವು ಉದ್ದೇಶಿಸಿದ್ದೇವೆ” ಎಂದು ಹೇಳಿದರು. ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ಉತ್ಕೃಷ್ಟ ಅನುಭವವನ್ನು ನೀಡುವುದು ಸಿಎಸ್ಬಿ ತತ್ತ್ವವಾಗಿದೆ. ಸಿಎಸ್ಬಿಯನ್ನು ಜನರ ಸಂತೋಷವನ್ನು ಬೆಳೆಸುವ ಜಾಗತಿಕ ಬ್ರ್ಯಾಂಡ್ ಆಗಿ ಬೆಳೆಸುವುದು, ಈ ಮೂಲಕ ವ್ಯಕ್ತಿ ಹಾಗೂ ಸಮಾಜಕ್ಕೆ ಪ್ರಯೋಜನವನ್ನು ನೀಡುವುದು ನಮ್ಮ ಗುರಿಯಾಗಿದೆ. ಕೋರಮಂಗಲದಲ್ಲಿ ನಮ್ಮ ನವೀನ ಮಳಿಗೆಯೊಂದಿಗೆ ಅಗಾಧವಾಗಿ ಬೆಳೆಯಲು ನಾವು ಆಶಿಸುತ್ತೇವೆ ಮತ್ತು ಚಹಾವನ್ನು ಸಂಭ್ರಮವಾಗಿ ಆಚರಿಸಲು ಬಯಸುತ್ತೇವೆ ಎಂದರು.