ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಂದ್ಗೆ ಸಾರ್ವಜನಿಕರು ಸೇರಿದಂತೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಕರೆ ನೀಡಿದೆ.
ಚಾಮರಾಜಪೇಟೆ 7ನೇ ಕ್ರಾಸ್ನಲ್ಲಿರುವ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಯು ವಂತೆ ಒತ್ತಾಯಿಸಿ ಜು.12ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶಾಂತಿ ಯುತ ಬಂದ್ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ಕೊಟ್ಟಿದೆ.
ಚಾಮರಾಜಪೇಟೆ 7ನೇ ಕ್ರಾಸ್ನಲ್ಲಿರುವ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಿ ಉಳಿಯು ವಂತೆ ಒತ್ತಾಯಿಸಿ ಜು.12ರಂದು ಶಾಂತಿಯುತ ಬಂದ್ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಕರೆ ಕೊಟ್ಟಿದೆ. ಈ ಮೈದಾನವನ್ನ ಎಲ್ಲರೂ ಉಪಯೋಗಿಸ ದಂತೆ ಮಾಡಲು ಬಿಬಿಎಂಪಿ ಕಾರ್ಯಗತ ಮಾಡಬೇಕಿತ್ತು. ಆದರೆ ವಕ್ಫ್ ಬೋರ್ಡ್ ಗೆ ಖಾತೆ ಮಾಡಿಕೊಡಲು ಬಿಬಿಎಂಪಿ ಆಸಕ್ತಿ ತೋರುತ್ತಿದೆ.
ಒಂದು ಸಮುದಾಯವನ್ನ ಓಲೈಕೆ ಮಾಡುವ ಕೆಲಸ ಆಗುತ್ತಿದೆ. ಸ್ಥಳೀಯ ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹಾಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಂದ್ಗೆ ಕರೆ ನೀಡಲಾಗಿದೆ. ನಾಳೆ ಪ್ರತಿಭಟನೆ, ರ್ಯಾಲಿ ಇರೋದಿಲ್ಲ. ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿರುವ ಒಕ್ಕೂಟ, ಕ್ಷೇತ್ರದ ಬ್ಯಾಂಕ್, ಶಾಲಾ-ಕಾಲೇಜುಗಳ ಬಂದ್ಗೂ ಮನವಿ ಮಾಡಿದೆ.